3ನೇ ಮಹಾಯುದ್ಧ: ತೈವಾನ್ ಮುಟ್ಟಿದರೆ ಚೀನಾ ಕಥೆ ಖತಂ!
ಜಪಾನ್: ಜಗತ್ತು ಇಬ್ಭಾಗವಾಗಿ ಮತ್ತೊಂದು ಮಹಾಯುದ್ಧಕ್ಕೆ ರಣಕಹಳೆ ಮೊಳಗುವ ಸಮಯ ಬಂದಂತೆ ಕಾಣುತ್ತಿದೆ. ಇದರ ಮೊದಲ ಭಾಗವಾಗಿ ಜಿ-7 ರಾಷ್ಟ್ರಗಳು ಚೀನಾ & ರಷ್ಯಾಗೆ ಎಚ್ಚರಿಕೆ ನೀಡಿವೆ. ಅದ್ರಲ್ಲೂ ತೈವಾನ್ (Taiwan) ವಿಚಾರದಲ್ಲಿ ಚೀನಾ (China) ತಪ್ಪು ಹೆಜ್ಜೆ ಇಟ್ಟಿದ್ದೇ ಆದರೆ, ತಕ್ಕಶಾಸ್ತಿ ಗ್ಯಾರಂಟಿ ಎಂದಿವೆ ಜಿ-7 ರಾಷ್ಟ್ರಗಳು.
ತೈವಾನ್ ಮತ್ತು ಚೀನಾ ನಡುವೆ ಭೀಕರ ಸಂಘರ್ಷ ಏರ್ಪಡುವ ಲಕ್ಷಣಗಳು ಕಾಣುತ್ತಿವೆ. ಅಕಸ್ಮಾತ್ ಯುದ್ಧ ಆರಂಭವಾದರೆ ಚೀನಾ ತುಂಬಾ ಸಲೀಸಾಗಿ ತೈವಾನ್ ನೆಲವನ್ನು ಗೆದ್ದು ಬರುವುದು ಪಕ್ಕಾ. ಆದರೆ ತೈವಾನ್ ವಿರುದ್ಧ ಚೀನಾ ಯುದ್ಧ ಸಾರಿ, ಹಿಂಸೆಗೆ ಮುಂದಾದರೆ ಅಮೆರಿಕ ಮತ್ತದರ ಗ್ಯಾಂಗ್ ಸುಮ್ಮನೇ ಬಿಡುವುದಿಲ್ಲ. ಡ್ರ್ಯಾಗನ್ ಚೀನಾ ವಿರುದ್ಧ ತೈವಾನ್‌ಗೆ ಬೇಕಾದ ಎಲ್ಲಾ ಯುದ್ಧ ಸಹಾಯ ಮಾಡಲಿವೆ. ಅದನ್ನ ಈಗ ಬಹಿರಂಗವಾಗಿ ಜಿ-7 ಸಭೆಯ ಮೂಲಕ ಹೇಳಲಾಗಿದೆ.

ಚೀನಾ ವಿರುದ್ಧ ಅಮೆರಿಕ ಅಸ್ತ್ರ?
ತೈವಾನ್ ಪರವಾಗಿ ಮಾತನಾಡಿರುವ ಜಿ-7 ರಾಷ್ಟ್ರಗಳ ವಿದೇಶಾಂಗ ಸಚಿವರು ದಕ್ಷಿಣ ಚೀನಾ ಪ್ರದೇಶದ ವಿಚಾರದಲ್ಲಿ ಚೀನಾ ಸುಮ್ಮನೆ ಇರಬೇಕು ಎನ್ನುವಂತೆ ಎಚ್ಚರಿಸಿದ್ದಾರೆ. ದಕ್ಷಿಣ ಚೀನಾ ಸಮುದ್ರದ ಪ್ರದೇಶದಲ್ಲಿ ಭಾರಿ ಚಟುವಟಿಕೆಗಳು ನಡೆಯುವ ಹೊತ್ತಲ್ಲೇ ಇಂತಹ ಹೇಳಿಕೆ ಬಂದಿರುವುದು ಸಂಚಲನ ಸೃಷ್ಟಿಸಿದೆ. ಮತ್ತೊಂದ್ಕಡೆ ಚೀನಾ ಈ ಹೇಳಿಕೆಗೆ ಖಡಕ್ ರಿಯಾಕ್ಷನ್ ನೀಡುವ ನಿರೀಕ್ಷೆ ಕೂಡ ಇದೆ. ಆದರೆ ಈವರೆಗೂ ಡ್ರ್ಯಾಗನ್ ಜಿ-7 ರಾಷ್ಟ್ರಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿಲ್ಲ.
ಯಾರೆಲ್ಲಾ ಈ ಗುಂಪಿನಲ್ಲಿ ಇದ್ದಾರೆ?
ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಹಾಗೂ ಅಮೆರಿಕವನ್ನು ಒಳಗೊಂಡಿರುವ G-7 ರಾಷ್ಟ್ರಗಳ ಒಕ್ಕೂಟ ಚೀನಾ-ರಷ್ಯಾ ವಿರೋಧಿ ಎಂದೇ ಗುರುತಿಸಿಕೊಂಡಿದೆ. ಅದರಲ್ಲೂ ತೈವಾನ್ ವಿಚಾರದಲ್ಲಿ ಈ ರಾಷ್ಟ್ರಗಳು ಚೀನಾ ವಿರುದ್ಧ ಗುಟುರು ಹಾಕುತ್ತಲೇ ಬಂದಿವೆ. ಆದರೆ ಕೆಲ ದಿನಗಳ ಹಿಂದೆ ತೈವಾನ್-ಚೀನಾ ಘರ್ಷಣೆ ವಿಚಾರದಲ್ಲಿ ಫ್ರಾನ್ಸ್ ಅಧ್ಯಕ್ಷ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಮತ್ತೊಂದು ಕಡೆ ಜಿ-7 ರಾಷ್ಟ್ರಗಳ ಸಭೆಯಲ್ಲಿ ತೈವಾನ್ ಪರ ಬ್ಯಾಟ್ ಬೀಸಲಾಗಿದೆ.

ರಷ್ಯಾಗೂ ಎಚ್ಚರಿಕೆ ನೀಡಿದ ಜಿ-7!
ಜಿ-7 ರಾಷ್ಟ್ರಗಳ ಸಭೆಯಲ್ಲಿ ತೈವಾನ್ ಮತ್ತು ಚೀನಾ ವಿಚಾರ ಮಾತ್ರ ಚರ್ಚೆಯಾಗಿಲ್ಲ. ಜೊತೆಗೆ ರಷ್ಯಾ ಹಾಗೂ ಉಕ್ರೇನ್ ಯುದ್ಧ ವಿಚಾರವೂ ಚರ್ಚೆಗೆ ಬಂದಿದೆ. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಗುಟುರು ಹಾಕಿ, ಬಲಪ್ರದರ್ಶನ ತೋರಲು ಮುಂದಾಗಿರುವ ಜಿ-7 ರಾಷ್ಟ್ರಗಳ ವಿದೇಶಾಂಗ ಸಚಿವರು ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಅಕಸ್ಮಾತ್ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರ ಅಥವಾ ಜೈವಿಕ ಶಸ್ತ್ರಾಸ್ತ್ರ ಬಳಸಿದರೆ ತಕ್ಕ ಶಾಸ್ತಿ ಪಕ್ಕಾ ಎಂದಿವೆ.
ಜಿ-7ನಿಂದ ಬತ್ತಿ ಇಡುವ ಕೆಲಸ?
ಈಗಾಗಲೇ ಉಕ್ರೇನ್ ನೆಲದಲ್ಲಿ ಯುದ್ಧದ ಜೋರಾಗಿದೆ. ಪರಿಸ್ಥಿತಿ ಧಗಧಗಿಸುತ್ತಿದ್ದು, ಉಕ್ರೇನ್ ಪ್ರಜೆಗಳು ಪರಿತಪಿಸುತ್ತಿದ್ದಾರೆ. ಆದರೆ ಈ ಹೊತ್ತಲ್ಲಿ ರಷ್ಯಾ ವಿರುದ್ಧ ಇಂತಹ ಹೇಳಿಕೆ ನೀಡುವ ಅಗತ್ಯತೆ ಇತ್ತಾ? ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದನ್ನ ಬಿಟ್ಟು ಉಕ್ರೇನ್ ಮತ್ತು ರಷ್ಯಾ ನಡುವೆ ಸಂಧಾನ ನಡೆಸಿದ್ದರೆ ಉತ್ತಮ ಅಲ್ಲವೆ? ಎಂದು ಜಿ-7 ರಾಷ್ಟ್ರಗಳ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ಜಿ-7ನಿಂದ ಬತ್ತಿ ಇಡುವ ಕೆಲಸ ಇದಾ? ಅಂತಲೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ತೈವಾನ್ ವಿಚಾರದಲ್ಲಿ ಅಮೆರಿಕದ ಕಿತಾಪತಿ?
ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಮತ್ತೆ ಶಾಂತಿ ಕದಡಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕ ಜೊತೆ ಸ್ನೇಹ ಬೆಸೆದ ಮರುಕ್ಷಣವೇ ಯುದ್ಧದ ಭೀತಿ ಆವರಿಸಿತ್ತು. ಆದರೆ ಕೆಲ ದಿನಗಳಿಂದ ಪರಿಸ್ಥಿತಿ ಸರಿ ಹೋಗುತ್ತಿತ್ತು. ಈ ಮಧ್ಯೆ ಅಮೆರಿಕ ಕಳೆದ ಭಾನುವಾರ ತೈವಾನ್ ಬಳಿ ಸೇನಾ ಹಡಗನ್ನು ತಂದು ಶಾಂತಿ ಕದಡಿದೆ ಎಂಬ ಮಾತು ಕೇಳಿಬಂದಿತ್ತು. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಚೀನಾಗೆ ಜಿ-7 ಎಚ್ಚರಿಸಿದೆ.
