• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇಪಾಳದಲ್ಲಿ ದಿಢೀರ್ ಪ್ರವಾಹ; 7 ಮಂದಿ ಸಾವು, ಹಲವರು ಕಣ್ಮರೆ

|
Google Oneindia Kannada News

ಕಠ್ಮಂಡು, ಜೂನ್ 17: ಅಧಿಕ ಮಳೆಯಿಂದಾಗಿ ಬುಧವಾರ ನೇಪಾಳದ ಸಿಂಧುಪಾಲ್ಚೋಕ್‌ನಲ್ಲಿ ದಿಢೀರ್ ಪ್ರವಾಹ ಉಂಟಾಗಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಐವತ್ತು ಮಂದಿ ಪ್ರವಾಹದಲ್ಲಿ ಕಣ್ಮರೆಯಾಗಿದ್ದಾರೆ.

ಮಧ್ಯ ನೇಪಾಳದ ಸಿಂಧುಪಾಲ್ಚೋಕ್‌ನಲ್ಲಿ ಕಳೆದ 48 ಗಂಟೆಗಳಲ್ಲಿ ಭಾರೀ ಮಳೆಯಾಗಿದ್ದು, ಭಾರೀ ಹಾನಿ ಸಂಭವಿಸಿದೆ. ಕಠ್ಮಂಡುವಿನಿಂದ 65 ಕಿ.ಮೀ. ದೂರವಿರುವ ಸಿಂಧುಪಾಲ್ಚೋಕ್‌ನಲ್ಲಿ ಮೆಲಾಂಚಿ ನದಿ ಹರಿಯುತ್ತಿದ್ದು, ಮಳೆ ಹೆಚ್ಚಳದಿಂದಾಗಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ.

ಜಲ ಪ್ರಳಯಕ್ಕೆ ತತ್ತರಿಸಿದ ದ್ವೀಪರಾಷ್ಟ್ರ ಶ್ರೀಲಂಕಾಜಲ ಪ್ರಳಯಕ್ಕೆ ತತ್ತರಿಸಿದ ದ್ವೀಪರಾಷ್ಟ್ರ ಶ್ರೀಲಂಕಾ

"ಪ್ರವಾಹದಿಂದಲ್ಲಿ 50 ಮಂದಿ ಕಣ್ಮರೆಯಾಗಿದ್ದು, ಏಳು ಮೃತದೇಹಗಳು ದೊರೆತಿವೆ. ಇವರೆಲ್ಲರೂ ಮೆಲಾಂಚಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದರು," ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಿಂದ ಮೆಲಾಂಚಿ ಕುಡಿಯುವ ನೀರಿನ ಯೋಜನೆ, ಟಿಂಬು ಬಜಾರ್, ಶನೌಟ್ ಬಜಾರ್, ತಲಮರಂಗ್ ಬಜಾರ್ ಹಾಗೂ ಮೆಲಾಂಚಿ ಬಜಾರ್‌ ಪ್ರದೇಶಗಳಲ್ಲಿ ಭಾರೀ ಹಾನಿಯಾಗಿದೆ. ಸಿಂಧುಪಾಲ್ಚೋಕ್‌ನಲ್ಲಿ ಐದಾರು ಸೇತುವೆಗಳು ಧ್ವಂಸವಾಗಿವೆ. 300 ಗುಡಿಸಲುಗಳು ಕೊಚ್ಚಿಕೊಂಡು ಹೋಗಿವೆ.

ಕಾಣೆಯಾದವರಲ್ಲಿ ಮೂರು ಮಂದಿ ಭಾರತೀಯರು, ಮೂರು ಚೀನೀಯರು ಇದ್ದರು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಭೂತಾನ್‌ನ ಬೆಟ್ಟ ಪ್ರದೇಶದಲ್ಲಿಯೂ ದಿಢೀರ್ ಪ್ರವಾಹದಿಂದಾಗಿ ಹತ್ತು ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. ಔಷಧದಲ್ಲಿ ಬಳಸಲಾಗುವ "ಕಾರ್ಡಿಸೆಪ್ಸ್" ಸಂಗ್ರಹಿಸುತ್ತಿದ್ದ ಭೂತಾನ್ ಗ್ರಾಮಸ್ಥರು ಲಾಯ ಎಂಬಲ್ಲಿ ಶಿಬಿರದಲ್ಲಿ ಮಲಗಿದ್ದರು. ಮಧ್ಯ ರಾತ್ರಿ ಬಳಿಕ ದಿಢೀರ್ ಪ್ರವಾಹ ಉಂಟಾಗಿ ಎಲ್ಲರೂ ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

English summary
Flash floods wreak havoc in Sindhupalchok of nepal leaving at least 7 dead, several missing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X