ಪಾಕಿಸ್ತಾನವು ಭಯೋತ್ಪಾದಕರ ಗಾಡ್‌ಫಾದರ್‌ : ಎಫ್‌ಎಟಿಎಫ್‌ ವರದಿ

ನವ ದೆಹಲಿ, ಜೂನ್ 30: ಪಾಕಿಸ್ತಾನ ದೇಶವು ಉಗ್ರರ ಪಾಲಿಗೆ ಗಾಡ್‌ಫಾದರ್, ಅದು ಉಗ್ರರನ್ನು ಸಾಕುತ್ತಿದೆ ಎಂದು ಫ್ರಾನ್ಸ್‌ ಮೂಲಕ ಅಂತರರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್) ಸಂಸ್ಥೆ ವರದಿ ಮಾಡಿದೆ.

ಪಾಕಿಸ್ತಾನವು ಉಗ್ರರರಿಗೆ ಹಣಕಾಸು ನೆರವು ನೀಡುತ್ತಿದೆ ಎಂದು ಸಂಸ್ಥೆ ಹೇಳಿದ್ದು, ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ (ಉಗ್ರರಿಗೆ ನೆರವು ನೀಡುತ್ತಿರುವ ರಾಷ್ಟ್ರಗಳ ಪಟ್ಟಿ)ಗೆ ಸೇರಿಸಿದೆ. ಇದೇ ಸಂಸ್ಥೆ ಹಿಂದೆ ಕೂಡ ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರಿಸಿತ್ತು.

ಫ್ರಾನ್ಸ್‌ನ ಈ ಕ್ರಮವನ್ನು ಭಾರತವು ಸ್ವಾಗತಿಸಿದ್ದು, ಪಾಕಿಸ್ತಾನದ ಸುಳ್ಳು ಬಹಿರಂಗವಾಗಿದ್ದು, ವಿಶ್ವಸಂಸ್ಥೆ ಗುರುತಿಸಿರುವ ಅತಿ ಭಯಾನಕ ಉಗ್ರರು ಮತ್ತು ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ನಿರಂತರವಾಗಿ ಧನ ಸಹಾಯ ಮಾಡುತ್ತಲೇ ಬಂದಿದೆ' ಎಂದು ಭಾರತದ ವಕ್ತಾರರು ಹೇಳಿದ್ದಾರೆ.

Frances AATF put Pakistan on the terror watch list

ಲಷ್ಕರ್-ಎ-ತೊಯಿಬಾ, ಜಮಾತ್-ಉದ್-ದವಾ, ಜೈಷೆ ಮೊಹಮ್ಮದ್ ಉಗ್ರ ಸಂಘಟನೆಗಳು ನಿರ್ಭೀತಿಯಿಂದ ಕಾರ್ಯ ನಿರ್ವಹಿಸುತ್ತಿವೆ. ಅಂತರರಾಷ್ಟ್ರೀಯ ಉಗ್ರ ಹಫೀಜ್ ಸಯ್ಯದ್ ರಾಜಾರೋಷವಾಗಿ ಪಾಕಿಸ್ತಾನದಲ್ಲಿ ತಿರುಗಾಡುತ್ತಿದ್ದು. ಪಾಕಿಸ್ತಾನ ಈ ವಿಷಯದಲ್ಲಿ ತನ್ನ ಬದ್ಧತೆ ಉಳಿಸಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಎಫ್‌ಎಟಿಎಫ್ ಸಂಸ್ಥೆಯು ಜೂನ್ 27ರಂದು ತನ್ನ ಹೊಸ ಗ್ರೇ ಪಟ್ಟಿಯನ್ನು ಸಿದ್ಧಪಡಿಸಿದ್ದು, ಆ ಸಮಯದಲ್ಲಿ ಪಾಕಿಸ್ತಾನದ ಹಣಕಾಸು ಸಚಿವಾಲಯದ ಸಲಹೆಗಾರರೂ ಹಾಜರಿದ್ದರು. ಪಾಕಿಸ್ತಾನವು ಉಗ್ರರಿಗೆ ನೆರವು ನೀಡದಿರಲು 26 ಅಂಶಗಳ ಕಾರ್ಯಕ್ರಮ ರೂಪಿಸಿದೆ ಎಂದು ಅವರು ಮನದಟ್ಟು ಮಾಡುವ ಪ್ರಯತ್ನ ಮಾಡಿದರಾದರೂ ಸಂಸ್ಥೆ ಅದಕ್ಕೆ ಒಪ್ಪಿಲ್ಲ.

ಇದೇ ಸಂಸ್ಥೆ 2015-16ರಲ್ಲಿಯೂ ಪಾಕಿಸ್ತಾನವನ್ನು ಉಗ್ರರಿಗೆ ಆರ್ಥಿಕ ನೆರವು ನೀಡುವ ದೇಶದ ಪಟ್ಟಿಗೆ ಸೇರಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+