ವಿಶ್ವಸಂಸ್ಥೆಗೂ ಕಾಲಿಟ್ಟ ಡೆಡ್ಲಿ ಕೊರೊನಾ ವೈರಸ್..!
ನ್ಯೂಯಾರ್ಕ್, ಮಾರ್ಚ್ 13: ಜಗತ್ತಿನ ನಿದ್ದೆಗೆಡಿಸಿರುವ ಮಾರಕ ಕೊರೊನಾ ವೈರಸ್ ಸೋಂಕು ವಿಶ್ವಸಂಸ್ಥೆಗೂ ಕಾಲಿಟ್ಟಿದೆ. ವಿಶ್ವಸಂಸ್ಥೆಯ ಮಹಿಳಾ ರಾಜತಾಂತ್ರಿಕರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಾತ್ರಿಯಾಗಿದೆ.
ಫಿಲಿಪೈನ್ಸ್‌ನ ಮಹಿಳಾ ರಾಜತಾಂತ್ರಿಕಿಯೊಬ್ಬರು ವಿಶ್ವಸಂಸ್ಥೆಯ ನ್ಯೂಯಾರ್ಕ್ ಕಚೇರಿಗೆ ಭೇಟಿ ನೀಡಿದಾಗ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಫಿಲಿಪೈನ್ಸ್‌ನ ಯುಎನ್ ರಾಯಭಾರಿ ಕಿರಾ ಅವರಿಗೆ ಸೋಂಕು ತಗುಲಿದೆ ಎಂದು ರಾಯಿಟರ್ಸ್ ಶುಕ್ರವಾರ ವರದಿ ಮಾಡಿದೆ.
ಫಿಲಿಪೈನ್ ನಲ್ಲಿ ತೀವ್ರ ನಿಗಾವಹಿಸಲಾಗಿದೆ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಸ್ವಯಂ-ಸಂಪರ್ಕತಡೆಯನ್ನು ಸೂಚಿಸಲಾಗಿದೆ. ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಲಾಗುತ್ತದೆ ಎಂದು ಫಿಲಿಪೈನ್ ಸರ್ಕಾರ ತಿಳಿಸಿದೆ.

ಫಿಲಿಪೈನ್ಸ್ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಟಿಯೋಡೋರೊ ಲೊಕ್ಸಿನ್ ಟ್ವಿಟ್ಟರ್ನಲ್ಲಿ ಇದನ್ನು ಖಚಿತಪಡಿಸಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ನಮ್ಮ ರಾಜತಾಂತ್ರಿಕರು ಚಿಕ್ಕವರಾಗಿದ್ದಾರೆ, ಚುರುಕಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫ್ಲೋರಿಡಾದಿಂದ ಹಿಂದಿರುಗಿದ್ದಾರೆ. ಅವರು ಬೇಗ ಗುಣಮುಖರಾಗಲಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications