ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗ್ನ ಸ್ತನ ತೋರಿಸುವ ಫೋಟೊಗಳ ನಿಷೇಧ ತೆರವಿಗೆ ಫೇಸ್‌ಬುಕ್, ಇನ್‌ಸ್ಟಾ ನಿರ್ಧಾರ: ಇದು ಸುದೀರ್ಘ ಹೋರಾಟವೊಂದರ ಪರಿಣಾಮ

|
Google Oneindia Kannada News

ನ್ಯೂಯಾರ್ಕ್‌, ಜನವರಿ 19: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಮುಂದಾಗಿವೆ.

ನಗ್ನ ಸ್ತನಗಳನ್ನು ತೋರಿಸುವ ಫೋಟೊಗಳ ನಿಷೇಧ ತೆರವಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳು ನಿರ್ಧಾರ ಮಾಡಿವೆ ಎಂದು ವರದಿ ಹೇಳಿದೆ.

ಉದ್ಯೋಗಕ್ಕೆ ಆಘಾತ: ಸಾವಿರಾರು ಉದ್ಯೋಗಿಗಳಿಗೆ ಫೇಸ್‌ಬುಕ್ ಗೇಟ್ ಪಾಸ್! ಉದ್ಯೋಗಕ್ಕೆ ಆಘಾತ: ಸಾವಿರಾರು ಉದ್ಯೋಗಿಗಳಿಗೆ ಫೇಸ್‌ಬುಕ್ ಗೇಟ್ ಪಾಸ್!

ಒಂದು ದಶಕದ ಸುದೀರ್ಘ ಹೋರಾಟದ ನಂತರ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಾಮಾಜಿಕ ಮಾಧ್ಯಮಗಳು ಮುಂದಾಗಿವೆ.

Facebook, Instagram To Lift Ban On Images Of Bare Breasts: Report

'Free the Nipple' ಎಂಬ ಒಂದು ದಶಕದ ಅಭಿಯಾನದ ನಂತರ ಈ ನಿರ್ಧಾರ ಹೊರಬಂದಿದೆ.

ಈ ಅಭಿಯಾನವು ಸ್ತನಗಳ ಫೋಟೋಗಳನ್ನು ನಿಷೇಧಿಸಿದ್ದರ ವಿರುದ್ಧವಾಗಿದೆ. ಈಗ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ಗಳು ಕಟ್ಟುನಿಟ್ಟಾದ ನಿಯಮವನ್ನು ತೆಗೆದುಹಾಕಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ದಿ ಗಾರ್ಡಿಯನ್‌ನ ವರದಿಯ ಪ್ರಕಾರ, ಮೆಟಾದ ಮೇಲ್ವಿಚಾರಣಾ ಮಂಡಳಿಯು ನಗ್ನ-ಎದೆಯ ಮಹಿಳೆಯರ ಫೋಟೊಗಳಿಗೆ ನಿರ್ಬಂಧ ಹೇರುವುದರ ಕುರಿತಾಗಿ ಕೂಲಂಕುಷ ಮೇಲ್ವಿಚಾರಣೆ ಮಾಡಿದೆ.

Facebook, Instagram To Lift Ban On Images Of Bare Breasts: Report

'ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳನ್ನು ನಾವು ಗೌರವಿಸಬೇಕಿದೆ. ಇದನ್ನು ಬದಲಾಯಿಸುವ ಅಗತ್ಯವಿದೆ' ಎಂದು ಮೆಟಾದ ಮೇಲ್ವಿಚಾರಣಾ ಮಂಡಳಿಯು ಶಿಫಾರಸು ಮಾಡಿದೆ.

ಮಂಡಳಿಯ ಶಿಫಾರಸುಗಳನ್ನು ಮೆಟಾ ಅನುಸರಿಸುವ ಸಾಧ್ಯತೆಯಿದೆ ಎಂದು 'ದಿ ಗಾರ್ಡಿಯನ್‌' ತಿಳಿಸಿದೆ.

ಮಂಡಳಿಯು ತನ್ನ ಶಿಫಾರಸಿನಲ್ಲಿ, 'ಹಳೆಯ ನೀತಿಯು ಲಿಂಗಗಳ ನಡುವೆ ತಾರತಮ್ಯ ಮಾಡುತ್ತದೆ. ಈ ದೃಷ್ಟಿಕೋನ ಬದಲಾಗಬೇಕಿದೆ. ಪುರುಷ ಮತ್ತು ಮಹಿಳೆಯರ ದೇಹಗಳ ನಡುವಿನ ವ್ಯತ್ಯಾಸವನ್ನು ಹಳೆಯ ನೀತಿ ಆಧರಿಸಿದೆ' ಎಂದು ಹೇಳಿದೆ.

Facebook, Instagram To Lift Ban On Images Of Bare Breasts: Report

'ಸ್ಪಷ್ಟ, ವಸ್ತುನಿಷ್ಠ, ಹಕ್ಕುಗಳನ್ನು ಗೌರವಿಸುವ ಮಾನದಂಡಗಳನ್ನು ವ್ಯಾಖ್ಯಾನಿಸಬೇಕು' ಎಂದು ಮಂಡಳಿಯು ಹೇಳಿದೆ.

'ಇದರಿಂದಾಗಿ ಎಲ್ಲಾ ರೀತಿಯ ಜನರನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ' ಎಂದೂ ಮಂಡಳಿ ತಿಳಿಸಿದೆ.

ಶಿಕ್ಷಣ ತಜ್ಞರು, ಹಕ್ಕುಗಳ ತಜ್ಞರು ಮತ್ತು ವಕೀಲರನ್ನು ಒಳಗೊಂಡಿರುವ ಮೇಲ್ವಿಚಾರಣಾ ಮಂಡಳಿಯನ್ನು ಕಂಪನಿಯು ರಚಿಸಿತ್ತು

ಮೆಟಾದ ಕಟ್ಟುನಿಟ್ಟಾದ ನಗ್ನತೆಯ ನೀತಿಯು ತೀವ್ರ ಚರ್ಚೆಯ ವಿಷಯವಾಗಿದೆ.

English summary
The report said that Facebook, Instagram have decided to remove the ban on photos showing bare breasts,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X