• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೈಡನ್‌ಗೆ ಬಕೆಟ್ ಹಿಡಿದ ಚೀನಾ, ‘ನಮ್ಮ-ನಿಮ್ಮ ಸಂಬಂಧ ಹೀಗೆ ಇರಲಿ’

|

ಅಬ್ಬಬ್ಬಾ ಒಬ್ಬರ ಜಾಗ ಆಕ್ರಮಿಸಿಕೊಂಡು ನನ್ನದು ಅಂತಾ ವಾದಿಸೋದನ್ನ ಹಾಗೂ ಮತ್ತೊಬ್ಬರಿಗೆ ಬಕೇಟ್ ಹಿಡಿಯೋದನ್ನ ಚೀನಾ ನೋಡಿ ಕಲಿಯಬೇಕು. ಏಕೆಂದರೆ ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆ ಬಗ್ಗೆ ಇದುವರೆಗೆ ಸ್ಪಷ್ಟನಿಲುವು ತಳೆಯದ ಚೀನಾ, ಬೈಡನ್ ಪ್ರೆಸಿಡೆಂಟ್ ಆಗೋದು ಪಕ್ಕಾ ಅನ್ನೋದನ್ನ ಕನ್ಫರ್ಮ್ ಮಾಡ್ಕೊಂಡು ಬಕೇಟ್ ಹಿಡಿಯಲು ಮುಂದಾಗಿದೆ.

ಅಮೆರಿಕ-ಚೀನಾ ಸಂಬಂಧ ಹೀಗೆ ಮುಂದುವರಿಯಲಿ. ಜಗತ್ತಿನ 2 ಅತಿದೊಡ್ಡ ಆರ್ಥಿಕತೆಗಳ ನಡುವೆ ಉತ್ತಮ ಸಂಬಂಧ ಇರಬೇಕು ಎಂಬುದು ಜಗತ್ತಿನ ಬಯಕೆ. ಹೀಗೆ ನಮ್ಮ ಮಧ್ಯೆ ಉತ್ತಮ ಸಂಬಂಧ ಇದ್ದರೆ ಮಾತ್ರ ಜಗತ್ತಿಗೆ ಒಳ್ಳೆಯದು. ಇಬ್ಬರ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸೋಣ ಎಂದು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಹೇಳಿದ್ದಾರೆ.

ನೂತನ ಅಧ್ಯಕ್ಷ ಜೋ ಬೈಡನ್‌ಗೆ ಅಭಿನಂದಿಸಲು ನಿರಾಕರಿಸಿದ ಚೀನಾ

ಈ ಮೂಲಕ ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡನ್ ಮನವೊಲಿಕೆ ಮಾಡಲು ಜಿನ್‌ಪಿಂಗ್ ಮುಂದಾಗಿದ್ದಾರೆ. ಆದರೆ ಇಷ್ಟುದಿನ ಚೀನಾ ತೆಪ್ಪಗೆ ಇದ್ದಿದ್ದು ಏಕೆ? ಎಂಬ ಬಗ್ಗೆ ಚೀನಾ ಸ್ಪಷ್ಟ ಉತ್ತರ ನೀಡಿಲ್ಲ. ಅಮೆರಿಕ ಅಧ್ಯಕ್ಷರ ಆಯ್ಕೆ ನಡೆದು ಎಷ್ಟೋ ದಿನಗಳು ಕಳೆದರೂ ಚೀನಾ ಮಾತ್ರ ಹೊಸ ಅಧ್ಯಕ್ಷರಿಗೆ ಶುಭ ಕೋರದೆ ಕುತಂತ್ರ ಬುದ್ಧಿ ಅನುಸರಿಸಿತ್ತು.

ಟ್ರಂಪ್ ಭಯಕ್ಕೆ ತೆಪ್ಪಗೆ ಇತ್ತ ಚೀನಾ..?

ಟ್ರಂಪ್ ಭಯಕ್ಕೆ ತೆಪ್ಪಗೆ ಇತ್ತ ಚೀನಾ..?