3ನೇ ಮಹಾಯುದ್ಧಕ್ಕೆ ಇಲ್ಲೇ ಮುನ್ನುಡಿ?
ಚೀನಾ-ತೈವಾನ್ ನಡುವೆ ಆಗಾಗ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಗಂಭೀರವಾಗಿದೆ. ಅದರಲ್ಲೂ ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕಕ್ಕೆ ಭೇಟಿ ನೀಡಿದ ತಕ್ಷಣ ತನ್ನ ಶತ್ರು ರಾಷ್ಟ್ರಕ್ಕೆ ಚೀನಾ ಆಘಾತ ನೀಡಿತ್ತು. ಈಗ ಯುದ್ಧಕ್ಕೆ ಮುಂದಾಗಿರುವುದು 3ನೇ ಮಹಾಯುದ್ಧಕ್ಕೆ ಮುನ್ನುಡಿ ಎಂದೇ ಬಿಂಬಿಸಲಾಗುತ್ತಿದೆ. ಅದರ ನಡುವೆ ಜಿ-7 ರಾಷ್ಟ್ರಗಳ ನಡೆಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಷ್ಯಾ ರೀತಿಯಲ್ಲೇ ಚೀನಾ ಅಟ್ಯಾಕ್?
ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಥೇಟ್ ರಷ್ಯಾ ತನ್ನ ಶತ್ರು ಉಕ್ರೇನ್ ಮೇಲೆ ಎರಗಿದಂತೆ ಚೀನಾ ಕೂಡ ತೈವಾನ್ ವಿರುದ್ಧ ಯುದ್ಧ ಸಾರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಯುದ್ಧ ಆರಂಭವಾದರೆ ಪರಿಸ್ಥಿತಿ ಹೇಗಿರಲಿದೆ ಎಂಬುದರ ಸ್ಯಾಂಪಲ್ ತೋರಿಸಿದೆ ಡ್ರ್ಯಾಗನ್ ಸೇನೆ.
ಇದಿಷ್ಟೂ ಏನೇ ಇರಲಿ, ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ-ಚೀನಾ ವಿರುದ್ಧ ಅದೇನೆ ರಣತಂತ್ರ ರೂಪಿಸಿದರೂ, ಅದಕ್ಕೆ ಪ್ರತಿತಂತ್ರವನ್ನು ರಷ್ಯಾ ಮತ್ತು ಚೀನಾ ಸಿದ್ಧಪಡಿಸುತ್ತಿವೆ. ತೈವಾನ್ ನೆಲವನ್ನು ಹೇಗಾದರೂ ತನ್ನ ವಶ ಮಾಡಿಕೊಳ್ಳಬೇಕು ಎಂಬುದು ಚೀನಾ ನಾಯಕರ ಹಠವಾಗಿದೆ. ಇದೀಗ ಜಿ-7 ರಾಷ್ಟ್ರಗಳು ನೀಡಿರುವ ಎಚ್ಚರಿಕೆಗೆ ಚೀನಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನ ಕಾದು ನೋಡಬೇಕು.
ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕಠಿಣವಾಗುತ್ತಿರುವುದು ಚಿಂತಿಸಬೇಕಾದ ಸಂಗತಿ. ಅಲ್ಲದೆ ಉಕ್ರೇನ್ ವಿಚಾರದಲ್ಲಿ ರಷ್ಯಾಗೂ ಜಿ-7 ರಾಷ್ಟ್ರಗಳು ಎಚ್ಚರಿಕೆ ನೀಡಿರುವುದು ಪುಟಿನ್ ಪಿತ್ತ ಕೆರಳಿಸುವುದು ಪಕ್ಕಾ. ಈಗಾಗಲೇ ಚೀನಾ ಜೊತೆ ಸಂಬಂಧ ಗಟ್ಟಿ ಮಾಡಿಕೊಂಡಿರುವ ಪುಟಿನ್, ಮುಂದಿನ ದಿನಗಳಲ್ಲಿ ಚೀನಾ ಸೇನೆ ಜೊತೆ ಸೇರಿ ತಮ್ಮ ಶತ್ರು ರಾಷ್ಟ್ರಗಳ ಮೇಲೆ ರಷ್ಯಾ ದಾಳಿ ನಡೆಸಿದರೂ ಅಚ್ಚರಿ ಇಲ್ಲ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications