Get Updates
Get notified of breaking news, exclusive insights, and must-see stories!

ಲೆಬನಾನ್‌ನ ರಾಜಧಾನಿಯ ಬೈರುತ್ ಬಂದರಿನಲ್ಲಿ ಅಗ್ನಿ ದುರಂತ

ಲೆಬನಾನ್‌ನ ರಾಜಧಾನಿ ಬಂದರು ನಗರಿ ಬೈರುತ್ ನಲ್ಲಿ ಮತ್ತೆ ಸ್ಫೋಟ, ಅಗ್ನಿ ದುರಂತ ಸಂಭವಿಸಿದೆ. ಅಮೋನಿಯಂ ನೈಟ್ರೇಟ್ ಸ್ಫೋಟವಾದ ಒಂದು ತಿಂಗಳ ಬಳಿಕ ಭಾರಿ ಅಗ್ನಿ ಆಕಸ್ಮಿಕವನ್ನು ಗುರುವಾರದಂದು ಇಲ್ಲಿನ ಬಂದರು ಪ್ರದೇಶ ಕಂಡಿದೆ.

ಬೈರುತ್‌ ಬಂದರು ಪ್ರದೇಶದಲ್ಲಿನ ಹೊತ್ತಿಕೊಂಡಿರುವ ಬೆಂಕಿ ಭಾರಿ ದಟ್ಟವಾದ ಕಪ್ಪು ಹೊಗೆಯನ್ನು ನಗರ ತುಂಬೆಲ್ಲ ಹರಡುತ್ತಿದೆ. ಈ ಅಪಘಾತಕ್ಕೆ ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಒಂದು ತಿಂಗಳ ಹಿಂದೆ ಬೈರುತ್‌ ಬಂದರು ಗೋದಾಮಿನಲ್ಲಿ ಸಂಗ್ರಹವಾಗಿದ್ದ 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು. ಸುಮಾರು 191 ಮಂದಿ ಮೃತಪಟ್ಟು ಸಾವಿರಾರು ಮಂದಿ ಗಾಯಗೊಂಡಿದ್ದರು, 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾದರೆ, ಅನೇಕ ಕಟ್ಟಡಗಳು ನೆಲಕ್ಕುರಳಿದ್ದವು. ಬೈರುತ್ ಸ್ಫೋಟದಿಂದ ಸಂಭವಿಸಿದ ನಷ್ಟದ ಅಂದಾಜು $5 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

Fire Accident In Beirut Port Area, A Month After Massive Blast

ಕಳೆದ ಹಲವು ವರ್ಷಗಳಿಂದಲೂ ಯುದ್ಧಭೂಮಿಯಂತಾಗಿರುವ ಲೆಬನಾನ್‌ನಲ್ಲಿ ಕೆಲ ದಿನಗಳಿಂದ ಗುಂಡುಗಳು ಹೂಂಕರಿಸುತ್ತಿದ್ದವು. ಆದರೆ ಇದೀಗ ಬೈರುತ್ ನಗರದ ಬಂದರಿನಲ್ಲಿ ಸರಣಿ ಸ್ಪೋಟ ಲೆಬನಾನ್‌ ನಾಗರಿಕರನ್ನು ಬೆಚ್ಚಿಬೀಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+