ಟ್ರಂಪ್ ಬಗ್ಗೆ ನಿಮಗೇ ಗೊತ್ತಿದೆ. ಟ್ರಂಪ್ ತನ್ನ ವಿರುದ್ಧ ಮಾತನಾಡುವವರನ್ನು ಅಥವಾ ತನಗೆ ಅಸಮಾಧಾನ ಉಂಟುಮಾಡುವ ಯಾವುದೇ ದೇಶವನ್ನು ಪ್ರೀತಿಸುವುದಿಲ್ಲ. ಅದರಲ್ಲೂ ಚೀನಾ ಎಂದರೆ ಟ್ರಂಪ್‌ಗೆ ಮೊದಲೇ ಉರಿ. ಪರಿಸ್ಥಿತಿ ಹೀಗಿರುವಾಗ ಎಡವಟ್ಟು ಬೇಡ ಅನ್ನೋದೆ ಚೀನಾ ಉದ್ದೇಶವಾಗಿತ್ತು. ಅಮೆರಿಕದಲ್ಲಿ ಬೈಡನ್ ಗೆಲುವು ಪಕ್ಕಾ ಆಗಿದ್ದರೂ ಟ್ರಂಪ್ ಕೋರ್ಟ್ ಮೊರೆ ಹೋಗಿದ್ದರು. ಮತ ಎಣಿಕೆ ಹಾಗೂ ಚುನಾವಣಾ ಫಲಿತಾಂಶದ ಬಗ್ಗೆ ಟ್ರಂಪ್ ನೂರಾರು ಆರೋಪ ಮಾಡುತ್ತಿದ್ದರು. ಹೀಗಾಗಿ ಅಕಸ್ಮಾತ್ ಟ್ರಂಪ್ ಗೆದ್ದುಬಿಟ್ಟರೆ ತಮ್ಮ ಬುಡಕ್ಕೆ ಬೆಂಕಿ ಗ್ಯಾರಂಟಿ ಅಂತಾ ಹೆದರಿದ್ದ ಚೀನಿಯರು ತೆಪ್ಪಗಿದ್ದರು ಅಂತಾ ಹೇಳಲಾಗುತ್ತಿದೆ.

‘ಟ್ರಂಪ್ ಸಹವಾಸವೇ ಬೇಡಪ್ಪ’

‘ಟ್ರಂಪ್ ಸಹವಾಸವೇ ಬೇಡಪ್ಪ’

ಈಗಾಗಲೇ ‘ಟ್ರೇಡ್ ವಾರ್' ಘಟನೆಯಿಂದ ಚೀನಾ ಬೆಚ್ಚಿದೆ. ಅದ್ಯಾವ ಘಳಿಗೆಯಲ್ಲಿ ಚೀನಾ ವಿರುದ್ಧ ಟ್ರಂಪ್ ಟ್ರೇಡ್ ವಾರ್ ನಡೆಸಿದ್ದರೋ ಗೊತ್ತಿಲ್ಲ, ರಾಕೆಟ್ ವೇಗದಲ್ಲಿ ಬೆಳೆಯುತ್ತಿದ್ದ ಚೀನಿಯರ ಆರ್ಥಿಕತೆ ಮಕಾಡೆ ಮಲಗಿದೆ. ಕೊರೊನಾ ಹೊಡೆತದ ಜೊತೆಗೆ ಟ್ರೇಡ್ ವಾರ್ ಕೂಡ ಚೀನಿಯರ ಎಕಾನಮಿಗೆ ಭಾರಿ ಪೆಟ್ಟನ್ನೇ ಕೊಟ್ಟಿದೆ. ಹೀಗಾಗಿ ಟ್ರಂಪ್ ಸೋಲು ಕನ್ಫರ್ಮ್ ಆಗುವ ಮೊದಲೇ ಬೈಡನ್‌ಗೆ ವಿಶ್ ಮಾಡೋದು ಬೇಡ ಎಂಬ ಐಡಿಯಾ ಜಿನ್‌ಪಿಂಗ್ ಮತ್ತು ತಂಡದ್ದಾಗಿತ್ತು. ಈ ಕಾರಣಕ್ಕೆ ಇಷ್ಟುದಿನ ಕಾದು ಬೈಡನ್‌ಗೆ ಜಸ್ಟ್ ವಿಶ್ ಮಾಡಿದೆ ಚೀನಾದ ಕಮ್ಯೂನಿಸ್ಟ್ ಸರ್ಕಾರ.

ಅಬ್ಬಬ್ಬಾ, ಅತ್ಯಂತ ಕಳಪೆ ಸಂಬಂಧ..!

ಅಬ್ಬಬ್ಬಾ, ಅತ್ಯಂತ ಕಳಪೆ ಸಂಬಂಧ..!

