ಹೆಚ್ಚು ಮಕ್ಕಳಿಗೆ ಜನ್ಮ ನೀಡಿ ಅಂತಾ ಕಣ್ಣೀರು ಹಾಕಿದ ಅಧ್ಯಕ್ಷ!

ಭಾರತದ ಜನಸಂಖ್ಯೆ ಇನ್ನೇನು 150 ಕೋಟಿ ಗಡಿಯಲ್ಲಿ ತೇಲಾಡುತ್ತಿದೆ. ಸ್ವಲ್ಪ ದಿನದಲ್ಲಿ ಪಕ್ಕ ಒಂದೂವರೆ ಶತಕ ಬಾರಿಸುತ್ತೆ ಭಾರತ. ಹೀಗೆ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಸ್ ಮಾಡುತ್ತಿದೆ ಸರ್ಕಾರ. ದೇಶದ ಜನಸಂಖ್ಯೆ ಕಡಿಮೆ ಆದರೆ ಸಾಕಪ್ಪಾ ಅಂತಾ, ಸರ್ಕಾರವೂ ಪ್ರಾರ್ಥನೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಆದ್ರೆ ಇಲ್ಲೊಂದು ದೇಶದ ಅಧ್ಯಕ್ಷ ಮಹಾಶಯ ತನ್ನ ದೇಶದಲ್ಲಿ, ಮಹಿಳೆಯರು ಹೆಚ್ಚು ಮಕ್ಕಳಿಗೆ ಜನ್ಮ ನೀಡಿಲ್ಲ ಅಂತಾ ಅತ್ತಿದ್ದಾನೆ!

ಯೆಸ್.. ಉತ್ತರ ಕೊರಿಯಾ ದೇಶದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಅನ್ನೋ ಕಾರಣಕ್ಕೆ ಈಗ ಅಲ್ಲಿನ ಅಧ್ಯಕ್ಷ, ಅಂದರೆ ಸರ್ವಾಧಿಕಾರಿ ಕಣ್ಣೀರು ಹಾಕಿದ್ದಾನೆ. ದೇಶದಲ್ಲಿ ಜನನ ಪ್ರಮಾಣ ಕುಸಿತ ತಡೆಯುವುದು ಮಹಿಳೆಯರ ಕರ್ತವ್ಯ. ನಮ್ಮ ಸರ್ಕಾರ ಮಹಿಳೆಯರಿಗೆ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಮನವಿ ಮಾಡುತ್ತಿದೆ ಎಂದು ಕಿಮ್ ತಿಳಿಸಿದ್ದಾನೆ. ಹೀಗೆ ಕಿಮ್ ಜಾಂಗ್ ಉನ್ ತನ್ನ ದೇಶದ ಪರಿಸ್ಥಿತಿ ಬಗ್ಗೆ ರಾಷ್ಟ್ರೀಯ ತಾಯಂದಿರ ಸಭೆಯಲ್ಲಿ ಮಾತನಾಡುವಾಗ ಸಡನ್ ಕಣ್ಣೀರು ಹಾಕಿದ್ದಾನಂತೆ. ಆ ವಿಡಿಯೋ ಇಲ್ಲಿದೆ, ಮುಂದೆ ಓದಿ.

Explore Why North Korean President Kim Jong Un Cried In Public Meeting

ಕುಸಿಯುತ್ತಿದೆ ಉತ್ತರ ಕೊರಿಯಾ ಜನಸಂಖ್ಯೆ!

ನಿಮಗೆಲ್ಲಾ ಗೊತ್ತಿದ್ದಂತೆ ಉತ್ತರ ಕೊರಿಯಾ ಒಂದು ಕಮ್ಯುನಿಸ್ಟ್ ಆಡಳಿತ ಇರುವ ದೇಶವಾಗಿದೆ. ಹೀಗಾಗಿ ಮೊದಲು ಈ ದೇಶದಲ್ಲಿ ಜನಸಂಖ್ಯೆ ಹೆಚ್ಚಳವನ್ನ ಒಂದು ಶಾಪ ಎನ್ನುವಂತೆಯೇ ನಂಬಲಾಗಿತ್ತು. ಇದೇ ಕಾರಣಕ್ಕೆ 1970-80ರ ಸಮಯದಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಲು ನಿಯಮ ಜಾರಿಗೆ ತರಲಾಗಿತ್ತು. ಆದರೆ ಆ ನಂತರ ಉತ್ತರ ಕೊರಿಯಾದಲ್ಲಿ ಜನಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿಯಲು ಆರಂಭಿಸಿದ ನಂತರ ಆ ಕಾನೂನು ತೆಗೆದು ಹಾಕಿದ್ದರು.

ಪ್ರಜೆಗಳು ಕೂಡ ಅತ್ತು ಬಿಟ್ಟರು!

