ಅಮೆರಿಕದ ಗುಲಾಮಗಿರಿ ಬೇಡ: ಚೀನಾ ಜೊತೆ ಸೇರುತ್ತಾ ಫ್ರಾನ್ಸ್?

ಆಂಸ್ಟರ್ಡ್ಯಾಮ್, ನೆದರ್ಲ್ಯಾಂಡ್ಸ್: ಅಮೆರಿಕ-ಫ್ರಾನ್ಸ್ ಸಂಬಂಧ ಹಾಳಾಗಿ ಹೋಗುವ ಎಲ್ಲಾ ಲಕ್ಷಣಗಳು ಈಗ ಗೋಚರಿಸುತ್ತಿದೆ. ಈ ನಡುವೆ ಅಮೆರಿಕದ ಜೊತೆ ನಾವು ಸ್ನೇಹ ಮಾಡಿದ್ದೇವೆ, ಹಾಗಂತ ಅಮೆರಿಕದ ಗುಲಾಮರಾಗಿ ಬದುಕಬೇಕಿಲ್ಲ ಎನ್ನುವ ಮೂಲಕ ಫ್ರಾನ್ಸ್ (France) ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ (Macron) ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಚೀನಾಗೆ ಭೇಟಿ ನೀಡಿ ಬರುವಾಗ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ವಿಶೇಷ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಇಮ್ಯಾನುಯೆಲ್ ಮ್ಯಾಕ್ರಾನ್, ಯುರೋಪ್ (Europe) ರಾಷ್ಟ್ರಗಳು ಅಮೆರಿಕದ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ಹಾಗೇ ಮತ್ತೊಂದೆಡೆ ತೈವಾನ್ ವಿಚಾರದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ಚೀನಾ (China) ಮತ್ತು ಅಮೆರಿಕ ಮಧ್ಯೆ ಯುರೋಪ್ ದೇಶಗಳು ತಲೆಹಾಕಬಾರದು ಎಂದು ಸಲಹೆ ನೀಡಿದ್ದರು. ಈ ಕಾರಣಕ್ಕೆ ಅಮೆರಿಕ ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಉರಿದು ಬೀಳುತ್ತಿದೆ. ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್.

French President Macron replies America and Trump for their comments

ಬೆಂಕಿ ಹಚ್ಚಿದ್ದೇ ಡೊನಾಲ್ಡ್ ಟ್ರಂಪ್!

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಹೇಳಿಕೆಗೆ ಅಮೆರಿಕ ಸೌಮ್ಯವಾಗಿ ಪ್ರತಿಕ್ರಿಯೆ ನೀಡಿತ್ತು. ಯಾವುದೇ ಒಂದು ಸ್ನೇಹಿತ ದೇಶ, ಇನ್ನೊಂದು ದೇಶದ ವಿರುದ್ಧ ದಿಢೀರ್ ಹೇಳಿಕೆ ನೀಡಿದಾಗ ಸೌಮ್ಯವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತದೆ. ಇಲ್ಲೂ ಅದೇ ರೀತಿ ಪ್ರಯತ್ನ ನಡೆದಿತ್ತಾದರೂ, ವಿವಾದಗಳ ಸರದಾರ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ವಿರುದ್ಧ ರೊಚ್ಚಿಗೆದ್ದು ಬಾಯಿಗೆ ಬಂದಂತೆ ಮಾತನಾಡಿದ್ದರು. ಅದೇ ಹೇಳಿಕೆ ಈಗ ತಿರುಗುಬಾಣ ಆಗುವ ಎಲ್ಲಾ ಮುನ್ಸೂಚನೆ ನೀಡಿದೆ.

ಅಮೆರಿಕ-ಫ್ರಾನ್ಸ್ ಸಂಬಂಧಕ್ಕೆ ಕೊಳ್ಳಿ?

