ಫ್ಲೋರಿಡಾ ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯಿಂದಲೇ ಶೂಟೌಟ್: 17 ಜನ ಸಾವು
ಫ್ಲೋರಿಡಾ, ಫೆಬ್ರವರಿ 15: ಅಮೆರಿಕದ ಫ್ಲೋರಿಡಾದ ಪಾರ್ಕ್ ಲ್ಯಾಂಡ್ ನಲ್ಲಿರುವ ಪ್ರೌಢಶಾಲೆಯೊಂದರಲ್ಲಿ ನಡೆದ ಶೂಟೌಟ್ ನಲ್ಲಿ 17 ಮಂದಿ ಸಾವಿಗೀಡಾಗಿದ್ದಾರೆ.
ಪಾರ್ಕ್ ಲ್ಯಾಂಡ್ ನಲ್ಲಿರುವ ಮಾರ್ಜರಿ ಸ್ಟೋನ್ ಮನ್ ಡಗ್ಲಾಸ್ ಹೈಸ್ಕೂಲ್ ನಲ್ಲಿ ಈ ದಾರುಣ ಘಟನೆ ನಡೆದಿದೆ. ಮೂಲಗಳ ಪ್ರಕಾರ ಆರೋಪಿ ಗನ್ ಮ್ಯಾನ್ ನಿಕೋಲಸ್ ಕ್ರೂಝ್ ಇದೇ ಶಾಲೆಯ ಮಾಜಿ ವಿದ್ಯಾರ್ಥಿ.
19 ವರ್ಷದ ನಿಕೋಲಸ್ ನನ್ನು ಈ ಮೊದಲು ಅಶಿಸ್ತಿನ ವರ್ತನೆಯ ಕಾರಣ ನೀಡೀ ಶಾಲೆಯಿಂದ ಹೊರಹಾಕಲಾಗಿತ್ತು. ಈ ಅವಮಾನಕ್ಕೆ ಆತ ಪ್ರತೀಕಾರದ ರೂಪದಲ್ಲಿ 17 ಜನರ ಪ್ರಾಣ ಕಿತ್ತಿದ್ದಾನೆ.

ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.












Click it and Unblock the Notifications