• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನ್‌ ಸಚಿವ ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್‌!

|
Google Oneindia Kannada News

ಬರ್ಲಿನ್‌, ಆಗಸ್ಟ್‌ 25: ಅಫ್ಘಾನಿಸ್ತಾನದ ಮಾಜಿ ಸಚಿವರೊಬ್ಬರು ಈಗ ಜರ್ಮನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಜೀವನ ಸಾಗಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಅಫ್ಘಾನಿಸ್ತಾನದ ಮಾಹಿತಿ ಹಾಗೂ ಐಟಿ ಸಚಿವರಾಗಿದ್ದ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಈಗ ಜರ್ಮನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಜೀವನ ಸಾಗಿಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ತನ್ನ ಕಚೇರಿಯನ್ನು ತೊರೆದ ಒಂದು ವರ್ಷದ ಬಳಿಕ ಅಫ್ಘಾನ್‌ನ ಮಾಜಿ ಸಚಿವ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಜರ್ಮನಿಯ ಲೀಪ್‌ಜಿಂಗ್‌ನಲ್ಲಿ ಆಹಾರವನ್ನು ಪೂರೈಸುವ ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್‌ ಆಗಿದ್ದಾರೆ ಎಂದು ಹೇಳಲಾಗಿದೆ.

ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಇರಲು ಹೇಳಿದೆ ತಾಲಿಬಾನ್; ಕಾರಣವೇನು?ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಇರಲು ಹೇಳಿದೆ ತಾಲಿಬಾನ್; ಕಾರಣವೇನು?

ಹೀಗೆ ಜರ್ಮನಿಯಲ್ಲಿ ಸೈಯದ್‌ ಅಹಮ್ಮದ್‌ ಶಾ ಸಾದತ್‌ ತನ್ನ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಸಂದರ್ಭ ಸ್ಥಳೀಯ ಮಾಧ್ಯಮದ ವರದಿಗಾರರು ಅಪ್ಘಾನ್‌ ಮಾಜಿ ಸಚಿವರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಡೆಲಿವರಿ ಬಾಯ್‌ ಆಗಿರುವ ಅಫ್ಘಾನ್‌ ಮಾಜಿ ಸಚಿವ ಸೈಯದ್‌ ಅಹಮ್ಮದ್‌ ಶಾ ಸಾದತ್‌ರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಕೆಲವೊಂದು ಪೋಸ್ಟ್‌ಗಳನ್ನು ಅಲ್‌ ಜಜೀರಾ ಅರೇಬಿಯಾ ಪೋಸ್ಟ್‌ ಮಾಡಿದೆ. ಹಾಗೆಯೇ ಇನ್ನೂ ಕೆಲವು ಸ್ಥಳೀಯ ಮಾಧ್ಯಮಗಳು ಸೈಯದ್‌ ಅಹಮ್ಮದ್‌ ಶಾ ಸಾದತ್‌ ಜರ್ಮನಿಯ ಲೀಪ್‌ಜಿಂಗ್‌ನಲ್ಲಿ ತನ್ನ ಬೈಸಿಕಲ್‌ನಲ್ಲಿ ಆಹಾರವನ್ನು ಡೆಲಿವರಿ ಮಾಡುತ್ತಿದ್ದಾರೆ ಎಂದು ಫೋಟೋ ಜೊತೆಗೆ ವರದಿ ಮಾಡಿದೆ.

ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ; ತಾಲಿಬಾನ್ ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ; ತಾಲಿಬಾನ್

ಅಫ್ಘಾನಿಸ್ತಾನದ ಮಾಜಿ ಸಚಿವ ಸೈಯದ್‌ ಅಹಮ್ಮದ್‌ ಶಾ ಸಾದತ್‌ ತನ್ನ ಬೈಸಿಕಲ್‌ನಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿರುವುದನ್ನು ಜರ್ಮನಿಯ ಪತ್ರಕರ್ತರೊಬ್ಬರು ನೋಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮವೊಂದರ ವರದಿಗಾರ ಟ್ವೀಟ್‌ ಮಾಡಿದ್ದಾರೆ.

