ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಮಸೀದಿ ಪ್ರವೇಶಕ್ಕೆ ನಿರ್ಬಂಧ ವಿರೋಧಿಸಿ ವಿಡಿಯೋ

|
Google Oneindia Kannada News

ನವದೆಹಲಿ, ಏಪ್ರಿಲ್ 16: ಕೊರೊನಾವೈರಸ್ ಸೋಂಕು ಹರಡದಂತೆ ಕೇಂದ್ರ ಸರ್ಕಾರ ವಿಧಿಸಿರುವ ಲಾಕ್ಡೌನ್ ಎರಡನೇ ಅವಧಿಗೆ ವಿಸ್ತರಣೆಗೊಂಡಿದೆ. ಮೇ 3ರ ತನಕ ನಿರ್ಬಂಧ ಜಾರಿಯಲ್ಲಿರಲಿದೆ. ಎರಡನೇ ಅವಧಿಯಲ್ಲೂ ದೇಗುಲ, ಮಸೀದಿ, ಚರ್ಚ್ ಸೇರಿದಂತೆ ಎಲ್ಲಾ ಪ್ರಾರ್ಥನಾ ಮಂದಿರಗಳನ್ನು ಮುಚ್ಚಲು ನಿರ್ದೇಶನ ನೀಡಲಾಗಿದೆ.

ಈ ನಡುವೆ ಮಸೀದಿಗೆ 5ಕ್ಕಿಂತ ಹೆಚ್ಚು ಮಂದಿ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ. ನಿರ್ಬಂಧ ವಿರೋಧಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಡುತ್ತಿದೆ.

Fake News: ಒಂದೊಂದು ಧರ್ಮದವರಿಗೆ ಒಂದೊಂದು ಐಸೋಲೇಟೆಡ್ ವಾರ್ಡ್!Fake News: ಒಂದೊಂದು ಧರ್ಮದವರಿಗೆ ಒಂದೊಂದು ಐಸೋಲೇಟೆಡ್ ವಾರ್ಡ್!

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ(ಮುಸ್ಲಿಂ ಮೌಲ್ವಿ) ತನ್ನ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಸರ್ಕಾರ ವಿಧಿಸಿರುವ ನಿರ್ಬಂಧವನ್ನು ನಾವು ವಿರೋಧಿಸಬೇಕು. 5ಕ್ಕಿಂತ ಹೆಚ್ಚು ಮಂದಿಯನ್ನು ಮಸೀದಿಯೊಳಗೆ ಬಿಡದಿದ್ದರೆ, ಪ್ರಾಣ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಹೇಳಲಾಗಿದೆ.

False: Video of cleric challenging closure of Mosques is from Pakistan, not India

ಈ ವಿಡಿಯೋದಲ್ಲಿ ಈ ರೀತಿ ಕರೆ ನೀಡಿದ ವ್ಯಕ್ತಿ ಭಾರತದವನು ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಈ ವಿಡಿಯೋದ ಮೂಲ ಏನು? ಯಾವ ಪ್ರದೇಶದಲ್ಲಿ ನಡೆದ ಘಟನೆ ಎಂದು ಪ್ರಶ್ನಿಸಿದ್ದಾರೆ.

Fake: ಗುಜರಾತ್‌ನಲ್ಲಿ ಲಾಕ್‌ಡೌನ್ ನಿಯಂತ್ರಿಸಲು ಭಾರತೀಯ ಸೇನೆ ಪ್ರವೇಶ?Fake: ಗುಜರಾತ್‌ನಲ್ಲಿ ಲಾಕ್‌ಡೌನ್ ನಿಯಂತ್ರಿಸಲು ಭಾರತೀಯ ಸೇನೆ ಪ್ರವೇಶ?

ಸತ್ಯಾಸತ್ಯತೆ: ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಕಳೆದ ತಿಂಗಳು ಮಾನ್ಸೆರ್ಹಾದಲ್ಲಿ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮದಲ್ಲಿ ಕೇಳಿದ ಬಂದ ಭಾಷಣವಾಗಿದೆ. ಜಮಾತ್ ಇ ಇಸ್ಲಾಂನ ಮುಖಂಡ ಮುಫ್ತಿ ಕಿಫಾಯಾತುಲ್ಲಾ ನೀಡಿದ ಭಾಷಣದ ವಿಡಿಯೋ ಇದಾಗಿದೆ. ಅಮೆರಿಕದ ನಿರ್ದೇಶನದಂತೆ ಈ ರೀತಿ ನಿರ್ಬಂಧ ವಿಧಿಸಲಾಗಿದೆ.

ನಾವು ನಮ್ಮ ಪ್ರಾಣತ್ಯಾಗಕ್ಕೂ ಸಿದ್ಧ, ಮಸೀದಿಯನ್ನು ನಿರ್ಜನಗೊಳಿಸುವುದಿಲ್ಲ, 5 ಮಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಸೀದಿಯನ್ನು ಪ್ರವೇಶಿಸುವುದಿಲ್ಲ ಎಂಬ ಆದೇಶವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದು ಪಾಕಿಸ್ತಾನ ಮೂಲದ ವಿಡಿಯೋ ಎಂದು ಉಸ್ಮಾನ್ ಅಲಿ ಎಂಬುವರು ಟ್ವಿಟ್ಟರ್ ನಲ್ಲಿ ದೃಢಪಡಿಸಿದ್ದು, ವಿಡಿಯೋ ವೈರಲ್ ಆದ ಬಳಿಕ ಕಿಫಾಯತುಲ್ಲಾ ಬಂಧನವಾಗಿತ್ತು, ಪ್ರತಿಬಾರಿ ಈ ವಿಡಿಯೋ ನೋಡಿದಾಗ, ಇಂಥ ಮೂರ್ಖರಿಂದ ನಮ್ಮನ್ನು ರಕ್ಷಿಸು ಎಂದು ಅಲ್ಲಾಹ್ ನಲ್ಲಿ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

English summary
A video of a man addressing a group of people and saying that they should oppose the government order prohibiting entry into Mosques. He says that if the government does not allow more than 5 persons into Mosques, then the people are ready to give up their lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X