• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಮಧ್ಯಂತರ ಚುನಾವಣೋತ್ತರ ಸಮೀಕ್ಷೆ: ಮತದಾರರ ಒಲವು ಯಾರ ಕಡೆಗೆ?

|
Google Oneindia Kannada News

ವಿಶ್ವದ ಗಮನ ಸೆಳೆಯುತ್ತಿರುವ ಅಮೆರಿಕದ ಮಧ್ಯಂತರ ಚುನಾವಣೆ ಮಂಗಳವಾರ ನಡೆದ ಮತದಾನ ಪೂರ್ಣಗೊಂಡಿದೆ. ಈ ಚುನಾವಣೆಗಳು ಅಮೆರಿಕದ ಎರಡೂ ಪಕ್ಷಗಳಿಗೆ ಅಂದರೆ ರಿಪಬ್ಲಿಕನ್ ಪಕ್ಷ ಮತ್ತು ಡೆಮಾಕ್ರಟಿಕ್ ಪಕ್ಷಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಅಂಕಿ-ಅಂಶಗಳ ಗಣಿತವನ್ನು ನೀವು ಅರ್ಥಮಾಡಿಕೊಂಡರೆ ಈ ಚುನಾವಣೆಯ ಫಲಿತಾಂಶಗಳು 2024ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗಳ ಮೇಲೂ ಪರಿಣಾಮ ಬೀರಬಹುದು. ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಮತ್ತು ಬರಾಕ್ ಒಬಾಮಾ ಕೂಡ ಈ ಚುನಾವಣೆಗಳಲ್ಲಿ ಹೆಚ್ಚು ಪ್ರಚಾರ ಮಾಡಿದ್ದಾರೆ. ಈ ಚುನಾವಣೆಗಳು ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರ ಅಧಿಕಾರಕ್ಕೆ ಬಹಳ ಮುಖ್ಯ ಎಂದು ಹೇಳಲಾಗುತ್ತದೆ.

ವಿಶ್ವದ ಶ್ರೀಮಂತರಿಂದ ಪರಿಸರಕ್ಕೆ ಹೇಗೆಲ್ಲಾ ಹಾನಿಯಾಗುತ್ತಿದೆ? ಬೆಚ್ಚಿಬೀಳಿಸುತ್ತದೆ ಈ ವರದಿವಿಶ್ವದ ಶ್ರೀಮಂತರಿಂದ ಪರಿಸರಕ್ಕೆ ಹೇಗೆಲ್ಲಾ ಹಾನಿಯಾಗುತ್ತಿದೆ? ಬೆಚ್ಚಿಬೀಳಿಸುತ್ತದೆ ಈ ವರದಿ

ಅಮೆರಿಕದಲ್ಲಿ ಮಂಗಳವಾರ ನಡೆದ ಸಂಸತ್‌ನ ಮಧ್ಯಂತರ ಚುನಾವಣೆಗಳ ಸಮೀಕ್ಷೆಗಳ ಪ್ರಕಾರ, ಅಮೆರಿಕದ ಮತದಾರರು ಮತದಾನದ ಸಮಯದಲ್ಲಿ ಹಣದುಬ್ಬರ ಮತ್ತು ಗರ್ಭಪಾತದ ವಿಷಯಕ್ಕೆ ಹೆಚ್ಚಿನ ಗಮನವನ್ನು ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಹೆಚ್ಚುತ್ತಿರುವ ಅಪರಾಧ, ವಲಸೆ ಮತ್ತು ಬಂದೂಕು ನೀತಿಗಳ ಬಗ್ಗೆ ಮತದಾರರು ಒತ್ತು ನೀಡಿದ್ದಾರೆ.

ಬೈಡೆನ್ ಅವರ ಅಧಿಕಾರಾವಧಿಯಲ್ಲಿ ಅಮೆರಿಕ ಪ್ರಜೆಗಳು ಸಂತೋಷವಾಗಿಲ್ಲ ಮತ್ತು ಮುಂದಿನ ಬಾರಿ ಅವರನ್ನು ಅಧ್ಯಕ್ಷರನ್ನಾಗಿ ನೋಡಲು ಬಯಸುವುದಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳಿಂದ ತಿಳಿದುಬಂದಿದೆ.

ಬೈಡೆನ್ ಆಡಳಿತ ವಿರೋಧಿ ಅಲೆ ?

ಬೈಡೆನ್ ಆಡಳಿತ ವಿರೋಧಿ ಅಲೆ ?

