Breaking: ಥೈಲ್ಯಾಂಡ್ ನೈಟ್‌ಕ್ಲಬ್‌ನಲ್ಲಿ ಬೆಂಕಿ, 13 ಸಾವು
ಬ್ಯಾಂಕಾಕ್, ಆ.05: ಶುಕ್ರವಾರ ಮುಂಜಾನೆ ಥಾಯ್ ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 13 ಜನರು ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ಯಾಂಕಾಕ್‌ನಿಂದ ದಕ್ಷಿಣಕ್ಕೆ 150 ಕಿಲೋಮೀಟರ್ ದೂರದಲ್ಲಿರುವ ಚೋನ್‌ಬುರಿ ಪ್ರಾಂತ್ಯದ ಸಟ್ಟಾಹಿಪ್ ಜಿಲ್ಲೆಯ ಮೌಂಟೇನ್ ಬಿ ನೈಟ್‌ಸ್ಪಾಟ್‌ನಲ್ಲಿ ತಡರಾತ್ರಿ 1 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ರಕ್ಷಣಾ ತಂಡ ಪೋಸ್ಟ್ ಮಾಡಿದ ವಿಡಿಯೋ ತುಣುಕುಗಳಲ್ಲಿ ಬೆಂಕಿ ಹಬ್ಬುತ್ತಿದ್ದಂತೆ ಕ್ಲಬ್‌ನಲ್ಲಿ ಇದ್ದ ಜನರು ಕಿರುಚುತ್ತಾ ಓಡಿಹೋಗುತ್ತಿರುವುದನ್ನು ಗಮನಿಸಬಹುದಾಗಿದೆ. ಹಲವು ಮಂದಿಯ ಬಟ್ಟೆಗಳು ಸುಟ್ಟುಹೋಗಿವೆ.

ಅಗ್ನಿಶಾಮಕ ಸಿಬ್ಬಂದಿ ಹರ ಸಾಹಸ ಪಟ್ಟು ಸುಮಾರು ಮೂರು ಗಂಟೆಗಳ ನಂತರ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅಗ್ನಿ ಅವಘಡದಲ್ಲಿ ಮೃತಪಟ್ಟವರೆಲ್ಲರೂ ಥಾಯ್ ಪ್ರಜಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಕ್ಕವಿಲ್ಲದಷ್ಟು ಬಾರ್‌ಗಳು ಮತ್ತು ನೈಟ್‌ಕ್ಲಬ್‌ಗಳಿರುವ ಥೈಲ್ಯಾಂಡ್‌ನಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಪ್ರಮುಖ ವಿಚಾರ ಎಂಬುದು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತಾಗಿದೆ.
2009 ರಲ್ಲಿ ಬ್ಯಾಂಕಾಕ್‌ನ ಸ್ವಾಂಕಿ ಸ್ಯಾಂಟಿಕಾ ಕ್ಲಬ್‌ನಲ್ಲಿ ಹೊಸ ವರ್ಷದ ಮುನ್ನಾದಿನದ ಪಾರ್ಟಿಯಲ್ಲಿ ಬೆಂಕಿ ಅವಘಡ ನಡೆದು, 67 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
2012 ರಲ್ಲಿ ವಿದೇಶಿ ಪ್ರವಾಸಿಗರ ಇಷ್ಟದ ಸ್ಥಳವಾದ ಫುಕೆಟ್ ದ್ವೀಪದ ನೈಟ್ ಕ್ಲಬ್‌ನಲ್ಲಿ ವಿದ್ಯುತ್ ದೋಷದಿಂದ ಉಂಟಾದ ಬೆಂಕಿ ಅವಘಡದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದರು.












Click it and Unblock the Notifications