Taliban Fight: ಪಾಕಿಸ್ತಾನ ಸೈನಿಕರ ಹೆಣ ಕೆಡವಿದ ತಾಲಿಬಾನ್, ಮತ್ತೆ ಜಗಳ ಶುರು!
ಪಾಕಿಸ್ತಾನ & ತಾಲಿಬಾನ್ ನಡುವೆ ಮಾತುಕತೆ ನಡೆಯುವ ಸಮಯದಲ್ಲೇ ಮತ್ತೆ ಜಗಳ ಜೋರು ಜೋರಾಗಿದೆ. ಗಡಿಯಲ್ಲಿ ಎರಡೂ ದೇಶಗಳು ಬಡಿದಾಡಿಕೊಂಡು ದೊಡ್ಡ ಅವಾಂತರ ಸೃಷ್ಟಿಯಾಗಿ ಅಲ್ಲೋಲ & ಕಲ್ಲೋಲ ಎದ್ದಿದೆ. ಇಂತಹ ಸಮಯದಲ್ಲೇ ದಿಢೀರ್ ಅಂತಾ ಈ ಇಬ್ಬರ ನಡುವಿನ ಕಾಳಗ ನಿಲ್ಲಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಶಾಂತಿ ಮಾತುಕತೆ ನಡೆಯುವಾಗ ಕೂಡ ಗಡಿಯಲ್ಲಿ ದೊಡ್ಡ ಗಲಾಟೆ ಶುರುವಾಗಿದೆ.
ಹೌದು, ಅಫ್ಘಾನಿಸ್ತಾನ ಗಡಿ ಸಮೀಪದಲ್ಲಿ ನಡೆದ ಸಂಘರ್ಷದಲ್ಲಿ ಪಾಕಿಸ್ತಾನದ 5 ಸೈನಿಕರು ಸೇರಿ ಒಟ್ಟು 25 ಉಗ್ರರು ಹತ್ಯೆಯಾಗಿದ್ದಾರೆ. ಹೀಗಿದ್ದಾಗ ಇಸ್ತಾಂಬುಲ್ ಸಭೆ ನಡೆಯುತ್ತಿದ್ದು, ಎರಡೂ ದೇಶಗಳ ನಡುವೆ ಕ್ಷಣಕ್ಷಣಕ್ಕೂ ತಿಕ್ಕಾಟ ಜೋರಾಗುತ್ತಿದೆ. ಪಾಕಿಸ್ತಾನದ ಉತ್ತರ ಪಶ್ಚಿಮ ಗಡಿಭಾಗದ ಕುರ್ರಂ ಮತ್ತು ಉತ್ತರ ವಜಿರಿಸ್ತಾನ ಜಿಲ್ಲೆಗಳ ಸುತ್ತಮುತ್ತ ಈ ಜಗಳ ನಡೆದಿದೆ. ಉಗ್ರರು ಅಫ್ಘಾನಿಸ್ತಾನ ಕಡೆಯಿಂದ ಪಾಕಿಸ್ತಾನಕ್ಕೆ ನುಗ್ಗಿದ್ದಾರೆ ಎಂದು ಪಾಕಿಸ್ತಾನ ಆರೋಪ ಮಾಡಿದೆ. ಆದರೆ ಇದರಲ್ಲಿ ಪಾಕಿಸ್ತಾನದ್ದೇ ಕೈವಾಡ ಇದೆ ಎಂದು ತಾಲಿಬಾನ್ ಆರೋಪಿಸಿದೆ. ಈ ಮೂಲಕ ಇಬ್ಬರ ಮಧ್ಯೆ ಭಾರಿ ದೊಡ್ಡ ಗಲಾಟೆ ಇನ್ನೊಮ್ಮೆ ಶುರುವಾಗಿದೆ.

ಭೀಕರ ಯುದ್ಧ ಮತ್ತೆ ಶುರುವಾಯ್ತಾ?
ಕೆಲವು ದಿನಗಳ ಹಿಂದಷ್ಟೇ ತಾಲಿಬಾನ್ & ಪಾಕಿಸ್ತಾನ ಸೇನೆ ನಡುವೆ ಒಪ್ಪಂದ ಮಾಡಲಾಗಿತ್ತು. ಆ ಮೂಲಕ ಇಬ್ಬರ ಗಲಾಟೆ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡಲಾಗಿತ್ತು. ಆದರೆ ಹೀಗೆ ಶಾಂತಿಯ ಸ್ಥಾಪನೆ ನಡೆದ ಕೆಲವೇ ದಿನಗಳಲ್ಲಿ ಮತ್ತೆ ಹಿಂಸೆ ಶುರುವಾಗಿದೆ. ಗಡಿ ಭಾಗದಲ್ಲಿ ಜನರಿಗೆ ನಿದ್ದೆ ಬರದ ಪರಿಸ್ಥಿತಿ ಇದ್ದು, ಯಾವ ಕ್ಷಣದಲ್ಲಿ ಯಾರು ಬಂದು ದಾಳಿ ಮಾಡುತ್ತಾರೋ? ಎಂಬ ಭಯ ಕಾಡುತ್ತಿದೆ.












Click it and Unblock the Notifications