ನಿಮಗಿದು ತಿಳಿದಿರಲಿ, ಹಲವು ದಶಕಗಳ ಹಿಂದೆ ಭಾರತಕ್ಕೆ ಮಗ್ಗಲ ಮುಳ್ಳಾಗಿ ಚೀನಾ ಬೆಳೆಯಲು ಕಾರಣ ಇದೇ ಅಮೆರಿಕ. ಒಂದು ಕಡೆ ರಷ್ಯಾ ಬೆಂಬಲವನ್ನು ಪಡೆದಿದ್ದ ಚೀನಾಗೆ ಅಮೆರಿಕ ಕೂಡ ಒಳಗೊಳಗೆ ಬೆಂಬಲ ನೀಡುತ್ತಾ ಬಂದಿತ್ತು. ಆದರೆ ಈ ಚೀನಿಯರು ಬಕೇಟ್ ರಾಜಕಾರಣದಲ್ಲಿ ಅದೆಷ್ಟು ನಿಸ್ಸೀಮರು ಎಂದರೆ, ಅತ್ತ ತನಗೆ ಪ್ರಾಣ ಕೊಡಲು ಸಜ್ಜಾಗಿದ್ದ ರಷ್ಯಾ ದೇಶಕ್ಕೂ ದ್ರೋಹ ಬಗೆದು ಅಮೆರಿಕದ ಸಹಾಯ ಪಡೆಯುತ್ತಿದ್ದರು. ಹೀಗೆ ಅಮೆರಿಕದ ಸಹಾಯ ಪಡೆಯುತ್ತಲೇ ಜಗತ್ತಿನ ಅತಿದೊಡ್ಡ ಉತ್ಪಾದನಾ ವಲಯ ಸೃಷ್ಟಿಸಿಕೊಂಡು, ಈಗ ಜಗತ್ತಿನ 2ನೇ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಿದೆ ಚೀನಾ. ಆದರೆ ಚೀನಾದ ಬೆಳವಣಿಗೆ ವಿಶ್ವದ ದೊಡ್ಡಣ್ಣ ಅಮೆರಿಕದ ಬುಡಕ್ಕೆ ಬೆಂಕಿ ಇಟ್ಟಿದೆ. ಏಕೆಂದರೆ ವಿಶ್ವದ ಬಾಸ್ ಆಗೋದೇ ಚೀನಾದ ಮುಂದಿರುವ ಟಾರ್ಗೆಟ್. ಹೀಗೆ ತನಗೆ ಬಿಸಿ ತಾಗುತ್ತಿದ್ದಂತೆ ಅಮೆರಿಕ ಎಚ್ಚೆತ್ತು, ಚೀನಾಗೆ ಪಾಠ ಕಲಿಸಲು ಮುಂದಾಗಿದೆ. ಅದರಲ್ಲೂ ನೂತನ ಅಧ್ಯಕ್ಷ ಬೈಡನ್ ಚೀನಿ ಗ್ಯಾಂಗ್‌ಗೆ ಗುನ್ನಾ ಕೊಡಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಅನೇಕ ದೇಶಗಳು ಪ್ರತಿಕ್ರಿಯೆ ನೀಡಿರಲಿಲ್ಲ

ಅನೇಕ ದೇಶಗಳು ಪ್ರತಿಕ್ರಿಯೆ ನೀಡಿರಲಿಲ್ಲ

ರಷ್ಯಾ ಹಾಗೂ ಚೀನಾ ಸೇರಿದಂತೆ ಅನೇಕ ದೇಶಗಳು ಇದುವರೆಗೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. 'ಬೈಡನ್ ಅವರು ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಘೋಷಣೆ ಮಾಡಿರುವುದನ್ನು ಗಮನಿಸಿದ್ದೇವೆ. ನಮ್ಮ ತಿಳಿವಳಿಕೆ ಪ್ರಕಾರ ಚುನಾವಣೆಯ ಫಲಿತಾಂಶವನ್ನು ಅಮೆರಿಕ ಕಾನೂನು ಹಾಗೂ ಪ್ರಕ್ರಿಯೆಗಳಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದರು.

English summary
Finally, China Congratulates US President Joe Biden After Winning Against Donald Trump. Chinese president says ‘healthy and stable’ relations between world’s top two economies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X