ಸ್ವೀಡನ್ ಸೆಕ್ಸ್ ಚಾಂಪಿಯನ್‌ಶಿಪ್: ಇಲ್ಲಿದೆ ಸ್ಫೋಟಕ ಮಾಹಿತಿ!
ಸ್ವೀಡನ್: ಮನುಷ್ಯ ತಾಂತ್ರಿಕವಾಗಿ ಬೆಳೆದಂತೆ ಅವನನ್ನು ದಾರಿ ತಪ್ಪಿಸುವವರ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಹೀಗೆ ಸ್ವೀಡನ್ ಸೆಕ್ಸ್ ಚಾಂಪಿಯನ್‌ಶಿಪ್ ಬಗ್ಗೆ ಸುದ್ದಿ ಹಬ್ಬಿ, ಎಲ್ಲೆಲ್ಲೂ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಆದರೆ ಇದೀಗ ಸೆಕ್ಸ್ ಚಾಂಪಿಯನ್‌ಶಿಪ್ ಅಸಲಿ ಬಂಡವಾಳ ಬಯಲಾಗಿದೆ. ಹಾಗಾದ್ರೆ ಏನಿದು ಸೆಕ್ಸ್ ಚಾಂಪಿಯನ್‌ಶಿಪ್ ಕಥೆ? ಬನ್ನಿ ತಿಳಿಯೋಣ.
ಕೆಲವು ದಿನದ ಹಿಂದೆ ಸುದ್ದಿಯೊಂದು ಸಂಚಲನ ಸೃಷ್ಟಿಸಿತ್ತು. ಅದರಲ್ಲೂ ಪಡ್ಡೆ ಹೈಕ್ಳು ಈ ಸುದ್ದಿ ಕೇಳ್ತಾ ಇದ್ದಂತೆ ಸುಸ್ತಾಗಿ ಹೋಗಿದ್ರು. ಅದೇನೆಂದರೆ ಸ್ವೀಡನ್ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜನೆ ಮಾಡುತ್ತಿದೆ ಅಂತಾ! ಅಲ್ಲದೆ ಈ ಸ್ವೀಡನ್ ಸೆಕ್ಸ್ ಚಾಂಪಿಯನ್‌ಶಿಪ್ ನಿಯಮಗಳ ಬಗ್ಗೆ ಕೇಳಿ ಹುಡುಗರ ತಲೆ ಸುತ್ತಿ ಹೊಗಿತ್ತು. ಹೀಗೆ ಸುದ್ದಿ ಪ್ರಕಟ ಆಗುತ್ತಿದ್ದಂತೆಯೇ ಟ್ರೆಂಡ್ ಕೂಡ ಕ್ರಿಯೇಟ್ ಆಗಿ, ಸಿಕ್ಕಾಪಟ್ಟೆ ಜನ ಸರ್ಚಿಂಗ್ ನಡೆಸಿದ್ದರು. ಆದ್ರೆ ಈ ಸುದ್ದಿ ಬಂಡವಾಳ ಈಗ ಬಯಲಾಗಿದೆ (sweden sex championship).

ಸೆಕ್ಸ್ ಚಾಂಪಿಯನ್‌ಶಿಪ್‌ಗೆ ಸ್ವೀಡನ್ ಪರ್ಮಿಷನ್?
ಅಷ್ಟಕ್ಕೂ ಭಾರತ ಸೇರಿ ಯುರೋಪ್, ಅಮೆರಿಕ, ಏಷ್ಯಾ, ಆಫ್ರಿಕಾ ಮತ್ತಿತರ ದೇಶದ ಕೆಲವು ಪ್ರಮುಖ ವೆಬ್‌ಸೈಟ್‌ಗಳು ಈ ಸೆಕ್ಸ್ ಚಾಂಪಿಯನ್‌ಶಿಪ್ ಬಗ್ಗೆ ರಿಪೋರ್ಟ್ ಮಾಡಿದ್ದವು. ಇದೇ ಕಾರಣಕ್ಕೆ ಸ್ವೀಡನ್ ಸೆಕ್ಸ್ ಚಾಂಪಿಯನ್‌ಶಿಪ್ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಟ ಕೂಡ ಬಲು ಜೋರಾಗಿತ್ತು. ಲೈಂಗಿಕತೆಯನ್ನೂ ಕ್ರೀಡೆ ಅಂತಾ ಈಗ ಸ್ವೀಡನ್ ಸರ್ಕಾರ ಗುರುತಿಸಿದೆ. ಇದೇ ಕಾರಣಕ್ಕೆ ಜೂನ್ 8ರಂದು ಗೋಥನ್‌ಬರ್ಗ್ ಸಿಟಿಯಲ್ಲಿ ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ಸೆಕ್ಸ್ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಸ್ವೀಡನ್ ಕ್ರೀಡಾ ಇಲಾಖೆ ಕೂಡ ಇದಕ್ಕೆ ಪರ್ಮಿಷನ್ ಕೊಟ್ಟಿದೆ ಅನ್ನೋ ಸುದ್ದಿ ಹಬ್ಬಿತ್ತು!
ಸೆಕ್ಸ್ ಚಾಂಪಿಯನ್‌ಶಿಪ್ ನಿಯಮ ಹೀಗಿತ್ತು!
