ಫ್ಲೋರಿಡಾದಲ್ಲಿ ಪಾದಚಾರಿ ಸೇತುವೆ ಕುಸಿತ: ಹಲವರು ಸಾವು

ಮಿಯಾಮಿ, ಮಾರ್ಚ್ 16: ಅಮೆರಿಕದ ಫ್ಲೋರಿಡಾದ ಮಿಯಾಮಿ ಎಂಬಲ್ಲಿ ಪಾದಚಾರಿ ಸೇತುವೆಯೊಂದು ಕುಸಿದ ಕಾರಣ ಹಲವರು ಸಾವನ್ನಪ್ಪಿದ್ದಾರೆ.

ಫ್ಲೋರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಬಳಿ ಹೊಸದಾಗಿ ಕಟ್ಟಲಾಗಿದ್ದ, ಸುಮಾರು 950 ಟನ್ ತೂಕದ ಸೇತುವೆ ಕುಸಿದಿದ್ದರಿಂದ ಸುಮಾರು 6-10 ಜನ ಅಸುನೀಗಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಕುರಿತು ನಿಖರ ಮಾಹಿತಿ ಲಭ್ಯವಿಲ್ಲ.

ಕೆಲವು ಕಾರುಗಳೂ ಸೇತುವೆ ಅಡಿಯಲ್ಲಿ ಸಿಲುಗಿ ನಜ್ಜುಗುಜ್ಜಾಗಿವೆ. ಪೊಲೀಸ್ ಮತ್ತು ಇತರ ತುರ್ತುಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಬಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+