Get Updates
Get notified of breaking news, exclusive insights, and must-see stories!

11 ಮಂದಿಯ ಅತ್ಯಾಚಾರ-ಹತ್ಯೆ ಅಪರಾಧಿಗೆ ಚೀನಾದಲ್ಲಿ ನೇಣು

ಬೀಜಿಂಗ್ (ಚೀನಾ), ಜನವರಿ 3: ಹನ್ನೊಂದು ಮಹಿಳೆಯರನ್ನು ಕೊಂದ ಸರಣಿ ಹಂತಕನಿಗೆ ಗುರುವಾರ ಬೆಳಗ್ಗೆ ಮರಣದಂಡನೆ ಆಗಿದೆ. ಆತ ಮೊದಲ ಕೊಲೆ ಮಾಡಿದ ಮೂರು ದಶಕಗಳ ನಂತರ ಈ ಶಿಕ್ಷೆ ಆಗಿದ್ದು, ಆತನಿಗೆ ಕೋರ್ಟ್ ಮರಣದಂಡನೆ ವಿಧಿಸಿತ್ತು. ಗನ್ಸು ಪ್ರಾಂತ್ಯದ ಬೈಯಿನ್ ನಗರದ ಕೋರ್ಟ್ ಕಳೆದ ವರ್ಷದ ಮಾರ್ಚ್ ನಲ್ಲಿ ಮರಣದಂಡನೆ ಶಿಕ್ಷೆ ಘೋಷಣೆ ಮಾಡಿತ್ತು.

ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತ್ತು. ಐವತ್ನಾಲ್ಕು ವರ್ಷದ ಗಾವ್ ಚೆಂಗ್ ಯಾಂಗ್ 1988 ಹಾಗೂ 2002ನೇ ಇಸವಿ ಮಧ್ಯೆ ‌ಮಹಿಳೆಯರು ಹಾಗೂ ಯುವತಿಯರನ್ನು ಒಳಗೊಂಡಂತೆ 11 ಮಂದಿಯ ಅತ್ಯಾಚಾರ ಹಾಗೂ ಕೊಎಲ್ ಮಾಡಿದ್ದ. ಆ ಕೃತ್ಯಗಳೆಲ್ಲ ಗನ್ಸು ಹಾಗೂ ಮಂಗೋಲಿಯಾ ಭಾಗದಲ್ಲಿ ಎಸಗಿದ್ದ.

ಕಳೆದ ವರ್ಷ ಮಾರ್ಚ್ ನಲ್ಲಿ ಆತನನ್ನು ಅಪರಾಧಿ ಎಂದು ಘೋಷಿಸಿ, ಮರಣದಂಡನೆ ವಿಧಿಸಲಾಯಿತು. ಈತ ಚಿಕ್ಕ ವಯಸ್ಸಿನ ಮಹಿಳೆಯರನ್ನು, ಅದರಲ್ಲೂ ಕೆಂಪು ಬಟ್ಟೆ ದರಿಸಿದವರನ್ನೇ ಗುರಿಯಾಗಿ ಮಾಡಿಕೊಳ್ಳುತ್ತಿದ್ದ. ಅವರನ್ನು ಮನೆಯ ತನಕ ಹಿಂಬಾಲಿಸಿಕೊಂಡು ಹೋಗಿ, ಕತ್ತು ಕತ್ತರಿಸಿ, ದೇಹದ ಭಾಗಗಳನ್ನು ತುಂಡಾಗಿ ಮಾಡುತ್ತಿದ್ದ. ಈತನಿಗೆ ಬಲಿಯಾದ ಅತಿ ಚಿಕ್ಕ ವಯಸ್ಸಿನ ಬಾಲಕಿಗೆ ಎಂಟು ವರ್ಷ ಎಂದು ಮಾಧ್ಯಮದಲ್ಲಿ ವರದಿ ಆಗಿದೆ.

Gao Chengyong, who raped, killed 11 women executed in China

ಆತನಿಗೆ ಬಲಿಯಾದ ಸಂತ್ರಸ್ತೆಯರ ಜನನಾಂಗವನ್ನೇ ಕತ್ತರಿಸಿದ್ದ. ಆತ ಕೊಲೆ ಮಾಡುತ್ತಿದ್ದ ರೀತಿಯೇ ಬಹಳ ಕ್ರೂರವಾಗಿತ್ತು. ಆತನಿಗೆ ಲೈಂಗಿಕ ಉನ್ಮಾದವಿತ್ತು ಹಾಗೂ ಮಹಿಳೆಯರ ಮೇಲೆ ದ್ವೇಷವಿತ್ತು. ಅವನ ಬಗ್ಗೆ ಮಾಹಿತಿ ನೀಡುವವರಿಗೆ ಮೂವತ್ತು ಸಾವಿರ ಅಮೆರಿಕನ್ ಡಾಲರ್ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+