• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರಾನ್‌ ತೈಲ ಟ್ಯಾಂಕರ್‌ನಲ್ಲಿ ಸಿಲುಕಿಕೊಂಡಿದ್ದ 24 ಭಾರತೀಯರ ಬಿಡುಗಡೆ

|

ಲಂಡನ್, ಆಗಸ್ಟ್ 16: ಬ್ರಿಟನ್ ಸಮುದ್ರ ಗಡಿಯ ಹೊರ ವಲಯದಲ್ಲಿ ಇರಾನ್ ತೈಲ ಟ್ಯಾಂಕರ್ ಹಡಗಿನಲ್ಲಿ ಬಂಧಿತರಾಗಿದ್ದ 24 ಭಾರತೀಯರನ್ನು ಗಿಬ್ರಾಲ್ಟರ್ ಸರ್ಕಾರ ಬಿಡುಗಡೆ ಮಾಡಿದೆ.

ಭಾರತೀಯ ವಿದೇಶಾಂಗ ಸಚಿವಾಲಯದ ನಿರಂತರ ಮಧ್ಯಸ್ಥಿಕೆ ಹಾಗೂ ಮಾತುಕತೆ ಪರಿಣಾಮದಿಂದ ಹಡಗಿನ ಕ್ಯಾಪ್ಟನ್ ಸೇರಿದಂತೆ ಎಲ್ಲಾ 24 ಭಾರತೀಯರನ್ನು ಬಿಡುಗಡೆಗೊಳಿಸಲಾಗಿದೆ. ಹಾಗೆ ಅವರ ಮೇಲಿನ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಕೂಡ ರದ್ದುಗೊಳಿಸಲಾಗಿದೆ.

ಅಂಬಾನಿ ಒಪ್ಪಂದದ ಪರಿಣಾಮ: ಭಾರತದ ತೈಲ ಪೂರೈಕೆಯಲ್ಲಿ ಮೊದಲ ಸ್ಥಾನಕ್ಕೆ ಮರಳಿದ ಸೌದಿ

ಕಳೆದ ತಿಂಗಳು ಯುರೋಪ್ ಒಕ್ಕೂಟದ ನಿರ್ಬಂಧದ ಹೊರತಾಗಿಯೂ ಸಿರಿಯಾಕೆ ಇರಾನ್‌ನಿಂದ ತೈಲವನ್ನು ಈ ಹಡಗಿನಲ್ಲಿ ರವಾನಸಲಾಗುತ್ತಿತ್ತು.ಹೀಗಾಗಿ ಯುರೋಪ್ ಪಾಯಿಂಟ್‌ನಲ್ಲಿ ಹಡಗು ಹಾಗೂ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಐರೋಪ್ಯ ಒಕ್ಕೂಟದ ನಿರ್ಬಂಧ ಹೊರತಾಗಿ ಸಿರಿಯಾಕ್ಕೆ ತೈಲ ರವಾನೆ ಮಾಡುವುದಿಲ್ಲ ಮುಚ್ಚಳಿಕೆ ಬರೆದುಕೊಟ್ಟ ಹಿನ್ನೆಲೆಯಲ್ಲಿ ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ.

ಹಡಗಿನಲ್ಲಿ ಮಾಸ್ಟರ್, ಚೀಫ್ ಆಫೀಸರ್, ಹಾಗೂ ಸೆಕೆಂಡ್ ಮೇಟ್ಸ್ ಗಳನ್ನು ಬಂಧಿಸಲಾಗಿತ್ತು. ಇರಾನ್ ಮೇಲೆ ಅಮೆರಿಕಾ ಅಣ್ವಸ್ತ್ರ ಒಪ್ಪಂದ ರದ್ದುಗೊಳಿಸದ ಬಳಿಕ ಅಮೆರಿಕವು ಕೂಡ ಇರಾನ್ ಮೇಲೆ ನಿರ್ಬಂಧ ಹೇರಿತ್ತು. ಇದಾದ ಬಳಿಕ ಅಮೆರಿಕ, ಐರೋಪ್ಯ ಒಕ್ಕೂಟ ಹಾಗೂ ಇರಾನ್ ನಡುವೆ ಈ ರೀತಿಯ ವಾಣಿಜ್ಯ ವ್ಯವಹಾರ ತಿಕ್ಕಾಟಗಳು ನಡೆಯುತ್ತಿದ್ದವು. ಇದರ ಪರಿಣಾಮವಾಗಿ 2 ಹಡಗುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು.

English summary
Gibraltar Authority Released All 24 Indian Crew Members Aboard Seized Iranian Ship, despite a last-minute claim on the vessel by the US Department of Justice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X