ಇಬ್ಬರ ಜಗಳದಲ್ಲಿ ತಗ್ಲಾಕ್ಕೊಂಡು ಒದೆ ತಿನ್ನುತ್ತಾ ಜಪಾನ್ & ದಕ್ಷಿಣ ಕೊರಿಯಾ?

ಯುದ್ಧ ಅನ್ನೋದೆ ಹೀಗೆ ಹಿಂದೆ, ಮುಂದೆ ಯಾರೇ ಬಂದ್ರೂ ಕೇರ್ ಮಾಡದೆ ರಕ್ತಪಾತದ ಒನ್‌ಲೈನ್ ಅಜೆಂಡಾ ಮೂಲಕ ಮುನ್ನುಗ್ಗುತ್ತದೆ. ಅದರಲ್ಲೂ ಈ ರಷ್ಯಾ ಮತ್ತು ಉಕ್ರೇನ್ ವಾರ್ ಇದೆಯಲ್ಲ, ಈ ಯುದ್ಧ ಇನ್ನೊಂದು ಲೆವೆಲ್ ತಲುಪಿದೆ. ಒಬ್ಬರ ಮೇಲೆ ಮತ್ತೊಬ್ಬರು ಅಣುಬಾಂಬ್ ಹಾಕುವ ಹಂತಕ್ಕೂ ತಲುಪುವ ಸೂಚನೆ ನೀಡುತ್ತಿದ್ದಾರೆ. ಕ್ಷಣಕ್ಷಣಕ್ಕೂ ಹೀಗೆ ಪರಿಸ್ಥಿತಿ ಕೈಮೀರಿ ಹೋದಾಗ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 3ನೇ ಕಣ್ಣು ಬಿಡಲು ಸಿದ್ಧವಾಗಿದ್ದಾರಂತೆ!

ಹೌದು, ರಷ್ಯಾ VS ಉಕ್ರೇನ್ ನಡುವೆ ಭೀಕರ ಕಾಳಗ ನಡೆಯುವ ಸಂದರ್ಭದಲ್ಲಿ ಸುಮ್ಮನೆ ಇರದ ದಕ್ಷಿಣ ಕೊರಿಯಾ & ಜಪಾನ್ ದೇಶಗಳು ಮಧ್ಯ ಪ್ರವೇಶ ಮಾಡುತ್ತಿವೆ. ಅಮೆರಿಕದ ಪರವಾಗಿ ನಿಂತಿರುವ ದಕ್ಷಿಣ ಕೊರಿಯಾ & ಜಪಾನ್ ಉಕ್ರೇನ್‌ಗೆ ಸಹಾಯ ಮಾಡುತ್ತಿವೆ. ಆದರೆ ಇದು ರಷ್ಯಾಗೆ ಪರೋಕ್ಷವಾಗಿ ಸಮಸ್ಯೆ ಉಂಟು ಮಾಡುತ್ತಿದೆ. ಜಪಾನ್ ಬಳಿ ಇರುವ ವಾಯು ರಕ್ಷಣಾ ವ್ಯವಸ್ಥೆ ಉಕ್ರೇನ್‌ಗೆ ಸಿಗುತ್ತಿದೆ. ಅಂದ್ರೆ ರಷ್ಯಾ ಕ್ಷಿಪಣಿಗಳ ದಾಳಿಯನ್ನ ಎದುರಿಸಲು ಈ ಮೂಲಕ ಜಪಾನ್ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯವನ್ನ ಮಾಡುತ್ತಿದೆ. ಈ ಪರಿಸ್ಥಿತಿ ನೋಡಿ ರಷ್ಯಾ ರೊಚ್ಚಿಗೆದ್ದು ಜಪಾನ್ & ದಕ್ಷಿಣ ಕೊರಿಯಾಗೆ ಖಡಕ್ ವಾರ್ನ್ ಮಾಡಿದೆ.

Explore Why Russia Angered Against Japan And South Korea Over Ukraine Matter

ಸುಮ್ಮನೆ ಇದ್ರೆ ಸರಿ, ಇಲ್ಲ ಅಂದ್ರೆ...

ಜಪಾನ್ ಮತ್ತು ದಕ್ಷಿಣ ಕೊರಿಯಾ ಈಗ ಅಮೆರಿಕದ ಸ್ನೇಹಿತ ರಾಷ್ಟ್ರಗಳು. ಹೀಗಾಗಿ ಎರಡೂ ದೇಶಗಳು ಅಮೆರಿಕ ಹೇಳಿದಂತೆ ಕೇಳುವ ಅನಿವಾರ್ಯತೆಗೆ ಸಿಲುಕಿವೆ. ಇದೇ ಕಾರಣದಿಂದ, ಉಕ್ರೇನ್‌ಗೆ ಸಹಾಯ ಮಾಡುತ್ತಿವೆ. ಆದರೆ ಈ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಕೆಂಡದಂತಹ ಕೋಪ ಬಂದಿದೆ ಎನ್ನುತ್ತಿವೆ ವರದಿಗಳು. ಇದರ ಪರಿಣಾಮ ಎನ್ನುವ ರೀತಿ, ಇದೀಗ ರಷ್ಯಾದ ವಿದೇಶಾಂಗ ಇಲಾಖೆ ನೇರವಾಗಿ ಎಚ್ಚರಿಕೆ ಸಂದೇಶವನ್ನ ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ರವಾನಿಸಿದೆ. ಉಕ್ರೇನ್‌ಗೆ ಈ 2 ದೇಶಗಳು ಸಹಾಯವನ್ನ ಮಾಡುತ್ತಿರುವ ನಿಲುವನ್ನು ರಷ್ಯಾ ಟೀಕಿಸಿದೆ. ಹಾಗೇ ನಮ್ಮ & ನಿಮ್ಮ ಸಂಬಂಧ ಹಾಳಾಗುತ್ತೆ ಎಂದಿದೆ.

