Greenland: ಗ್ರೀನ್‌ಲ್ಯಾಂಡ್ ದ್ವೀಪ ಶೀಘ್ರದಲ್ಲೇ ಅಮೆರಿಕ ವಶಕ್ಕೆ? ದ್ವೀಪರಾಷ್ಟ್ರದ ಪ್ರಧಾನಿಯಿಂದ ದೊಡ್ಡ ಸುಳಿವು!
ಗ್ರೀನ್‌ಲ್ಯಾಂಡ್ ಗಲಾಟೆ ದೊಡ್ಡದಾಗುತ್ತಿದೆ, ಈ ತಿಕ್ಕಾಟ ಶೀಘ್ರದಲ್ಲಿ ಮುಗಿಯುವ ಯಾವುದೇ ಲಕ್ಷಣಗಳು ಕೂಡ ಕಾಣಿಸುತ್ತಿಲ್ಲ. ಡೆನ್ಮಾರ್ಕ್ ಆಶ್ರಯದಲ್ಲಿ ಇರುವ ಗ್ರೀನ್‌ಲ್ಯಾಂಡ್ ಸಂಪೂರ್ಣವಾಗಿ ಅಮೆರಿಕದ ವಶಕ್ಕೆ ಬೇಕು ಎಂದು ಡೊನಾಲ್ಡ್ ಟ್ರಂಪ್ ಆಗ್ರಹಿಸುತ್ತಿದ್ದಾರೆ. ಇದಕ್ಕಾಗಿ ಸೇನಾ ಕಾರ್ಯಾಚರಣೆ ಕೂಡ ಕೈಗೊಳ್ಳಲು ಮುಂದಾಗಿದ್ದಾರೆ. ಇಷ್ಟೆಲ್ಲಾ ನಡೆಯುವಾಗಲೇ ದಿಢೀರ್ ಗ್ರೀನ್‌ಲ್ಯಾಂಡ್ ಪ್ರಧಾನ ಮಂತ್ರಿ ಆರ್ಕ್ಟಿಕ್ ದ್ವೀಪದ ಪ್ರಜೆಗಳು ಹಾಗೂ ಅಧಿಕಾರಿ ವರ್ಗ ಸಂಭವನೀಯ ಸೇನಾ ಆಕ್ರಮಣ ಎದುರಿಸಲು ಈಗ ಸಿದ್ಧತೆ ಆರಂಭಿಸಬೇಕಿದೆ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಗ್ರೀನ್‌ಲ್ಯಾಂಡ್ ವಿಚಾರವನ್ನು ಪ್ರಸ್ತಾಪ ಮಾಡುತ್ತಾ, ಆ ಬೃಹತ್ ದ್ವೀಪವನ್ನು ವಶಕ್ಕೆ ಪಡೆಯುವ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಈ ತಿಕ್ಕಾಟ ಕಳೆದ ಕೆಲವು ದಿನಗಳಿಂದ ಮತ್ತಷ್ಟು ಜೋರಾಗಿದ್ದು, ಯಾವುದೇ ಕ್ಷಣದಲ್ಲಿ ಅಮೆರಿಕ ಸೇನೆ ಗ್ರೀನ್‌ಲ್ಯಾಂಡ್ ಮೇಲೆ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಗ್ರೀನ್‌ಲ್ಯಾಂಡ್ ಪ್ರಧಾನ ಮಂತ್ರಿ ಜೆನ್ಸ್-ಫ್ರೆಡ್ರಿಕ್ ನೀಲ್ಸನ್ ಅವರು ಮಹತ್ವದ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮಿಲಿಟರಿ ಸಂಘರ್ಷ ಉಂಟಾಗುವ ಸಾಧ್ಯತೆ ಇಲ್ಲ, ಹೀಗಿದ್ದರೂ ಅದನ್ನು ತಳ್ಳಿಹಾಕಲು ಆಗುವುದಿಲ್ಲ ಎಂದಿದ್ದಾರೆ.

5 ದಿನಕ್ಕೆ ಆಗುವಷ್ಟು ಆಹಾರ ಸಂಗ್ರಹ
ದೈನಂದಿನ ಜೀವನದ ಯಾವುದೇ ಅಡೆತಡೆಗಳಿಗೆ ಜನ ಸಿದ್ಧರಾಗಲು ಸಹಾಯ ಮಾಡಲು ಗ್ರೀನ್‌ಲ್ಯಾಂಡ್ ಸರ್ಕಾರ ಕಾರ್ಯಪಡೆ ರಚನೆ ಮಾಡಲು ಮುಂದಾಗಿದೆ. ಈ ಕಾರ್ಯಪಡೆಯಲ್ಲಿ ಸ್ಥಳೀಯ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಇರಲಿದ್ದು, 5 ದಿನಕ್ಕೆ ಆಗುವಷ್ಟು ಆಹಾರ ಪದಾರ್ಥವನ್ನು ಮನೆಗಳಲ್ಲಿ ಸಂಗ್ರಹಿಸಿ ಎಂದು ಗ್ರೀನ್‌ಲ್ಯಾಂಡ್ ಪ್ರಧಾನ ಮಂತ್ರಿ ಜೆನ್ಸ್-ಫ್ರೆಡ್ರಿಕ್ ನೀಲ್ಸನ್ ಅವರು ಶಿಫಾರಸು ಮಾಡಿದ್ದಾರೆ. ಈ ವಿಚಾರ ನೇರವಾಗಿ ಅಮೆರಿಕ & ಗ್ರೀನ್‌ಲ್ಯಾಂಡ್ ನಡುವೆ ನಡೆಯುವ ಸೇನಾ ತಿಕ್ಕಾಟದ ಮುನ್ಸೂಚನೆ ಆಗಿದೆಯಾ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಡೆನ್ಮಾರ್ಕ್ ಸಾಮ್ರಾಜ್ಯದ ಭಾಗ ಗ್ರೀನ್‌ಲ್ಯಾಂಡ್
57,000 ಜನಸಂಖ್ಯೆ ಹೊಂದಿರುವ ಗ್ರೀನ್‌ಲ್ಯಾಂಡ್ ದ್ವೀಪ ಡೆನ್ಮಾರ್ಕ್ ಸಾಮ್ರಾಜ್ಯದ ಭಾಗವಾಗಿದೆ, ಆದರೆ ರಕ್ಷಣೆ ಮತ್ತು ವಿದೇಶಾಂಗ ನೀತಿ ನೋಡಿಕೊಳ್ಳಲು ತನ್ನದೇ ಸರ್ಕಾರ ಹೊಂದಿದೆ. ಇತ್ತೀಚೆಗೆ ಡೆನ್ಮಾರ್ಕ್ ಸರ್ಕಾರ ಗ್ರೀನ್‌ಲ್ಯಾಂಡ್ ಭಾಗದಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಿದ್ದು, ಆರ್ಕ್ಟಿಕ್ ರಕ್ಷಣೆಗೆ ಕ್ರಮವನ್ನ ಕೈಗೊಂಡಿತ್ತು. ಈಗ ನೋಡಿದರೆ ಅಮೆರಿಕ ಸೇನೆ ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ಎಲ್ಲಾ ರೀತಿಯ ಮುನ್ಸೂಚನೆಗಳು ಸಿಗುತ್ತಿವೆ. ಇದು ಆತಂಕ ಹೆಚ್ಚು ಮಾಡುತ್ತಿದ್ದು, ಗ್ರೀನ್‌ಲ್ಯಾಂಡ್ ಸರ್ಕಾರ ಕೂಡ ಎಚ್ಚರವಾಗಿದೆ. ಯಾವುದೇ ರೀತಿಯ ಸೇನಾ ಕರ್ಯಾಚರಣೆ ಸಮಸ್ಯೆಗಳು ಎದುರಾದರೂ ಅದನ್ನೆಲ್ಲಾ ಎದುರಿಸಿ ನಿಲ್ಲಲು ಮಹತ್ವದ ಪ್ಲಾನಿಂಗ್ ಮಾಡಿದೆ ಗ್ರೀನ್‌ಲ್ಯಾಂಡ್ ಸರ್ಕಾರ.












Click it and Unblock the Notifications