ಅಮೆರಿಕದ ವೈಟ್ ಹೌಸ್ ನಲ್ಲಿ ಟ್ರಂಪ್- ಇವಾಂಕಾ ದೀಪಾವಳಿ

Posted By:
Subscribe to Oneindia Kannada

ವಾಷಿಂಗ್ಟನ್, ಅಕ್ಟೋಬರ್ 19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು- ಉದ್ಯಮಿ ಇವಾಂಕಾ ಮಂಗಳವಾರ ವೈಟ್ ಹೌಸ್ ನಲ್ಲಿ ದೀಪಾವಳಿ ಆಚರಣೆ ವೇಳೆ ತಂದೆಯೊಂದಿಗೆ ಭಾಗಿಯಾದರು. ದೀಪಾವಳಿ ಹಬ್ಬಕ್ಕೆ ಜಗತ್ತಿನಾದ್ಯಂತ ಇರುವ ಭಾರತೀಯರಿಗೆ ಟ್ವಿಟ್ಟರ್ ಮೂಲಕ ಶುಭ ಕೋರಿ, ಮುಂದಿನ ತಿಂಗಳು ಭಾರತದಲ್ಲಿ ನಡೆಯುವ ಜಾಗತಿಕ ಉದ್ಯಮಿಗಳ ಸಮಾವೇಶದಲ್ಲಿ ಭಾಗವಹಿಸುವ ಬಗ್ಗೆ ತಿಳಿಸಿದ್ದಾರೆ.

ದೀಪಾವಳಿಗೆ ಟ್ವಿಟ್ಟರ್ ನಲ್ಲಿ ಶುಭ ಕೋರಿದ ಮೋದಿ, ಕೋವಿಂದ್

ಓವಲ್ ಕಚೇರಿಯಲ್ಲಿ ದೀಪ ಹೊತ್ತಿಸುವ ಮೂಲಕ ದೀಪಾವಳಿ ಹಬ್ಬಕ್ಕೆ ಅಧ್ಯಕ್ಷ ಟ್ರಂಪ್ ಚಾಲನೆ ನೀಡಿದರು. ಅಮೆರಿಕ ಸರಕಾರದ ಆಡಳಿತದಲ್ಲಿರುವ ಭಾರತ ಮೂಲದ ನಿಕಿ ಹಾಲೆ, ಸೀಮಾ ವರ್ಮಾ ಹಾಗೂ ಅಜಿತ್ ಪೈ ಅವರಿಗೆ ಟ್ರಂಪ್ ಹಬ್ಬದ ಶುಭಾಶಯ ಹೇಳಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಸಂಬಂಧ ಗೌರವಿಸುವುದಾಗಿ ತಿಳಿಸಿದ್ದಾರೆ.

From Ivanka Trump - Deepavali Greetings and a message ahead of India visit

"ಭಾರತ-ಅಮೆರಿಕ ಸಮುದಾಯದ ಆಡಳಿತಾಧಿಕಾರಿಗಳ ಜತೆಗೆ ಹಿಂದೂಗಳ ಬೆಳಕಿನ ಹಬ್ಬ ದೀಪಾವಳಿ ಆಚರಿಸುತ್ತಿರುವುದು ಗೌರವದ ವಿಚಾರ" ಎಂದು ತಮ್ಮ ಫೇಸ್ ಬುಕ್ ನಲ್ಲಿ ಡೊನಾಲ್ಡ್ ಟ್ರಂಪ್ ಬರೆದುಕೊಂಡಿದ್ದಾರೆ. ವೈಟ್ ಹೌಸ್ ನಲ್ಲಿ ದೀಪಾವಳಿ ಆಚರಿಸಿದ ವಿಡಿಯೋ ಹಾಗೂ ಟ್ರಂಪ್ ಸಂದೇಶವನ್ನು ರಾಷ್ಟ್ರಾಧ್ಯಕ್ಷರ ಫೇಸ್ ಬುಕ್ ಪುಟದಲ್ಲಿ ಹಾಕಲಾಗಿದೆ.

ಕಳೆದ ವರ್ಷ ದೀಪಾವಳಿ ವೇಳೆಯಲ್ಲಿ ಇವಾಂಕಾ ಟ್ರಂಪ್ ವರ್ಜಿನಿಯಾ ಹಾಗೂ ಫ್ಲೋರಿಡಾದ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
US President Donald Trump's entrepreneur daughter Ivanka, who joined him in Tuesday's Diwali celebrations at the White House, also took to Twitter to wish Indians across the globe a joyous Deepavali.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