ಕಾಬೂಲ್ ː ಟಿವಿ ಕೇಂದ್ರದ ಮೇಲೆ ಶಸ್ತ್ರಧಾರಿಯಿಂದ ಗುಂಡಿನ ದಾಳಿ

Posted By:
Subscribe to Oneindia Kannada

ಕಾಬೂಲ್, ನವೆಂಬರ್ 07: ಅಫ್ಘಾನಿಸ್ತಾನದ ಷಂಶಾದ್ ಟಿವಿ ಕೇಂದ್ರದ ಮೇಲೆ ಶಸ್ತ್ರಧಾರಿಯಿಂದ ಗುಂಡಿನ ದಾಳಿ ನಡೆದಿದೆ. ಸುಮಾರು 100ಕ್ಕೂ ಅಧಿಕ ಮಂದಿ ಕಟ್ಟಡದಲ್ಲಿದ್ದು, ಹಲವಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

'ನನ್ನ ಸಹೋದ್ಯೋಗಿಗಳು ಇನ್ನೂ ಒಳಗಡೆ ಇದ್ದಾರೆ. ಕೆಲವರು ನನ್ನ ಕಣ್ಮುಂದೆ ಸಾವನ್ನಪ್ಪಿದರು. ನಾನು ಹೇಗೂ ಬಚಾವಾಗಿ ಹೊರ ಬಂದೆ' ಎಂದು ಷಂಶಾದ್ ಟಿವಿಯ ವರದಿಗಾರ ಹಶ್ಮತ್ ಇಸ್ತಾನ್ಕೈಜೈ ಅವರು ಬಿಬಿಸಿಗೆ ತಿಳಿಸಿದ್ದಾರೆ.

Gunmen attack Kabul TV station Shamshad

ಇಸ್ಲಾಮಿಕ್ ಸ್ಟೇಟ್ಸ್, ತಾಲಿಬಾನಿ ಉಗ್ರರಿಂದ ಸತತ ದಾಳಿಯೊಳಗಾಗುತ್ತಿರುವ ಕಾಬೂಲ್ ನಗರ ಮತ್ತೊಮ್ಮೆ ಉಗ್ರರ ಭೀತಿಯಲ್ಲಿದೆ. ಈ ಘಟನೆಯ ಹೊಣೆಯನ್ನು ಇನ್ನೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.

ಅಫ್ಘಾನಿಸ್ತಾನದ ಆಂತರಿಕ ಭದ್ರತಾ ಸಚಿವಾಲಯ ಈ ಬಗ್ಗೆ ಪ್ರತಿಕ್ರಿಯಿಸಿ, ರಾಕೆಟ್ ಗಳನ್ನು ಬಳಸಿ ಟಿವಿ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ದಾಳಿಕೋರರನ್ನು ಹಿಮ್ಮೆಟ್ಟುವಂತೆ ಮಾಡಲು ಸೇನಾಪಡೆ ಯತ್ನಿಸುತ್ತಿದೆ. 20ಕ್ಕೂ ಅಧಿಕ ಉದ್ಯೋಗಿಗಳನ್ನು ಟಿವಿ ಕೇಂದ್ರದಿಂದ ಸುರಕ್ಷಿತವಾಗಿ ಹೊರಕ್ಕೆ ಕರೆ ತರಲಾಗಿದೆ. ದಾಳಿಕೋರರಿಂದ ತಪ್ಪಿಸಿಕೊಳ್ಳುವ ಯತ್ನಿಸಿದ ಒಬ್ಬ ಮಹಿಳಾ ಉದ್ಯೋಗಿ ಸಾವನ್ನಪ್ಪಿದ್ದಾರೆ ಎಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gunmen have attacked a local television station in the Afghan capital Kabul, with reports that people have been killed and injured.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