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಸೆಕ್ಸ್ ಚಾಂಪಿಯನ್‌ಶಿಪ್ ನಿಯಮಗಳನ್ನೂ ಪ್ರಕಟ ಮಾಡಲಾಗಿತ್ತು. ಸೆಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು 6 ಗಂಟೆಗಳ ತನಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. 45 ನಿಮಿಷದಿಂದ ಹಿಡಿದು 1 ಗಂಟೆಯ ತನಕ ಗ್ಯಾಪ್ ಕೂಡ ಸಿಗುತ್ತೆ. ಇಂತಹ ಆಟವನ್ನ ಆಯೋಜನೆ ಮಾಡಿದ ಹಿನ್ನೆಲೆ ಈಗಾಗಲೇ 20ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಹೆಸರು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಸೆಕ್ಸ್ ಚಾಂಪಿಯನ್‌ಶಿಪ್ ಅನ್ನೋದೆ ಸುಳ್ಳು ಅಂತಾ ಗೊತ್ತಾಗಿದೆ. ಈ ಕುರಿತು ಪ್ರಕಟವಾಗಿದ್ದ ಸುದ್ದಿಗಳನ್ನ ಸ್ವತಃ ಸ್ವೀಡನ್ ತಳ್ಳಿಹಾಕಿದೆ.
ಎಲ್ಲಾ ಸುಳ್ಳು.. ಎಲ್ಲಾ ಸುಳ್ಳು!
ಹೌದು ಸ್ವೀಡನ್ ಸೆಕ್ಸ್ ಚಾಂಪಿಯನ್‌ಶಿಪ್ ಕುರಿತು ಹರಡಿದ್ದ ವದಂತಿಯನ್ನ ಸ್ವತಃ ಸ್ವೀಡನ್ ಕ್ರೀಡಾ ಒಕ್ಕೂಟ ತಿರಸ್ಕರಿಸಿದೆ. ಈಗ ಹರಡಿರುವ ಮಾಹಿತಿ ಸುಳ್ಳು, ನಾವು ಇಂತಹ ಯಾವ ಕ್ರೀಡೆಯನ್ನೂ ಆಯೋಜನೆ ಮಾಡಿಲ್ಲ ಎಂದಿದೆ ಸ್ವೀಡನ್. ಅಲ್ಲದೆ ಅಂತರರಾಷ್ಟ್ರೀಯವಾಗಿ ಹಬ್ಬಿದ್ದ ಸೆಕ್ಸ್ ಚಾಂಪಿಯನ್‌ಶಿಪ್ ಸುದ್ದಿ ಶುದ್ಧ ಸುಳ್ಳು. ಅಂಥ ಯಾವ ಕ್ರೀಡೆಯನ್ನು ಇಲ್ಲಿ ಆಯೋಜಿಸುತ್ತಿಲ್ಲ, ಹಾಗೇ ಲೈಂಗಿಕತೆಗೆ ಕ್ರೀಡಾ ಮಾನ್ಯತೆ ನೀಡಿಲ್ಲ ಎಂದು ಸ್ವೀಡನ್ ಕ್ರೀಡಾ ಒಕ್ಕೂಟ ಸ್ಪಷ್ಟವಾಗಿ ತಿಳಿಸಿದೆ. ಈ ಮೂಲಕ ಪಡ್ಡೆ ಹೈಕ್ಳ ಆಸೆಗೂ ಬೆಂಕಿ ಬಿದ್ದಂತಾಗಿದೆ.
ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದ್ದು ಸ್ವೀಡನ್ ಭಾಷೆಯ ಪ್ರಮುಖ ಪತ್ರಿಕೆಯ ವ್ಯಕ್ತಿ ಎಂದು ಆರೋಪಿಸಲಾಗಿದೆ. ಡ್ರಾಗನ್ ಬ್ರಾಟಿಕ್ ಲೈಂಗಿಕತೆಯನ್ನ ಕ್ರೀಡೆಯನ್ನಾಗಿ ವಿಭಾಗ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಆದರೆ ಅರ್ಜಿಯನ್ನು ಕ್ರಿಡಾ ಒಕ್ಕೂಟ ತಿರಸ್ಕರಿಸಿತ್ತು. ಈ ಕಾರಣಕ್ಕೆ ಇಂತಹ ಕೆಲಸ ನಡೆದಿರಬಹುದು ಎನ್ನಲಾಗುತ್ತಿದೆ. ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಸ್ವೀಡನ್ ಸೆಕ್ಸ್ ಚಾಂಪಿಯನ್‌ಶಿಪ್ ನೋಡಲು ಕಾಯುತ್ತಿದ್ದವರಿಗೆ ಈಗ ನಿರಾಸೆ ಎದುರಾಗಿದೆ. ಅಲ್ಲದೆ ಇಂಟರ್‌ನೆಟ್‌ನಲ್ಲಿ ಈ ವಿಚಾರ ಟ್ರೆಂಡ್ ಕ್ರಿಯೇಟ್ ಮಾಡಿತ್ತು ಅಂದರೆ ನೀವೆ ಲೆಕ್ಕಹಾಕಿ ಹೇಗಿತ್ತು ಇದರ ಹವಾ ಅಂತಾ!












Click it and Unblock the Notifications