Imran Khan: ಬಂಧನದ ಭೀತಿಯಲ್ಲಿ ಪಾಕ್ ಮಾಜಿ ಪಿಎಂ ಇಮ್ರಾನ್, ಲಾಹೋರಿಗೆ ಆಗಮಿಸಿದ ಪೊಲೀಸರು
ಬಂಧನ ಭೀತಿ ಎದುರಿಸುತ್ತಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ಜೆನ್ ಬಾಜ್ವಾ ಬಗ್ಗೆ ಆರೋಪಿಸಿದ್ದಾರೆ.
ಬೆಂಗಳೂರು, ಮಾರ್ಚ್ 05: ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ರನ್ನು ಬಂಧಿಸಲು ಪೊಲೀಸರು ಅವರ ಲಾಹೋರ್ ಮನೆಯತ್ತ ತೆರಳಿದ್ದಾರೆ. ಅದರೆ ಬಂಧನದಿಂದ ತಪ್ಪಿಸಿಕೊಳ್ಳಲು ಮಾಜಿ ಪ್ರಧಾನಿ ಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ಇಮ್ರಾನ್ ಖಾನ್, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ಜೆನ್ ಬಾಜ್ವಾ ಬಗ್ಗೆ ಟ್ವೀಟ್ ಮಾಡಿದ್ದಾರೆ.
ತಾಶ್‌ಖಾನಾ ಪ್ರಕರಣದಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್‌ಸಾಫ್ (ಪಿಟಿಐ) ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಬಂಧಿಸಲು ಪೊಲೀಸರು ಲಾಹೋರ್ ತಲುಪಿದ್ದಾರೆ. ಆದರೆ ಅವರಿಗೆ ಇಮ್ರಾನ್ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಇಮ್ರಾನ್ ಖಾನ್, ಎಂಟು ಬಿಲಿಯನ್ ರೂಪಾಯಿಗಳ ಮನಿ ಲಾಂಡರಿಂಗ್ ಪ್ರಕರಣ ಹಾಗೂ 16 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣದಲ್ಲಿ ಈಗಿನ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಶಿಕ್ಷೆಗೆ ಒಳಗಾದರು. ಇದಾದ ಬಳಿಕ ಎನ್‌ಎಬಿ ವಿಚಾರಣೆ ವೇಳೆ ಮಾಜಿ ಸೇನಾ ಮುಖ್ಯಸ್ಥ ಜೆನ್ ಬಾಜ್ವಾ ಅವರು ಷರೀಫ್‌ರನ್ನು ರಕ್ಷಿಸಿದ್ದರು ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಬಳಿಕ ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಗಿದ್ದಲ್ಲದೇ ಶಹಬಾಜ್ ಷರೀಫ್ ರನ್ನು ಪ್ರಧಾನಿಯನ್ನಾಗಿ ಮಾಡಲಾಯಿತು. ಬಳಿಕ ಪ್ರಕರಣದಲ್ಲಿದ್ದ ಅವರ ಹೆಸರನ್ನು ಶಾಶ್ವತವಾಗಿ ತೆರವುಗೊಳಿಸಲಾಯಿತು ಎಂದು ಟ್ವೀಟ್ನಲ್ಲಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಪೊಲೀಸ್ ತಂಡ ಲಾಹೋರ್ ತೆರಳಿದೆ. ಇಮ್ರಾನ್ ಖಾನ್ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧನ ವಿಚಾರ ತಿಳಿಯುತ್ತಿದ್ದಂತೆ ಇಮ್ರಾನ್ ಖಾನ್ ಭಾನುವಾರ ಮಧ್ಯಾಹ್ನ ಕಾನೂನು ತಂಡದ ಸದಸ್ಯರ ಜೊತೆ ಸಭೆ ನಡೆಸಿದ್ದಾರೆ. ತೋಷಖಾನಾ ಪ್ರಕರಣ ಸಂಬಂಧ ಸಂಜೆ, ಕಾನೂನು ತಂಡದಲ್ಲಿ ಸಾರ್ವಜನಿಕ ವಿಚಾರಣೆ ಕೋರಿ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆಯಲಿದೆ ಎಂದು ಅವರು ತಿಳಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ದೇಶಾದ್ಯಂತ ಪ್ರತಿಭಟನೆ ಎಚ್ಚರಿಕೆ
ಲಾಹೋರ್ ನಲ್ಲಿ ಇಮ್ರಾನ್ ಖಾನ್‌ನನ್ನು ಬಂಧಿಸಿದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅವರ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ. ಇಮ್ರಾನ್ ಖಾನ್ ಗಾಯಗೊಂಡಿದ್ದರಿಂದ ಪ್ರಕರಣದ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಮಾಧ್ಯಮಗಳು ಮಾಡಿರುವ ವರದಿ ಪ್ರಕಾರ, ಕಾನೂನು ಅಗತ್ಯತೆಗಳು ಮುಗಿಸಿದ ತಕ್ಷಣವೇ ಇಮ್ರಾನ್ ಖಾನ್‌ರನ್ನು ಬಂಧಿಸಲಾಗುವುದು. ನ್ಯಾಯಾಲಯದ ವಾರಂಟ್ ವಿಚಾರಣೆಗೆ ಹಾಜರಾಗಲು ಮಾತ್ರ ಎಂದು ಮಾಜಿ ಸಚಿವ ಮತ್ತು ಪಿಟಿಐ ನಾಯಕ ಫವಾದ್ ಚೌಧರಿ ಹೇಳಿದರು.
ತೋಶಖಾನಾ ಎಂಬುದು ಸರ್ಕಾರಿ ವ್ಯಾಪ್ತಿಯ ಅಧಿಕೃತ ಭಂಡಾರ ಆಗಿದೆ. ಅಲ್ಲಿ ವಿದೇಶಿ ಅಧಿಕಾರಿಗಳು ಮತ್ತು ಪ್ರತಿನಿಧಿಗಳಿಂದ ಸ್ವೀಕರಿಸಿದ ಅಧಿಕೃತ ಉಡುಗೊರೆಗಳನ್ನು ಇರಿಸಲು ಬಳಕೆ ಆಗುತ್ತದೆ. ಅಂತಹ ಭಂಡಾರದಲ್ಲಿ ಉಡುಗೊರೆಗಳನ್ನು ಹಣ ಪಾವತಿಸದೇ ತಮ್ಮ ಬಳಿ ಇಟ್ಟುಕೊಂಡಿದ್ದ ಕಾರಣಕ್ಕೆ ಇಮ್ರಾನ್ ಖಾನ್ ವಿಚಾರಣೆ ಮತ್ತು ಬಂಧನ ಭೀತಿ ಎದುರಿಸುತ್ತಿದ್ದಾರೆ.












Click it and Unblock the Notifications