ಬಟಾಬಯಲಾಯ್ತು ಡೊನಾಲ್ಡ್ ಟ್ರಂಪ್ ಎಂಬ ಆವೇಶದ ಕಿಡಿಯ ಗುಟ್ಟು!

Posted By:
Subscribe to Oneindia Kannada
   ಡೊನಾಲ್ಡ್ ಟ್ರಂಪ್ ರವರ ವಿವಾದಾತ್ಮಕ ಗುಟ್ಟುಗಳು ಬಟಾಬಯಲು | Oneindia Kannada

   ವಾಷಿಂಗ್ಟನ್, ಜನವರಿ 05: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುರಿತು ವಿವಾದಾತ್ಮಕ ವಿಷಯಗಳನ್ನೊಳಗೊಂಡ Fire and Fury: Inside the Trump White House ಎಂಬ ಪುಸ್ತಕ ಇಂದು(ಜ.05) ಬಿಡುಗಡೆಯಾಗಲಿದೆ. ಮೈಕೆಲ್ ವೊಲ್ಫ್ ಎಂಬ ಲೇಖಕರು ಬರೆದ ಈ ಪುಸ್ತಕ ಪ್ರಕಟವಾಗದಂತೆ ಹಲವು ಪ್ರಯತ್ನಗಳು ನಡೆದಿದ್ದರೂ ಅಭಿವ್ಯಕ್ತಿ ಸ್ವಾತಂತ್ರ್ಯ ಗೆದ್ದಿದೆ. ಕೊನೆಗೂ ಈ ಪುಸ್ತಕ ಬಿಡುಗಡೆಯಾಗುತ್ತಿದೆ.

   ಟ್ರಂಪ್ ಆಡಳಿತವನ್ನು ಕುರಿತು ವಿವಾದಾತ್ಮಕ, ಆರೋಪಾತ್ಮಕ ಅಂಶಗಳನ್ನು ಹೊಂದಿರುವ ಈ ಪುಸ್ತಕ ಹಲವು ಅಡೆತಡೆಗಳನ್ನು ಮೀರಿ ಇಂದು ಬಿಡುಗಡೆಯಾಗುತ್ತಿದೆ. ದಯವಿಟ್ಟು ಕೊಂಡು ಓದಿ ಎಂದು ಲೇಖಕರಾದ ಮೈಕೆಲ್ ಕೇಳಿಕೊಂಡಿದ್ದಾರೆ.

   ಅಮೆರಿಕಾ ಅಧ್ಯಕ್ಷ ಟ್ರಂಪ್ ಬದುಕಿನ 10 ಇಂಟರೆಸ್ಟಿಂಗ್ ಅಂಶಗಳು

   ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆಂದು ಸ್ವತಃ ಟ್ರಂಪ್ ಗೂ ನಿರೀಕ್ಷೆಯಿರಲಿಲ್ಲ ಎಂದು ಈ ಕೃತಿಯಲ್ಲಿ ನೇರವಾಗಿಯೇ ಬರೆಯಲಾಗಿದೆ. ಅಲ್ಲದೆ ಕೋಪ, ಆವೇಶ, ಬೆಂಕಿಯ ಮಿಶ್ರಣದಂತೇ ಕಾಣುವ ಟ್ರಂಪ್ ಅವರ ಕುರಿತ ಹಲವು ಗುಟ್ಟಿನ ಸಂಗತಿಗಳನ್ನು ಈ ಪುಸ್ತಕ ಬಟಾಬಯಲುಮಾಡಿದೆ.

   ಟ್ರಂಪ್ ಯು ಟರ್ನ್: ಪಾಕ್ ಗಷ್ಟೇ ಅಲ್ಲ, ಅಮೆರಿಕಕ್ಕೂ ಮುಖಭಂಗ!

   ಅಮೆರಿಕದ ಪ್ರಸಿದ್ಧ ಲೇಖಕ, ಪತ್ರಕರ್ತರಾದ ಮೈಕೆಲ್ ಅವರ ಈ ಪುಸ್ತಕದ ಆನ್ ಲೈನ್ ಪ್ರತಿ ಈಗಾಗಲೇ ಬಿಡುಗಡೆಗೊಂದಿದ್ದು, ಅಮೆಜಾನ್ ತಾಣದಲ್ಲಿ ಅಗ್ರಸ್ಥಾನ ಕಾಯ್ದಿರಿಸಿಕೊಂಡಿದೆ. ಇಂದು ಅಧಿಕೃತವಾಗಿ ಬಿಡುಗಡೆಗೊಳ್ಳಲಿರುವ ಈ ಪುಸ್ತಕದಲ್ಲಿರುವ ಕೆಲವು ಮಹತ್ವದ ಸಂಗತಿಗಳ ಆಯ್ದ ಭಾಗ ಇಲ್ಲಿದೆ.