"ಕಳೆದ ಎರಡು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಸಂವಹನ ಸಚಿವರಾಗಿದ್ದೆ ಎಂದು ಹೇಳಿಕೊಂಡ ವ್ಯಕ್ತಿಯನ್ನು ನಾನು ಕಳೆದ ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದೆ. ನಾನು ಆ ವ್ಯಕ್ತಿಯ ಬಳಿ ನೀವು ಲೀಪ್‌ಜಿಂಗ್‌ ಪ್ರದೇಶದಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಆ ಸಂದರ್ಭದಲ್ಲಿ ಆ ವ್ಯಕ್ತಿ ತಾನು ಲೈಫೆರಾಂಡೋಗೆ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ," ಎಂದು ಟ್ವೀಟ್‌ ಮಾಡಿದ್ದಾರೆ. ಲೈಫೆರಾಂಡೋಗೆ ಆಹಾರ ಸರಬರಾಜು ಸಂಸ್ಥೆಯಾಗಿದ್ದು ಅಫ್ಘಾನಿಸ್ತಾನದಲ್ಲಿ ಸಚಿವರಾಗಿದ್ದವರು ಈಗ ಜರ್ಮನಿಯಲ್ಲಿ ಈ ಸಂಸ್ಥೆಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಈ ಬಗ್ಗೆ ಸ್ಕೈ ನ್ಯೂಸ್‌ ಅರೇಬಿಯಾದ ಜೊತೆ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಡೆಲಿವರಿ ಬಾಯ್‌ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಚಿತ್ರ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

2018 ರಲ್ಲಿ ಸೈಯದ್‌ ಅಹಮ್ಮದ್‌ ಶಾ ಸಾದತ್‌, ಅಶ್ರಫ್‌ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಇದ್ದರು. ಎರಡು ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರಾಗಿ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಕಾರ್ಯ ನಿರ್ವಹಿಸಿದ್ದಾರೆ. 2020 ರಲ್ಲಿ ಸಾದತ್‌ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಕಳೆದ ವರ್ಷ ಅಂದರೆ 2020 ರ ಡಿಸೆಂಬರ್‌ನಲ್ಲಿ ಜರ್ಮಿನಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ.

Former Afghan minister Syed Ahmad works as pizza delivery boy in Germany

ಇನ್ನು ಸೈಯದ್‌ ಅಹಮ್ಮದ್‌ ಶಾ ಸಾದತ್‌ ಸಂವಹನ ಹಾಗೂ ಇಲೆಕ್ಟ್ರಾನಿಕ್‌ ಇಂಜಿನಿಯರಿಂಗ್‌ನಲ್ಲಿ ಎರಡು ಪದವಿಗಳನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ಈ ಎರಡು ಪದವಿಗಳ ವಿದ್ಯಾರ್ಜನೆ ಮಾಡಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಕಾರಣದಿಂದಾಗಿ ಬಿಕ್ಕಟ್ಟು ಉಂಟಾಗಿರುವ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಮಾಜಿ ಸಚಿವ ಸೈಯದ್‌ ಅಹಮ್ಮದ್‌ ಶಾ ಸಾದತ್‌ ಡೆಲಿವರಿ ಬಾಯ್‌ ಆಗಿರುವ ಚಿತ್ರಗಳು ಭಾರೀ ವೈರಲ್‌ ಆಗುತ್ತಿದೆ.

ಸೈಯದ್‌ ಅಹಮ್ಮದ್‌ ಶಾ ಸಾದತ್‌ ಬಳಿಕ ಅಫ್ಘಾನಿಸ್ತಾನದ ಪ್ರಸ್ತುತ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, "ಅಶ್ರಫ್‌ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರವು ಬಹಳ ಬೇಗ ಕುಸಿದಿದೆ, ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ," ಎಂದು ಹೇಳಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Syed Ahmad Shah Saadat, the former Afghan information minister, works as pizza delivery boy in Germany.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X