ಎಡಿಸನ್ ರಿಸರ್ಚ್ ಪ್ರಕಾರ, 10 ಮತದಾರರಲ್ಲಿ ಆರು ಮಂದಿ ಗರ್ಭಪಾತದ ಕುರಿತು ಯುಎಸ್‌ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ "ಅತೃಪ್ತಿ ಅಥವಾ ಕೋಪಗೊಂಡಿದ್ದಾರೆ". ಅದೇ ಶೇಕಡಾವಾರು ಜನರು ಗರ್ಭಪಾತ ಕಾನೂನುಬದ್ಧವಾಗಿರಬೇಕು ಎಂದು ಹೇಳಿದರು. 10 ಮತದಾರರಲ್ಲಿ ಸುಮಾರು ಮೂರು ಜನ ಹಣದುಬ್ಬರ ಮತ್ತು ಗರ್ಭಪಾತ ತಮ್ಮ ಪ್ರಮುಖ ಕಾಳಜಿ ಎಂದು ಹೇಳಿದರು. ಸುಮಾರು 10 ಮತದಾರರಲ್ಲಿ ಒಬ್ಬರು ಅಪರಾಧ, ವಲಸೆ ಮತ್ತು ಬಂದೂಕು ನೀತಿ ತಮ್ಮ ಪ್ರಮುಖ ಕಾಳಜಿ ವಹಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಎಡಿಸನ್‌ರ ನಿರ್ಗಮನ ಸಮೀಕ್ಷೆಯ ಪ್ರಕಾರ, 10 ಮತದಾರರಲ್ಲಿ ಏಳು ಮಂದಿ ಅಮೆರಿಕದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಆದರೆ 10ರಲ್ಲಿ ಏಳು ಮಂದಿ ಅಧ್ಯಕ್ಷ ಜೋ ಬೈಡೆನ್‌ಗೆ ಎರಡನೇ ಅವಧಿಯನ್ನು ನೋಡಲು ಬಯಸುವುದಿಲ್ಲ. ಅಧ್ಯಕ್ಷ ಬೈಡೆನ್ ವಿರುದ್ಧ ಅಮೆರಿಕ ವಿರೋಧಿ ಅಲೆ ವೇಗವಾಗಿ ಹೆಚ್ಚುತ್ತಿದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳಿಂದ ಅಮೆರಿಕದಲ್ಲಿ ಸ್ಪಷ್ಟವಾಗಿದೆ.

ಬೈಡೆನ್ ಆಡಳಿತವನ್ನು ದೂಷಿಸಿದೆ ರಿಪಬ್ಲಿಕನ್ ಪಕ್ಷ

ಬೈಡೆನ್ ಆಡಳಿತವನ್ನು ದೂಷಿಸಿದೆ ರಿಪಬ್ಲಿಕನ್ ಪಕ್ಷ

ಅಮೆರಿಕದ ಮಧ್ಯಂತರ ಚುನಾವಣೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ಏಕೆಂದರೆ ವಿಜೇತರು 435-ಸೀಟ್ ಯುಎಸ್‌ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು 35 ಖಾಲಿ ಇರುವ ಯುಎಸ್ ಸೆನೆಟ್ ಸ್ಥಾನಗಳಲ್ಲಿ ಭಾರಿ ಪ್ರಾಬಲ್ಯ ಸಾಧಿಸುತ್ತಾರೆ. ಏರುತ್ತಿರುವ ಬೆಲೆಗಳು ಮತ್ತು ಅಪರಾಧಗಳ ಬಗ್ಗೆ ರಿಪಬ್ಲಿಕನ್ ಪಕ್ಷವು ಬಿಡೆನ್ ಆಡಳಿತವನ್ನು ದೂಷಿಸಿದೆ. ಅಮೇರಿಕನ್ ಎಲೆಕ್ಷನ್ ಪ್ರಾಜೆಕ್ಟ್ ಪ್ರಕಾರ, ಸರಿಸುಮಾರು 43 ಮಿಲಿಯನ್ ಅಮೆರಿಕನ್ನರು ವೈಯಕ್ತಿಕವಾಗಿ ಅಥವಾ ಮೇಲ್ ಮೂಲಕ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಎಲ್ಲ ಸೀಟುಗಳ ಫಲಿತಾಂಶ ಪ್ರಕಟವಾಗಲು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಅಮೆರಿಕದ ಈ ಮಧ್ಯಂತರ ಚುನಾವಣೆಗಳು ಭಾರತದಂತಲ್ಲ. ಭಾರತದಲ್ಲಿ ಮಧ್ಯಂತರ ಚುನಾವಣೆಗಳು ಎಂದರೆ ಪ್ರಸ್ತುತ ಸರ್ಕಾರವು ಯಾವುದೋ ಕಾರಣಕ್ಕಾಗಿ ಬಿದ್ದಿದೆ ಅಥವಾ ರಾಜೀನಾಮೆ ಹಾಗೂ ಇತರೆ ಕಾರಣಗಳಿಂದ ಯಾವುದೇ ರೀತಿಯಲ್ಲಿ ಸರ್ಕಾರ ರಚನೆ ಸಾಧ್ಯವಾಗದಿದ್ದಾಗ ರಾಜ್ಯಪಾಲರು ಹೊಸ ಚುನಾವಣೆಗೆ ಶಿಫಾರಸು ಮಾಡುತ್ತಾರೆ. ಭಾರತದಲ್ಲಿ ರಾಜ್ಯಸಭಾ ಚುನಾವಣೆಗಳಂತೆ ಯುಎಸ್‌ನಲ್ಲಿ ಮಧ್ಯಂತರ ಚುನಾವಣೆಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತವೆ. ಅಮೆರಿಕದ ಅಧ್ಯಕ್ಷರು ನಾಲ್ಕು ವರ್ಷಗಳ ಕಾಲ ಚುನಾಯಿತರಾಗುತ್ತಾರೆ ಮತ್ತು ಈ ಚುನಾವಣೆಗಳು ಅಧ್ಯಕ್ಷರ ಅವಧಿಯ ಮಧ್ಯದಲ್ಲಿ ಬರುತ್ತವೆ. ಆದ್ದರಿಂದ, ಅವುಗಳನ್ನು ಮಧ್ಯಾವಧಿ ಚುನಾವಣೆಗಳು ಎಂದು ಕರೆಯಲಾಗುತ್ತದೆ.