   ಟ್ರಂಪ್ ಗೇ ಅಚ್ಚರಿ ತಂದ ಗೆಲುವು!

   ಟ್ರಂಪ್ ಗೇ ಅಚ್ಚರಿ ತಂದ ಗೆಲುವು!

   ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಗೆಲ್ಲುತ್ತೇನೆ ಎಂಬ ಯಾವ ಭರವಸೆಯೂ ಸ್ವತಃ ಡೊನಾಲ್ಡ್ ಟ್ರಂಪ್ ಅವರಿಗೇ ಇದ್ದಿರಲಿಲ್ಲ. ಹಿಲರಿ ಕ್ಲಿಂಟನ್ ವಿರುದ್ಧ ತಾನು ಗ್ಯಾರಂಟಿ ಸೋತೇ ಸೋಲುತ್ತೇನೆ ಎಂದುಕೊಂಡಿದ್ದ ಟ್ರಂಪ್ ಸೋಲಿನ ನಂತರ ತಮ್ಮ ವೈಯಕ್ತಿಕ ಬದುಕಿನತ್ತ ಹೆಚ್ಚು ಗಮನ ನೀಡಲು ನಿರ್ಧರಿಸಿದ್ದರು. ತಮ್ಮ ಉದ್ಯಮ ವ್ಯವಹಾರದ ಕಡೆಗೆ ಹೆಚ್ಚು ಗಮನ ನೀಡಲು ಬಯಸಿದ್ದರು.

   ಸೋಲಿನಲ್ಲೇ ಗೆಲುವಿದೆ ಎಂದುಕೊಂಡಿದ್ದರು!

   ಸೋಲಿನಲ್ಲೇ ಗೆಲುವಿದೆ ಎಂದುಕೊಂಡಿದ್ದರು!

   ಹಿಲರಿ ಕ್ಲಿಂಟನ್ ವಿರುದ್ಧ ಸೋಲುತ್ತೇನೆ ಅಂದುಕೊಂಡಿದ್ದ ಟ್ರಂಪ್ ಲೆಕ್ಕಾಚಾರ ಬೇರೆಯೇ ಇತ್ತು. ಗೆಲ್ಲುವುದಕ್ಕಿಂತ ಸೋತರೇ ಹೆಚ್ಚು ಲಾಭವೆಂದುಕೊಂಡಿದ್ದರು ಟ್ರಂಪ್! ಏಕೆಂದರೆ ಸೋತರೆ ಜನರ ಅನುಕಂಪ ಗಳಿಸಿ ಮತ್ತೆ ಹೀರೋ ಆಗಬಹುದು. ಆತನ ಮಗಳು ಇವಾಂಕಾ ಟ್ರಂಪ್ ಮತ್ತು ಅಳಿಯ ಜೇರ್ಡ್, ಟ್ರಂಪ್ ಪರ ಪ್ರಚಾರ ಮಾಡುವ ಮೂಲಕ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಾಗಬಹುದು. ಅಧ್ಯಕ್ಷರಾಗದೆ ಉಳಿದರೆ ತಮ್ಮ ಹೆಚ್ಚಿನ ಸಮಯವನ್ನು ಪತ್ನಿ ಮೆಲಾನಿಯಾ ಟ್ರಂಪ್ ಗೆ ನೀಡುತ್ತೇನೆಂದು ಭರವಸೆ ನೀಡಿದ್ದರಿಂದ ಅಧ್ಯಕ್ಷರಾಗದೆ ಇದ್ದರೆ ವೈಯಕ್ತಿಕ ಬದುಕಿನಲ್ಲಿ ಹಾಯಾಗಿರಬಹುದು. ಆದ್ದರಿಂದ ಗೆಲ್ಲುವುದಕ್ಕಿಂತ ಸೋಲುವುದೇ ಉತ್ತಮ ಎಂದುಕೊಂಡಿದ್ದರು ಅವರು. ಒಂದರ್ಥದಲ್ಲಿ ಅವರಿಗೆ ಸೋಲೇ ಬಹುದೊಡ್ಡ ಗೆಲುವು ಅನ್ನಿಸಿತ್ತು!

   ವಿಷ ಹಾಕಿದರೆ ಎಂಬ ಭಯ!

   ವಿಷ ಹಾಕಿದರೆ ಎಂಬ ಭಯ!

