ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

85 ರೋಗಿಗಳನ್ನು ಕೊಂದಿದ್ದ ಜರ್ಮನ್ ನರ್ಸ್ ಗೆ ಜೀವಾವಧಿ ಶಿಕ್ಷೆ

|
Google Oneindia Kannada News

ಓಲ್ಡನ್ ಬರ್ಗ್, ಜೂನ್ 7: 85 ರೋಗಿಗಳನ್ನು ಕೊಂದಿದ್ದ ಜರ್ಮನ್‌ ನರ್ಸ್ ನೈಲ್ಸ್‌ ಹೋಗೆಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಜರ್ಮನ್ ನ್ಯಾಯಾಲಯ ತೀರ್ಪು ನೀಡಿದೆ.

ರೋಗಿಗಳ ಜೀವವನ್ನು ಕಾಪಾಡುವವನೇ ಕೊಲೆಪಾತಕಿಯಾದರೆ ಯಾರನ್ನು ನಂಬಬೇಕು ನೀವೇ ಹೇಳಿ. ವೈದ್ಯರಿಗಿಂತಲೂ ನರ್ಸ್‌ನ ಕರ್ತವ್ಯವೇ ಹೆಚ್ಚಿರುತ್ತದೆ. ವೈದ್ಯರು ಒಮ್ಮೆ ತಪಾಸಣೆ ಮಾಡಿ ಔಷಧವನ್ನು ಬರೆದುಕೊಟ್ಟು ಹೊರಟುಬಿಟ್ಟರೆ ಮುಗೀತು ಎಲ್ಲವನ್ನೂ ನರ್ಸ್‌ಗಳೇ ಮಾಡುತ್ತಾರೆ. ಅವರು ರೋಗಿಗಳೊಂದಿಗೆ ಆಪ್ತವಾಗಿರುತ್ತಾರೆ ಕೂಡ.

ವರ್ಜೀನಿಯಾದ ಸರ್ಕಾರಿ ಕಟ್ಟಡದೊಳಗೆ ಶೂಟ್‌ಔಟ್‌: 12 ಮಂದಿ ಸಾವುವರ್ಜೀನಿಯಾದ ಸರ್ಕಾರಿ ಕಟ್ಟಡದೊಳಗೆ ಶೂಟ್‌ಔಟ್‌: 12 ಮಂದಿ ಸಾವು

ಆದರೆ 42 ವರ್ಷದ ನೈಲ್ಸ್ ಕಳೆದ ನಾಲ್ಕು ವರ್ಷಗಳಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 100 ರೋಗಿಗಳ ಸಾವಿಗೆ ಕಾರಣನಾಗಿದ್ದ. ಓಲ್ಡನ್ ಬರ್ಗ್ ಜಿಲ್ಲಾ ನ್ಯಾಯಾಲಯ ಈ ತೀರ್ಪು ನೀಡಿದೆ.

German nurse get life term sentence for killing 85 patients

ನೈಲ್ 34-96 ವರ್ಷದೊಳಗಿನ 100 ಮಂದಿಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. 2000-2005ರವರೆಗೆ ಡೆಲ್‌ಮೆನ್‌ಹೋಸ್ಟ್‌ ಹಾಗೂ ಓಲ್ಡನ್‌ಬರ್ಗ್‌ನ ಎರಡು ಆಸ್ಪತ್ರೆಗಳಲ್ಲಿ 100ಕ್ಕೂ ಹೆಚ್ಚು ರೋಗಿಗಳನ್ನು ಕೊಲೆ ಮಾಡಿದ್ದ.

ಆರು ಆರೋಪಗಳನ್ನು ಎದುರಿಸುತ್ತಿರುವ ನೈಲ್ ,ತಾನೇ ವೈದ್ಯನೆಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಆತ ವೈದ್ಯರು ನೀಡದೇ ಇರುವ 'ನಾನ್ ಪ್ರಿಸ್ಕ್ರೈಬ್ಡ್ ಡ್ರಗ್ಸ್‌'ಗಳನ್ನು ರೋಗಿಗಳಿಗೆ ನೀಡಿ ಅವರ ಸಾವಿಗೆ ಕಾರಣನಾಗುತ್ತಿದ್ದ ಎಂದು ತಿಳಿದುಬಂದಿದೆ.

ಆತ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ರೋಗಿಗಳ ಜೀವವನ್ನು ಉಳಿಸುವ ಕೆಲಸವನ್ನೇ ಮಾಡುತ್ತಿದ್ದ, ಯಾವಾಗ ರೋಗಿಗಳು ತನ್ನ ಕೈಯಿಂದ ಮೃತಪಟ್ಟರೋ ಅಲ್ಲಿಂದ ಸೀರಿಯಲ್ ಕಿಲ್ಲರ್ ಆಗಿಬಿಟ್ಟಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
45 year old nurse Niels Hoegel German nurse get life term sentence for killing 85 patients, was sentence life improsonment at the distrct court of Oldenburg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X