ಕಾಬುಲ್ ಗಣಿ ಸ್ಫೋಟ; ಐದು ಮಂದಿ ಸಾವು
ಕಾಬುಲ್, ಡಿಸೆಂಬರ್ 22: ಕಾಬುಲ್ ನಗರದಲ್ಲಿ ಸಂಭವಿಸಿದ ಗಣಿ ಸ್ಫೋಟದಲ್ಲಿ ಐವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ ಬೆಳಿಗ್ಗೆ ಕಾಬುಲ್ ನಗರದ ದೋಘಾಬಾದ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಪುಲ್ ಎ ಚಾರ್ಕಿ ಜೈಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರನ್ನು ಕರೆದೊಯ್ಯುತ್ತಿದ್ದ ವಾಹನ ಜಖಂಗೊಂಡು ಅದರಲ್ಲಿದ್ದ ಐದು ಮಂದಿ ಮೃತಪಟ್ಟಿದ್ದಾರೆ.
ಗಾಯಗೊಂಡವರನ್ನು ತಕ್ಷಣವೇ ಇಸ್ತಿಕ್ ಲಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಕಳೆದ ಎರಡು ತಿಂಗಳಿನಿಂದ ಕಾಬುಲ್ ನಲ್ಲಿ 60 ಭದ್ರತಾ ಸಂಬಂಧಿ ಅವಘಡಗಳು ನಡೆದಿದ್ದು, 133 ಮಂದಿ ಸಾವನ್ನಪ್ಪಿ, 280 ಮಂದಿ ಗಾಯಗೊಂಡಿದ್ದಾರೆ.

ಕಳೆದ 64 ದಿನಗಳಲ್ಲಿ ಕಾಬುಲ್ ವಿಶ್ವವಿದ್ಯಾಲಯದ ಮೇಲಿನ ದಾಳಿ ಒಳಗೊಂಡಂತೆ ಮೂರು ಆತ್ಮಹತ್ಯಾ ದಾಳಿಗಳು ನಡೆದಿವೆ. 29 ಎಲ್ ಇಡಿ ಸ್ಫೋಟ, ಮೂರು ಮಿಸೇಲ್ ಸ್ಫೋಟ, 26 ಸಶಸ್ತ್ರ ದಾಳಿ, ಎರಡು ಕಾರು ಸ್ಫೋಟಗಳು ಸಂಭವಿಸಿವೆ.












Click it and Unblock the Notifications