   ಅನಿರೀಕ್ಷಿತವಾಗಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಗೆ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ವಿಚಿತ್ರ ಆತಂಕ ಆರಂಭವಾಗಿತ್ತು. ತೀರಾ ಆತ್ಮೀಯರನ್ನೂ ನಂಬುವ ಸ್ಥಿತಿಯಲ್ಲಿ ಅವರಿರಲಿಲ್ಲ. ಅದಕ್ಕೆಂದೇ ತಮ್ಮ ಟೂಥ್ ಪೇಸ್ಟ್, ಬಟ್ಟೆಗಳನ್ನೆಲ್ಲ ಯಾರಿಗೂ ಮುಟ್ಟುವುದಕ್ಕೂ ಬಿಡುತ್ತಿರಲಿಲ್ಲ. ಎಲ್ಲಿಯಾದರೂ ತನಗೆ ತಿಳಿಯದಂತೆ ವಿಷ ಹಾಕಿಬಿಟ್ಟಿದ್ದರೆ ಎಂಬ ಭಯ ಅವರನ್ನು ಸದಾ ಕಾಡುತ್ತಿತ್ತು! ಶ್ವೇತ ಭವನದ ವಾಸ ಆರಂಭಿಸುತ್ತಿದ್ದಂತೆಯೇ ಅವರು ಅಲ್ಲಿನ ಕೆಲಸಗಾರರನ್ನು ದೂರವೇ ಇಟ್ಟಿದ್ದರು. ಯಾವುದೇ ಕಾರಣಕ್ಕೂ ತಮ್ಮ ವೈಯಕ್ತಿಕ ವಸ್ತುಗಳನ್ನು ಮುಟ್ಟದಂತೆ ತಾಕೀತು ಮಾಡಿದ್ದರು!

   ಆತ್ಮೀಯರಿಗೂ ಬೇಸರ

   ಆತ್ಮೀಯರಿಗೂ ಬೇಸರ

   ಡೊನಾಲ್ಡ್ ಟ್ರಂಪ್ ರ ಕೆಲವು ವರ್ತನೆ ಅವರ ಆತ್ಮೀಯರಿಗೂ ಹಿಡಿಸುತ್ತಿರಲಿಲ್ಲ. ಅವರು ಅಧ್ಯಕ್ಷರಾಗಲು ಅಸಮರ್ಥರು ಎಂದು ಅವರ ಆತ್ಮೀಯರೇ ಹೇಳುತ್ತಿದ್ದರು. ಅಲ್ಲದೆ, ಅಧ್ಯಕ್ಷರಾಗುತ್ತಿದ್ದಂತೆಯೇ ಬದಲಾದ ಟ್ರಂಪ್ ತಮ್ಮ ಹಳೆಯ ಆಪ್ತ ಸ್ನೇಹಿತರನ್ನೆಲ್ಲ ಗುರುತಿಸುವುದಕ್ಕೂ ಆಗುವುದಿಲ್ಲ ಎಂಬಷ್ಟರ ಮಟ್ಟಿಗೆ ಮರೆತುಬಿಟ್ಟಿದ್ದರು. ಪರಿಸ್ಥಿತಿಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಬರದ ಟ್ರಂಪ್ ಗೆ ಮತ್ತೊಬ್ಬರ ಮಾತನ್ನು ಸಮಾಧಾನದಿಂದ ಕುಳಿತು ಕೇಳುವ ವ್ಯವಧಾನವಿರಲಿಲ್ಲ.

   H1-B ವೀಸಾ ಕುರಿತು ದುರಹಂಕಾರದ ನಡೆ

   H1-B ವೀಸಾ ಕುರಿತು ದುರಹಂಕಾರದ ನಡೆ

   H1-B ವೀಸಾ ನಿಯಮಗಳ ಕುರಿತು ಅಮೆರಿಕ ಸ್ವಲ್ಪ ಉದಾರವಾಗಬೇಕಿದೆ ಎಂಬ ಸಲಹೆಯನ್ನೂ ಅವರು ಸಾರಾಸಗಟಾಗಿ ತಳ್ಳಿಹಾಕಿಬಿಟ್ಟಿದ್ದರು. H1-B ವೀಸಾ ಕುರಿತು ಬಿಗಿ ನಿಯಮ ತರುವುದರಿಂದ ವಿಶ್ವದ ನಾನಾ ದೇಶಗಳಿಗೆ ಅಮೆರಿಕದ ಬಾಗಿಲು ಮುಚ್ಚಿಕೊಳ್ಳುತ್ತದೆ. ಹೀಗೆ ಎಲ್ಲೆಡೆ ಗೋಡೆ ಕಟ್ಟಿಕೊಳ್ಳುವುದು ಒಳ್ಳೆಯದಲ್ಲ. ನಾವು ಉದಾರಿಗಳಾಗಬೇಕಿದೆ ಎಂದಬ ಆಪ್ತರ ಸಲಹೆಗೆ ಕ್ಯಾರೇ ಎನ್ನದ ಟ್ರಂಪ್, 'ಇವನ್ನೆಲ್ಲ ನಾನು ಮ್ಯಾನೇಜ್ ಮಾಡುತ್ತೇನೆ' ಎಂದಿದ್ದರು.