ಜಪಾನ್‌ಗೆ ಧಮ್ಕಿ ಹಾಕಿದ ರಷ್ಯಾ?

ರಷ್ಯಾ ಮನಸ್ಸು ಮಾಡಿದರೆ, ತನ್ನ ಶತ್ರುಗಳಿಗೆ ಏನ್ ಬೇಕಾದರೂ ಮಾಡುತ್ತೆ ಅನ್ನೋದು ಉಕ್ರೇನ್ ವಿಚಾರದಲ್ಲಿ ನಿಜವಾಗಿದೆ. ಕಳೆದ 2 ವರ್ಷಗಳಿಂದ ಉಕ್ರೇನ್ ಎಲ್ಲಾ ರೀತಿ ಕಷ್ಟ, ನಷ್ಟಗಳನ್ನು ಎದುರಿಸುತ್ತಿದೆ. ಹೀಗಿದ್ದಾಗ ಜಪಾನ್ ದೇಶದ ನಾಯಕರು ಅಮೆರಿಕದ ಒತ್ತಡ & ಆದೇಶಕ್ಕೆ ಮಣಿದು ಉಕ್ರೇನ್‌ಗೆ ಸಹಾಯ ಮಾಡುತ್ತಿರುವ ಆರೋಪವಿದೆ. ಹೀಗಿದ್ದಾಗಲೇ ಜಪಾನ್‌ಗೆ ಕೂಡ ರಷ್ಯಾ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದ್ದು, ರಷ್ಯಾ ಹಾಗೂ ಜಪಾನ್ ಸಂಬಂಧ ಈಗಾಗಲೇ ಕೆಟ್ಟು ಹೋಗಿದೆ. ಜಪಾನ್ ಇದೇ ರೀತಿ ವರ್ತನೆ ಮಾಡಿ ಉಕ್ರೇನ್‌ಗೆ ನೆರವು ನೀಡುವುದು ಮುಂದುವರಿದರೆ 2 ದೇಶದ ಸಂಬಂಧ ಹಳಸಿ ಹೋಗಲಿದೆ ಎಂದಿದೆ.

Explore Why Russia Angered Against Japan And South Korea Over Ukraine Matter

ಪುಟಿನ್ ಮಾಡಿರುವ ಐಡಿಯಾ ಏನು?

ಉಕ್ರೇನ್ ಪರವಾಗಿ ಅಮೆರಿಕ ಸೇರಿದಂತೆ ಜಗತ್ತಿನ ಹತ್ತಾರು ದೇಶಗಳು ನಿಂತಿದ್ದರೂ ರಷ್ಯಾಗೆ ಯುದ್ಧ ನಿಲ್ಲಿಸುವ ಮನಸ್ಸು ಆಗಿಲ್ಲ. ಅದರಲ್ಲೂ ಏನೆಲ್ಲಾ ಸಂಕಷ್ಟ ಎದುರಿಸುತ್ತಿದ್ದರೂ, ಈ ವಿಚಾರದಲ್ಲಿ ರಷ್ಯಾ ಹಿಂದೆ ಸರಿಯುತ್ತಿಲ್ಲ. ಹೀಗೆ ರಷ್ಯಾ ಅಧ್ಯಕ್ಷ ಪುಟಿನ್, ಈ ಮೂಲಕ ಅಮೆರಿಕ & ಪಾಶ್ಚಿಮಾತ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಬೇರೆಯದ್ದೇ ರೀತಿಯಲ್ಲಿ ಆಘಾತ ನೀಡಲು ಪ್ಲ್ಯಾನ್ ಮಾಡಿರುವಂತೆ ಕಾಣುತ್ತಿದೆ.

ಒಟ್ಟಾರೆ ಹೇಳುವುದಾದರೆ ಸಣ್ಣದಾಗಿ ಮುಗಿದು ಹೋಗಬೇಕಿದ್ದ ಜಗಳ ಈಗ ಕಾಡ್ಗಿಚ್ಚಿನ ರೂಪ ಪಡೆದಿದೆ. ರಷ್ಯಾ & ಉಕ್ರೇನ್ ವಾರ್ ತಣ್ಣಗಾಗಿಸಲು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದರೂ, ಅದ್ಯಾವುದೂ ಉಪಯೋಗಕ್ಕೆ ಬರುತ್ತಿಲ್ಲ. ಹೀಗಾಗಿ ಮತ್ತೊಂದು ಮಹಾಯುದ್ಧ ನಡೆಯುತ್ತಾ? ಎಂಬ ತಲೆ & ಬುಡ ಇಲ್ಲದ ಚರ್ಚೆ ನಡೆಯುತ್ತಿದೆ. ಇದಕ್ಕೆಲ್ಲಾ ಉತ್ತರವನ್ನ ಹುಡುಕೋದಕ್ಕೆ ಮತ್ತಷ್ಟು ದಿನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+