ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ನ ಹೈಸ್ಕೂಲ್ ಎದುರು ಆತ್ಮಹತ್ಯಾ ದಾಳಿ, ಎಂಟು ಮಂದಿ ಸಾವು

|
Google Oneindia Kannada News

ಅಲ್ಪಸಂಖ್ಯಾತ ಹಜರಾ ಸಮುದಾಯದ ಮೇಲೆ ತಾಲಿಬಾನ್ ದಾಳಿ ಖಂಡಿಸಿ, ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಸಮೀಪವೇ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ ಎಂಟು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ. ರಾಜಧಾನಿ ಕಾಬೂಲ್ ನ ಪ್ರೌಢಶಾಲೆಯ ಎದುರು ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಕಂಡಂತೆ ಹಲವಾರು ಮಂದಿ ದೇಹಗಳು ನೆಲದ ಮೇಲೆ ಬಿದ್ದಿದೆ. "ಇಸ್ತಿಕ್ ಲಲ್ ಪ್ರೌಢಶಾಲೆಯ ಬಳಿ ಭಾರೀ ಸ್ಫೋಟ ಸಂಭವಿಸಿತು. ಅದರ ಬಳಿಯಲ್ಲೇ ಪ್ರತಿಭಟನೆ ಹಾಗೂ ಪ್ರದರ್ಶನ ನಡೆಯುತ್ತಿತ್ತು" ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, ಕನಿಷ್ಠ 13 ಮಂದಿ ಸಾವುಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, ಕನಿಷ್ಠ 13 ಮಂದಿ ಸಾವು

ಹತ್ತರಿಂದ ಹದಿನೈದು ಮಂದಿ ಗಾಯಾಳುಗಳು ನೆಲದ ಮೇಲೆ ಬಿದ್ದಿದ್ದರು. ಅಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುದ್ದವು. ಇದು ಆತ್ಮಹತ್ಯಾ ಬಾಂಬ್ ದಾಳಿಯೋ ಅಥವಾ ಬಾಂಬ್ ಇಟ್ಟು, ಸ್ಫೋಟಿಸಲಾಗಿದೆಯೋ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Explosion in front of high school in Kabul, 8 people dead, many injured

ತಾಲಿಬಾನ್ ಉಗ್ರರಿಂದ ನಿರಂತರವಾಗಿ ಹಜರಾ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಘಜ್ನಿ ಪ್ರಾಂತ್ಯದ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಸರಕಾರವು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾನಿರತರು ಆಗ್ರಹಿಸುತ್ತಿದ್ದರು.

English summary
Casualties are feared after a huge explosion rocked Kabul on Monday close to where scores of Afghans had been protesting against Taliban attacks on the minority Hazara ethnic group. 8 people dead and many injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X