ಜಾರ್ಜ್ ಬುಷ್ ಅವರ ರಿಪಬ್ಲಿಕನ್ ಪಕ್ಷ

ಜಾರ್ಜ್ ಬುಷ್ ಅವರ ರಿಪಬ್ಲಿಕನ್ ಪಕ್ಷ

ಭಾರತದಲ್ಲಿ ಸರ್ಕಾರದ ಸಂಸತ್ತಿನ ನಾಯಕನು ಮಂತ್ರಿಯಾಗಿದ್ದರೆ, ಅಮೇರಿಕಾದಲ್ಲಿ ಸರ್ಕಾರದ ಮುಖ್ಯಸ್ಥರು ಅಧ್ಯಕ್ಷರಾಗಿದ್ದಾರೆ. ಭಾರತದಲ್ಲಿ ಪಾರ್ಲಿಮೆಂಟ್ ಎಂದು ಕರೆಯುವುದನ್ನು ಅಮೆರಿಕದಲ್ಲಿ ಕಾಂಗ್ರೆಸ್ ಎಂದು ಕರೆಯಲಾಗುತ್ತದೆ. ಅಮೆರಿಕದಲ್ಲಿಯೂ ಕಾಂಗ್ರೆಸ್‌ನ ಎರಡು ಸದನಗಳಿವೆ - ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್. ಅಮೆರಿಕದಲ್ಲಿ ಎರಡು ಪಕ್ಷದ ವ್ಯವಸ್ಥೆ ಇದೆ. ಅಂದರೆ ಇಲ್ಲಿ ಎರಡು ಪಕ್ಷಗಳ ನಡುವೆಯೇ ಅಧಿಕಾರದ ಸಮರ. ಸಾವಿರಾರು ಪಕ್ಷಗಳು ಅಮೆರಿಕದಲ್ಲಿಲ್ಲ. ಪ್ರಸ್ತುತ ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ಸರ್ಕಾರವಿದ್ದು, ಜೋ ಬೈಡನ್ ಅಧ್ಯಕ್ಷರಾಗಿದ್ದಾರೆ. ಈ ಪಕ್ಷದ ಜನಪ್ರಿಯ ನಾಯಕರು ಕೂಡ ಬರಾಕ್ ಒಬಾಮ. ಎರಡನೇ ಪಕ್ಷವು ರಿಪಬ್ಲಿಕನ್ ಪಕ್ಷವಾಗಿದೆ. ಅದರ ನಾಯಕ ಡೊನಾಲ್ಡ್ ಟ್ರಂಪ್ ಅದರ ಮೊದಲ ಅಧ್ಯಕ್ಷರಾಗಿದ್ದರು. ಜಾರ್ಜ್ ಬುಷ್ ರಿಪಬ್ಲಿಕನ್ ಪಕ್ಷದ ನಾಯಕರೂ ಆಗಿದ್ದರು.

