ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ವಿರುದ್ಧ 'ಸ್ಪೈಡರ್ ಮ್ಯಾನ್' ಪ್ರತಿಭಟನೆ

|
Google Oneindia Kannada News

ಡೆಡ್ಲಿ ಕಾಯಿಲೆ ಕೊರೊನಾ ವೈರಸ್ ಪ್ರಪಂಚದಾದ್ಯಂತ ಜನರನ್ನು ಭಯ ಭೀತಿಗೊಳಿದೆ. ಎಲ್ಲರೂ ಕೊರೊನಾ ವೈರಸ್ ಸೋಂಕು ತಗುಲದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಿತ್ತಿದ್ದಾರೆ. ಆದರೆ, ಫ್ರಾನ್ಸ್ ನಲ್ಲಿ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಫ್ರಾನ್ಸ್ ಸ್ಪೈಡರ್ ಮ್ಯಾನ್ ಎಂದೇ ಫೇಮಸ್ ಆಗಿರುವ ವ್ಯಕ್ತಿ ಗಗನಚುಂಬಿ ಕಟ್ಟಡ ಏರುವ ಮೂಲಕ ಕೊರೊನಾ ವೈರಸ್ ವಿರುದ್ಧ ತಮ್ಮ ಪ್ರತಿಭಟನೆ ಮಾಡಿದ್ದಾರೆ. 475 ಅಡಿ ಇರುವ ಕಟ್ಟಡವನ್ನು ಬರೀ 25 ನಿಮಿಷದಲ್ಲಿ ಹತ್ತಿದ್ದಾರೆ. ಹಗ್ಗ ಬಳಸದೇ, ಯಾವುದೇ ಸಹಾಯ ಇಲ್ಲದೆ ಅಷ್ಟೊಂದು ಎತ್ತರದ ಕಟ್ಟಡ ಏರಿದ್ದಾರೆ.

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ಹೇಳುವುದೇನು?ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ಹೇಳುವುದೇನು?

''ಇಂದು ಹೆಚ್ಚು ಸಾಂಕ್ರಾಮಿಕವೆಂದರೆ ಕೊರೊನಾ ವೈರಸ್ ಅಲ್ಲ. ಅದರ ಭಯ. ಈ ಕಾಯಿಲೆಯಿಂದ ಭಯಭೀತರಾಗಿರುವ ಸುಮಾರು ಮೂರು ಶತಕೋಟಿ ಜನರಿರಬಹುದು. ಇದರ ನಂತರವೂ, ನಾವು ಅವನ್ನು ನಿಲ್ಲಿಸಲು ಸಾಧ್ಯವಿಲ್ಲ.'' ಎಂದು ತಮ್ಮ ಪ್ರತಿಭಟನೆಯ ಕಾರಣವನ್ನು ಅವರು ತಿಳಿಸಿದ್ದಾರೆ.

French Spiderman Protest Against Coronavirus

''ನಾನು ಮಾಡುವ ಕೆಲಸಕ್ಕೆ ಒಂದು ನಿರ್ದಿಷ್ಟ ಸಾದೃಶ್ಯವಿದೆ. ಹಗ್ಗವಿಲ್ಲದೆ ಹತ್ತುವುದು, ಸ್ವಲ್ಪ ಭಯವನ್ನು ಉಂಟುಮಾಡುತ್ತದೆ. ಮತ್ತು ಕೊರೊನಾ ವೈರಸ್‌ನಲ್ಲಿಯೂ ಅದೇ ಸಂಭವಿಸುತ್ತದೆ.'' ಎಂದು ವೈರಸ್ ಬಗ್ಗೆ ಇದ್ದ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

24 ಗಂಟೆಗಳಲ್ಲಿ ಕೊರೊನಾ ವೈರಸ್ ಗೆ 15 ಬಲಿ; ಇದು ಚೀನಾ ಕಥೆಯಲ್ಲ24 ಗಂಟೆಗಳಲ್ಲಿ ಕೊರೊನಾ ವೈರಸ್ ಗೆ 15 ಬಲಿ; ಇದು ಚೀನಾ ಕಥೆಯಲ್ಲ

ಫ್ರಾನ್ಸ್ ಸ್ಪೈಡರ್ ಮ್ಯಾನ್ ಇದೇ ರೀತಿ ಅನೇಕ ಬಾರಿ ಕಟ್ಟಡಗಳನ್ನು ಏರಿ ಅಚ್ಚರಿ ಉಂಟು ಮಾಡಿದ್ದಾರೆ. ಇದೀಗ 475 ಅಡಿ ಬಿಲ್ಡಿಂಗ್ ಹತ್ತುವಾಗಲು ಜನರು ಅವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು.

English summary
French Spiderman protest against coronavirus. He climbs 475 foot tower in 25 minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X