• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದಾದ್ಯಂತ ಕೊರೊನಾ ಮರಣ ಮೃದಂಗ: ಲಕ್ಷ ಮಂದಿ ಸಾವು

|

ನವದೆಹಲಿ, ಏಪ್ರಿಲ್ 11: ಕೊರೊನಾ ವೈರಸ್‌ನಿಂದ ವಿಶ್ವದಾದ್ಯಂತ ಇದುವರೆಗೆ 1 ಲಕ್ಷ ಮಂದಿ ಬಲಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚೀನಾದ ವುಹಾನ್‌ನಲ್ಲಿ ಜನವರಿ 9ರಂದು ಮೊದಲ ಬಲಿಯಾಗಿತ್ತು. ಅಲ್ಲಿ 83 ದಿನಗಳಲ್ಲಿ 50 ಸಾವಿರ ಮಂದಿ ಕೊರೊನಾದಿಂದ ಮೃತಪಟ್ಟಿದ್ದರು. ಗುರುವಾರ ವಿಶ್ವದಾದ್ಯಂತ ಕೊರೊನಾ ವೈರಸ್‌ನಿಂದ 7300 ಮಂದಿ ಸಾವನಪ್ಪಿದ್ದರು. ನಿತ್ಯ ಸಾವಿನ ಸಂಖ್ಯೆ ಶೇ.6 ರಿಂದ 7 ರಷ್ಟು ಹೆಚ್ಚಾಗುತ್ತಲೇ ಇದೆ.

ಕೊರೊನಾ ಲಾಕ್‌ಡೌನ್: ಅಕಾಲಿಕ ತೆರವು ಮಾಡದಿರಲು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಲಂಡನ್‌ನಲ್ಲಿ 1660 ರಲ್ಲಿ ಬಂದಿದ್ದ ಪ್ಲೇಗ್‌ನಿಂದ 1 ಲಕ್ಷ ಮಂದಿ ಮೃತಪಟ್ಟಿದ್ದರು.1918ರಲ್ಲಿ ಬಂದ ಸ್ಪ್ಯಾನಿಷ್ ಫ್ಲೂನಿಂದ 20 ಲಕ್ಷ ಮಂದಿ 1920ರೊಳಗೆ ಸಾವನ್ನಪ್ಪಿದ್ದರು.

ಚೀನಾದ ವುಹಾನ್‌ನಿಂದ ಆರಂಭವಾದ ಕೊರೊನಾ ವೈರಸ್ ಕೊನೆಗೆ ಇಡೀ ವಿಶ್ವವನ್ನೇ ಚಿಂತೆಗೀಡು ಮಾಡಿತ್ತು. 16 ಲಕ್ಷ ಪ್ರಕರಣಗಳಲ್ಲಿ 1 ಲಕ್ಷ ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

50 ರಿಂದ 70 ವರ್ಷದ ಒಳಗಿನ ಶೇ.93 ರಷ್ಟು ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಆದರೆ ಇದು ಕೇವಲ ಆಸ್ಪತ್ರೆಯಲ್ಲಿ ಮೃತಪಟ್ಟವರ ಮಾಹಿತಿಯಾಗಿದೆ. ಮನೆಯಲ್ಲಿ, ನರ್ಸಿಂಗ್ ಹೋಮ್‌ಗಳಲ್ಲಿ ಮೃತಪಟ್ಟವರ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ.

English summary
The number of deaths linked to the novel coronavirus reached 100,000 on Friday, as the tally of cases passed 1.6 million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X