   ಆಪ್ತರ ಕಣ್ಣಲ್ಲಿ ಟ್ರಂಪ್ ಒಬ್ಬ ಮೂರ್ಖ!

   ಆಪ್ತರ ಕಣ್ಣಲ್ಲಿ ಟ್ರಂಪ್ ಒಬ್ಬ ಮೂರ್ಖ!

   ಟ್ರಂಪ್ ಅವರ ಆಪ್ತ ಸ್ನೇಹಿತರ ಕಣ್ಣಲ್ಲಿ ಟ್ರಂಪ್ ಒಬ್ಬ ಮೂರ್ಖರಾಘಿ ಕಾಣಿಸುತ್ತಾರೆ. ಅವರ ಆಪ್ತರಾದ ಸ್ಟೀವ್ ನುಚಿನ್, ರಿಯನ್ಸ್ ಪ್ರಿಯೆಬಸ್ ಮತ್ತು ಮ್ಯಾಕ್ ಮಾಸ್ಟರ್ ಎಂಬುವವರು ಟ್ರಂಪ್ ಒಬ್ಬ ಮೂರ್ಖ, ದುರಹಂಕಾರಿ ಎಂದು ವ್ಯಾಖ್ಯಾನಿಸಿಸದ್ದಾರೆ ಎಂದು ಈ ಕೃತಿಯಲ್ಲಿ ಹೇಳಲಾಗಿದೆ. ಈ ಕೃತಿ ಸುಮಾರು 200 ಕ್ಕೂ ಹೆಚ್ಚು ಸಂದರ್ಶನಗಳನ್ನು ಒಳಗೊಂಡಿದ್ದು, ಈ ಪುಸ್ಕದಲ್ಲಿ ಅರ್ಧಸತ್ಯವಷ್ಟೇ ಇದೆ, ಉಳಿದುದೆಲ್ಲ ಕಾಲ್ಪನಿಕ ಸಂಗತಿಗಳು ಎಂದು ಕೆಲವರು ದೂರಿದ್ದಾರೆ ಕೂಡ.

   ಓದು ಎಂದರೆ ಟ್ರಂಪ್ ಗೆ ಅಲರ್ಜಿ!

   ಓದು ಎಂದರೆ ಟ್ರಂಪ್ ಗೆ ಅಲರ್ಜಿ!

   ಟ್ರಂಪ್ ಒಂದು ಪುಟವನ್ನು ಸರಿಯಾಗಿ ಓದುವುದಿಲ್ಲ. ಅವರಿಗೆ ಪುಸ್ತಕ ಅಥವಾ ಓದು ಅಂದ್ರೆ ಅಲರ್ಜಿ. ಅಷ್ಟೇ ಅಲ್ಲ, ಅವರಿಗೆ ಮೀಟಿಂಗ್ ಗಳಲ್ಲಿ ಬಹುಹೊತ್ತು ಗಂಭೀರವಾಗಿ ಕೂರುವುದು ಎಂದರೂ ಬೋರು ಎಮದು ಸಹ ಈ ಪುಸ್ತಕದಲ್ಲಿ ಬರೆಯಲಾಗಿದೆ.

   ಚೀಸ್ ಬರ್ಗರ್ ಮತ್ತು ಟ್ರಂಪ್

   ಚೀಸ್ ಬರ್ಗರ್ ಮತ್ತು ಟ್ರಂಪ್

   ಟ್ರಂಪ್ ಅವರಿಗೆ ಚೀಸ್ ಬರ್ಗರ್ ಅಂದ್ರೆ ಪ್ರಅಣ. ವೈಟ್ ಹೌಸ್ ನ ತಮ್ಮ ಬೆಡ್ ರೂಮಿನಲ್ಲಿ ಚೀಸ್ ಬರ್ಗರ್ ತಿನ್ನುತ್ತ, ದೊಡ್ಡ ಸ್ಕ್ರೀನಿನ ಟಿವಿ ನೋಡುತ್ತ, ತಮ್ಮ ಫೋನಿನಲ್ಲಿ ಬೇರೆ ಬೇರೆಯವರೊಂದಿಗೆ ಮಾತನಾಡುತ್ತ ಕಾಲಕಳೆಯುವುದೆಂದರೆ ಅವರಿಗೆ ಬಹಳ ಇಷ್ಟ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Fire and Fury: Inside the Trump White House, a book by Americal journalist and famous author will be releaseing on Jan 5th. The book seeks international attention because it contains many secret stories about America President Donald Trump. Here are few points which are mentioned in the book.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