ಅಮೆರಿಕದಲ್ಲಿ ಒಟ್ಟು 50 ರಾಜ್ಯಗಳಿವೆ. ಪ್ರತಿಯೊಂದು ರಾಜ್ಯವು ತನ್ನದೇ ಆದ ಸ್ವತಂತ್ರ ಅಧಿಕಾರವನ್ನು ಹೊಂದಿದೆ. ಯುಎಸ್‌ ಸೆನೆಟ್‌ನಲ್ಲಿ ಪ್ರತಿ ರಾಜ್ಯದಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿಯಾಗಿ ಸೆನೆಟ್‌ನಲ್ಲಿ ಒಟ್ಟು 100 ಸದಸ್ಯರಿದ್ದಾರೆ. ಈ ಸೆನೆಟರ್‌ಗಳನ್ನು ಒಟ್ಟು 6 ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಮತ್ತೊಂದೆಡೆ, ಪ್ರತಿನಿಧಿಗಳಾಗಿರುವವರು ಎರಡು ವರ್ಷಗಳ ಕಾಲ ಚುನಾಯಿತರಾಗುತ್ತಾರೆ ಮತ್ತು ಸಣ್ಣ ಜಿಲ್ಲೆಗಳನ್ನು ಪ್ರತಿನಿಧಿಸುತ್ತಾರೆ. ರಾಜ್ಯಗಳ ರಾಜ್ಯಪಾಲರು ಮತ್ತು ಇತರ ಪ್ರತಿನಿಧಿಗಳಿಗೆ ಪ್ರತ್ಯೇಕ ಚುನಾವಣೆಗಳು ನಡೆಯುತ್ತವೆ.

2024ರ ಚುನಾವಣೆಯ ಮೇಲೆ ನೇರ ಪರಿಣಾಮ ?

2024ರ ಚುನಾವಣೆಯ ಮೇಲೆ ನೇರ ಪರಿಣಾಮ ?

ವರದಿ ಪ್ರಕಾರ ರಿಪಬ್ಲಿಕನ್ ಪಕ್ಷ ಸುಮಾರು ಇನ್ನೂರು(200) ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಡೆಮಾಕ್ರಟಿಕ್ ಪಕ್ಷವು 175 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಚುನಾವಣೆಯಲ್ಲಿ ಗೆಲುವು ಅಥವಾ ಸೋಲು ಜೋ ಬೈಡೆನ್ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಕಳೆದ ಎರಡು ವರ್ಷಗಳಲ್ಲಿ ಬಹುಮತದ ಕಾರಣ, ಜೋ ಬೈಡೆನ್ ಕಾನೂನುಗಳನ್ನು ಅಂಗೀಕರಿಸುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ. ಆದರೆ, ಮಧ್ಯಂತರ ಚುನಾವಣೆಗಳನ್ನು ಯಾವಾಗಲೂ ಅಧ್ಯಕ್ಷರು ಮತ್ತು ಅವರ ಸರ್ಕಾರದ ಕಾರ್ಯಕ್ಷಮತೆ ಮೂಲಕ ನೋಡಲಾಗುತ್ತದೆ. ಮಧ್ಯಂತರ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಹಿನ್ನಡೆ ಕಂಡ ಹಾಲಿ ಅಧ್ಯಕ್ಷರ ಕಾರ್ಯವೈಖರಿ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜೋ ಬೈಡನ್‌ಗೆ ಈ ಚುನಾವಣೆಗಳು ಮೂಗು ಮುಚ್ಚುವ ಪ್ರಶ್ನೆಯಾಗಿ ಪರಿಣಮಿಸಿವೆ. ರಿಪಬ್ಲಿಕನ್ ಪಕ್ಷವು ಬಹುಮತವನ್ನು ಪಡೆದ ತಕ್ಷಣವೇ 6 ಜನವರಿ 2021ರಂದು ಡೊನಾಲ್ಡ್ ಟ್ರಂಪ್ ಸ್ವತಃ ಸಿಕ್ಕಿಬಿದ್ದಿರುವ ಹಿಂಸಾತ್ಮಕ ಘಟನೆಗಳ ತನಿಖೆಯ ಪ್ರಕರಣಗಳನ್ನು ಮುಚ್ಚಿಹಾಕಬಹುದು.ಇದಲ್ಲದೆ, ಈ ಚುನಾವಣೆಗಳಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿ ಗೆದ್ದರೆ ಡೊನಾಲ್ಡ್ ಟ್ರಂಪ್ ಅವರೇ 2024ರ ಅಧ್ಯಕ್ಷೀಯ ಚುನಾವಣೆಗೆ ಪ್ರವೇಶಿಸಬಹುದು ಎಂಬುವುದು ಖಚಿತವಾಗಿದೆ.

English summary
An exit poll conducted on US midterm elections showed that the top issues for American voters were inflation and abortion, while seven out of 10 disapproved of current President Joe Biden for the second presidential term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X