ವಿಕಾಸವಾದ ನಿಜ, ದೇವರೇನೂ ಮಾಂತ್ರಿಕನಲ್ಲ: ಪೋಪ್

Posted By:
Subscribe to Oneindia Kannada

ರೋಮ್, ಡಿಸೆಂಬರ್ 21: ಡಾರ್ವಿನ್ನಿನ ವಿಕಾಸವಾದ ಮತ್ತು ಬಿಗ್ ಬ್ಯಾಂಗ್ ಸಿದ್ಧಾಂತಗಳು ನಿಜ. ಜಗತ್ತು ದೇವರ ಸೃಷ್ಟಿ ಎನ್ನಲಾಗುವುದಿಲ್ಲ ದೇವರೇನು ಮಾಂತ್ರಿಕನಲ್ಲ ಎಂದು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಮತ್ತೊಮ್ಮೆ ಘೋಷಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ವಿಕಾಸವಾದದ ಪರ ಮಾತನಾಡಿದ್ದ ಪೋಪ್ ಮತ್ತೊಮ್ಮೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ದೇವರ ಕುರಿತು ನಾವು ಚಿಂತಿಸುವಾಗ ಆತನೊಬ್ಬ ಮಾಂತ್ರಿಕ. ಮಂತ್ರದಂಡ ಹಿಡಿದು ಇಡೀ ವಿಶ್ವವನ್ನು ದೇವರೊಬ್ಬನೇ ಸೃಷ್ಟಿಸಿದನು ಎಂದು ತಿಳಿದಿದ್ದೇವೆ. ಆದರೆ ಇದು ನಿಜವಲ್ಲ ಎಂದಿದ್ದಾರೆ. [ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು?]

Evolution and Big Bang Theory Real, God Is Not a Magician: Pope

ರೋಮನ್ ಕ್ಯಾಥೋಲಿಕ್ ಚರ್ಚ್ ಗೂ ವಿಜ್ಞಾನಕ್ಕೂ ಎಣ್ಣೆ ಸಿಗೇಕಾಯಿ ಸಂಬಂಧ ಎಂದೇ ಎಲ್ಲರೂ ಭಾವಿಸಿರುವಾಗ ಪೋಪ್ ಫ್ರಾನ್ಸಿಸ್ ಅವರ ಹೇಳಿಕೆಯನ್ನು ಹಲವಾರು ಮಂದಿ ಸ್ವಾಗತಿಸಿ, ಪ್ರಗತಿಪರ ಚಿಂತನೆ ಎಂದಿದ್ದಾರೆ.[ಹಸ್ತಮೈಥುನ, ಸಲಿಂಗಕಾಮಕ್ಕೆ ವ್ಯಾಟಿಕನ್ ಗರಂ]

ಇಟಲಿಯ ರಾಷ್ಟ್ರೀಯ ಖಭೌತ ವಿಜ್ಞಾನ ಮಹಾ ವಿದ್ಯಾಲಯದ ಅಧ್ಯಕ್ಷ ಜಿಯೊವನಿ ಬಿನಾಮಿ ಕೂಡಾ ಪೋಪ್ ಹೇಳಿಕೆಯನ್ನು ಸ್ವಾಗತಿಸಿ, ವಿಕಾಸವಾದವನ್ನು ಒಪ್ಪಿಕೊಂಡಿರುವುದು ಮಹತ್ತರವಾಗಿದೆ ಎಂದಿದ್ದಾರೆ. [ದೇವಕಣ ವಿಶ್ವವನ್ನೇ ನಾಶ ಮಾಡಬಲ್ಲದೆ?]

ಪೋಪ್ ಅವರ ಹೇಳಿಕೆ ನಂತರ ವಿಕಾಸವಾದ, ಬಿಗ್ ಬ್ಯಾಂಗ್ ಥಿಯರಿಯನ್ನು ಚರ್ಚ್ ಒಪ್ಪಿಕೊಂಡಿದೆಯೇ? ಭೂಮಿಯ ವೈಜ್ಞಾನಿಕ ಹುಟ್ಟಿನ ರಹಸ್ಯಕ್ಕೆ ತಲೆಬಾಗಿದೆಯೆ? ಇದರಿಂದಾಗಿ ದೇವರ ಬಗ್ಗೆ ಕ್ರೈಸ್ತರಲ್ಲಿರುವ ನಂಬಿಕೆ ಬದಲಾಗುತ್ತದೆಯೆ? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ. ಭೂಮಿ ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ಸಿದ್ದಾಂತ ಪ್ರತಿಪಾದಿಸಿದ್ದ ಖಗೋಳ ವಿಜ್ಞಾನಿ ಗೆಲಿಲಿಯೊಗೆ 'ದೈವನಿಂದನೆ' ಪಟ್ಟಕೊಟ್ಟ ಪರಂಪರೆಯಿಂದ ಬಂದವರು ಈಗ ವೈಜ್ಞಾನಿಕ ತಳಹದಿಯಲ್ಲಿ ತಮ್ಮ ನಂಬಿಕೆಯನ್ನು ಬದಲಾಯಿಸಿಕೊಳ್ಳುವುದೇ? ಕಾಲವೇ ಉತ್ತರ ನೀಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The theory of evolution and the big bang are real, and God is not “a magician with a wand”, Pope Francis declared at the Pontifical Academy of Sciences.
Please Wait while comments are loading...