ಮ್ಯಾಕ್ರಾನ್ ಬಗ್ಗೆ ಟ್ರಂಪ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಕಾರಣಕ್ಕೆ ಫ್ರಾನ್ಸ್ ಅಧ್ಯಕ್ಷರು ಕೆರಳಿದಂತೆ ಕಾಣುತ್ತಿದೆ. ವಿಶೇಷ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಕುರಿತು ಮಾತನಾಡುತ್ತಾ, ಅವನು ನನ್ನ ಆತ್ಮೀಯ ಸ್ನೇಹಿತನಾಗಿದ್ದ ಆದರೆ ಚೀನಾ ಜೊತೆ ಸೇರಿದ್ದಾನೆ ಎಂದಿದ್ದರು. ಇಷ್ಟಕ್ಕೇ ಟ್ರಂಪ್ ಮಾತು ಮುಗಿದಿದ್ದರೆ ಏನೂ ಆಗುತ್ತಿರಲಿಲ್ಲ, ಆದರೆ ಫ್ರಾನ್ಸ್ ಅಧ್ಯಕ್ಷರ ಬಗ್ಗೆ ಬಳಸಬಾರದ ಪದಗಳ ಬಳಕೆ ಮಾಡಿ ಮತ್ತೊಮ್ಮೆ ಅಮೆರಿಕದ ಮಾನ ಹರಾಜು ಹಾಕಿದ್ದಾರೆ ಟ್ರಂಪ್.

French President Macron replies America and Trump for their comments

'ನಾವು ಅಮೆರಿಕದ ಗುಲಾಮರಲ್ಲ'

ನೆದರ್ಲ್ಯಾಂಡ್ಸ್ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅಮೆರಿಕ ವಿರುದ್ಧ ಮತ್ತೊಮ್ಮೆ ರೊಚ್ಚಿಗೆದ್ದಿದ್ದಾರೆ. 23 ವರ್ಷಗಳ ನಂತರ ಫ್ರಾನ್ಸ್ ಅಧ್ಯಕ್ಷರೊಬ್ಬರು ನೆದರ್ಲ್ಯಾಂಡ್ಸ್ ಪ್ರವಾಸ ಮಾಡಿದ್ದಾರೆ. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮ್ಯಾಕ್ರಾನ್, ನಾವು ಅಮೆರಿಕದ ಜೊತೆ ಸ್ನೇಹ ಮಾಡಿದ್ದೇವೆ ಅಂದ ಮಾತ್ರಕ್ಕೆ ಅವರ ವಸಾಹತು ಅಲ್ಲ. ಗುಲಾಮಗಿರಿ ಮಾಡುವ ಅಗತ್ಯತೆ ನಮಗಿಲ್ಲ ಎನ್ನುವ ಮೂಲಕ ಟ್ರಂಪ್ ಹೇಳಿಕೆಗೆ ಸರಿಯಾಗೇ ತಿರುಗೇಟು ನೀಡಿದ್ದಾರೆ. ಇದು ಅಮೆರಿಕದ ಆಡಳಿತಕ್ಕೆ ಇರಿಸು-ಮುರಿಸು ಉಂಟುಮಾಡಿದೆ.

ಇಷ್ಟೆಲ್ಲಾ ಬೆಳವಣಿಗೆಯನ್ನ ಪರಿಗಣಿಸಿ ಹೇಳುವುದಾದರೆ ಮತ್ತೆ ಟ್ರಂಪ್ ಇರಲಾರದೆ ಅಮೆರಿಕದ ಸ್ವಾಭಿಮಾನಕ್ಕೆ ಇರುವೆ ಬಿಟ್ಟಿದ್ದಾರೆ. ಈಗಾಗಲೇ ಹಲವು ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕ, ಯುರೋಪ್‌ನ ಶಕ್ತಿಶಾಲಿ ರಾಷ್ಟ್ರದ ಪ್ರಥಮ ಪ್ರಜೆಯನ್ನೇ ಎದುರು ಹಾಕಿಕೊಳ್ಳುವ ಸಾಹಸ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಮತ್ತೊಂದು ಕಡೆ ಅಕಸ್ಮಾತ್ ಚೀನಾ ಮತ್ತು ರಷ್ಯಾ ಜೊತೆ ಫ್ರಾನ್ಸ್ ಅಧಿಕೃತವಾಗಿ ಕೈಜೋಡಿಸಿದರೆ, ಯುರೋಪ್ ಭಾಗದಲ್ಲಿ ಅಮೆರಿಕದ ಶಕ್ತಿ ಸಂಪೂರ್ಣವಾಗಿ ಕುಗ್ಗಿ ಹೋಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+