ಆದರೆ ಆಗ ಮಾಡಿರುವ ತಪ್ಪಿಗೆ ಈಗ ಉತ್ತರ ಕೊರಿಯಾದ ಮಹಿಳೆಯರಲ್ಲಿ ಮಕ್ಕಳಿಗೆ ಜನ್ಮ ನೀಡುವ ಶಕ್ತಿ ಕುಂದುತ್ತಿದೆ ಎಂದು ಆರೋಪಿಸಲಾಗಿದೆ. ಈ ಸಮಯದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಣ್ಣೀರು ಹಾಕುತ್ತ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಹೀಗೆ ತಮ್ಮ ದೇಶದ ದೊರೆ ಅಳುವಾಗ ಪ್ರಜೆಗಳು ಸುಮ್ಮನೆ ಕೂತರೆ ಜೀವ ಇರುತ್ತಾ? ಇಲ್ಲ ಅವರನ್ನೆಲ್ಲ ಸಾಯಿಸೋದಕ್ಕೂ ಕಿಮ್ ಜಾಂಗ್ ಉನ್ ಹಿಂದೆ, ಮುಂದೆ ಯೋಚನೆ ಮಾಡೋದಿಲ್ಲ. ಈ ಕಾರಣಕ್ಕೆ ಸರ್ವಾಧಿಕಾರಿ ಕಿಮ್ ಅಳುವಾಗ ಆತನ ದೇಶದ ಪ್ರಜೆಗಳು ಕೂಡ ಕಣ್ಣೀರು ಹಾಕಿ ನೋವು ತೋಡಿಕೊಂಡಿದ್ದಾರೆ. ಆ ವಿಡಿಯೋಗಾಗಿ ಮುಂದೆ ಓದಿ.

Explore Why North Korean President Kim Jong Un Cried In Public Meeting

ಜನಸಂಖ್ಯೆ ಹೆಚ್ಚಿಸುವ ಅನಿವಾರ್ಯತೆ

ಉತ್ತರ ಕೊರಿಯಾದಲ್ಲಿ ಕಡ್ಡಾಯ ಸೇನಾ ಸೇವೆ ಇದ್ದು, ಹೀಗಾಗಿ ಅಲ್ಲಿನ ಮಿಲಿಟರಿ ಶಕ್ತಿಗೆ ಹೆಚ್ಚು ಜನಸಂಖ್ಯೆ ಅಗತ್ಯ. ಆದರೆ ಈಗಿನ ಪರಿಸ್ಥಿತಿ ಮುಂದುವರಿದರೆ, ಮುಂದೆ ಈ ದೇಶ ಶತ್ರುಗಳ ವಿರುದ್ಧ ಹೋರಾಡಲು ಆಗಲ್ಲ ಎಂಬುದೇ ಕಿಮ್ ಜಾಂಗ್ ಉನ್‌ಗೆ ಕಾಡುತ್ತಿರುವ ಚಿಂತೆ. ಹೀಗಾಗಿಯೇ ಜನಸಂಖ್ಯೆ ಹೆಚ್ಚಿಸುವ ಅನಿವಾರ್ಯತೆಗೆ ಉತ್ತರ ಕೊರಿಯಾ ಸಿಲುಕಿದೆ ಎನ್ನುತ್ತಿವೆ ಉತ್ತರ ಕೊರಿಯಾದ ಶತ್ರು ರಾಷ್ಟ್ರಗಳು.

ಶತ್ರುಗಳಿಗೆ ಭಯಪಡಿಸುವ ಸರ್ವಾಧಿಕಾರಿ ಈಗ ಈ ರೀತಿ ಕಣ್ಣಿರು ಹಾಕಿರುವ ವಿಚಾರ ಎಲ್ಲ ಕಡೆ ಸದ್ದು ಮಾಡುತ್ತಿದೆ. ಅದ್ರಲ್ಲೂ ಉತ್ತರ ಕೊರಿಯಾದ ಶತ್ರು ದೇಶಗಳು ಇದನ್ನೆಲ್ಲಾ ನೋಡಿ ನಾಟಕ ಅಂತಿದ್ದಾರೆ. ಆದರೆ ಕಿಮ್ ಜಾಂಗ್ ಉನ್ ಮಾತ್ರ ಅದಕ್ಕೆ ರಿಯಾಕ್ಷನ್ ಕೊಟ್ಟಿಲ್ಲ, ಕೆಲ ದಿನಗಳ ಹಿಂದಷ್ಟೇ ಕಿಮ್ ಜಾಂಗ್ ಉನ್ ಉಪಗ್ರಹ ಉಡಾಯಿಸಿದ್ದ. ಹಾಗೇ ದೊಡ್ಡಣ್ಣನ ದೇಶ ಎಂದು ಕರೆಸಿಕೊಳ್ಳುವ ಅಮೆರಿಕಗೆ ಕೂಡ ಭಯಪಡಿಸಿದ್ದ. ಆದರೆ ಈಗ ನೋಡಿದರೆ ತನ್ನ ದೇಶದಲ್ಲಿ ಜನಸಂಖ್ಯೆ ಕುಸಿಯುತ್ತಿದೆ ಅಂತಾ ಅತ್ತು, ಕಣ್ಣೀರು ಹಾಕಿ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ್ದಾನೆ. ಅಲ್ಲದೆ ಮುಂದೆ ತನ್ನ ದೇಶದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಹೊಸ ಹೊಸ ಪ್ಲ್ಯಾನ್ ರೂಪಿಸಿದ್ದಾನೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+