ಕೈಕೊಟ್ಟ ಅಮೆರಿಕ, ಒಗ್ಗಟ್ಟಿನ ಪಾಠ ಹೇಳುತ್ತಿರುವ ಯುರೋಪ್ ನಾಯಕರು?
ಅಮೆರಿಕ ನಂಬಿ ಯುದ್ಧಕ್ಕೆ ಧುಮುಕಿದರೆ ಪರಿಸ್ಥಿತಿ ಏನಾಗಲಿದೆ? ಅನ್ನೋದಕ್ಕೆ ಉಕ್ರೇನ್ ಈಗ ಉದಾಹರಣೆ ಅಂತಾ ಆರೋಪ ಮಾಡುತ್ತಿದ್ದಾರೆ ಅಮೆರಿಕದ ವಿರೋಧಿಗಳು. ಯಾಕಂದ್ರೆ ಈ ರೀತಿ ಯುದ್ಧದ ಬಲೆಯಲ್ಲಿ ಬಿದ್ದು ನರಳಿ ಹೋಗಿರುವ ಉಕ್ರೇನ್‌ಗೆ ಸಹಾಯದ ಅಗತ್ಯತೆಯು ಇರುವ ಸಮಯದಲ್ಲೇ ಕೈಕೊಟ್ಟು ಕೂತಿದೆ ಅಮೆರಿಕ. ಹೀಗಾಗಿ ಅಮೆರಿಕ ವಿರುದ್ಧ ಆಕ್ರೋಶ ಮೊಳಗಿರುವ ಸಮಯದಲ್ಲೇ ಯುರೋಪ್ ನಾಯಕರು ಉಕ್ರೇನ್ ವಿಚಾರದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ.
ಯುದ್ಧ.. ಯುದ್ಧ.. ಯುದ್ಧ... ಕಳೆದ 3 ವರ್ಷಗಳಿಂದ ಈ ಮಾತು ಸಾಮಾನ್ಯವಾಗಿದೆ. ಅದು 2022ರ ಫೆಬ್ರವರಿ 24, ಆ ದಿನ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ 3 ವರ್ಷಗಳ ಸುದೀರ್ಘ ಪಯಣ ಪೂರೈಸಲಿದೆ. ಇದು ಸಂಚಲನ ಸೃಷ್ಟಿ ಮಾಡುತ್ತಿರುವ ಈ ಸಮಯದಲ್ಲೇ, ಮತ್ತೆ ರಷ್ಯಾ & ಉಕ್ರೇನ್ ಸೇನೆಗಳು ಒಬ್ಬರ ಮೇಲೆ ಮತ್ತೊಬ್ಬರು ಭೀಕರ ದಾಳಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಯುರೋಪ್ ನಾಯಕರು ಮತ್ತು ಕೆನಡಾ ದೇಶದ ನಾಯಕರು ನೇರ ಉಕ್ರೇನ್ ನೆಲಕ್ಕೆ ಬಂದಿದ್ದಾರೆ.

ಬೇಡುವ ಸ್ಥಿತಿಯಲ್ಲಿ ಉಕ್ರೇನ್ ದೇಶ
ಸಣ್ಣ ವಿಚಾರವೇ ದೊಡ್ಡದಾಗಿ ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ಶುರುವಾಗಿತ್ತು. ಉಕ್ರೇನ್ ನ್ಯಾಟೋ ಒಕ್ಕೂಟ ಸೇರಲಿದೆ ಎನ್ನುವ ಆರೋಪ ಹೊರಿಸಿದ್ದ ರಷ್ಯಾ ಯುದ್ಧ ಸಾರಿತ್ತು ರಷ್ಯಾ & ಉಕ್ರೇನ್ ಯುದ್ಧ ನೋಡುತ್ತಿದ್ದರೆ ಒಂದೊಂದು ಕ್ಷಣವೂ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆ ಕಾಣಿಸುತ್ತಿದೆ. ಇಂತಹ ಸಮಯದಲ್ಲಿ ಅಮೆರಿಕ ನೀಡುತ್ತಿದ್ದ ನೆರವು ಬಂದ್ ಆಗಿದ್ದು, ರಷ್ಯಾ ವಿರುದ್ಧ ಹೋರಾಟ ನಡೆಸಲು ಉಕ್ರೇನ್ ನರಳುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಉಕ್ರೇನ್ ನಾಯಕರು ಯುರೋಪ್ ದೇಶಗಳ ಎದುರು ಮಂಡಿ ಊರಿ ಬೇಡುತ್ತಿದ್ದಾರೆ!
ಒಗಟ್ಟು ಪ್ರದರ್ಶಿಸಿದ ಯುರೋಪ್ ಒಕ್ಕೂಟ
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಬರೋಬ್ಬರಿ 3 ವರ್ಷ ಪೂರ್ಣಗೊಂಡ ಕಾರಣಕ್ಕೆ ಇದೀಗ ಉಕ್ರೇನ್‌ನಲ್ಲಿ ವಿವಿಧ ಕಾರ್ಯಕ್ರಮ & ಸಭೆಗಳನ್ನು ಆಯೋಜನೆ ಮಾಡಲಾಗಿದೆ. ಈ ಸಭೆಗಳಿಗೆ ಯುರೋಪ್ ದೇಶದ ದೊಡ್ಡ ದೊಡ್ಡ ನಾಯಕರೇ ಬರುತ್ತಿದ್ದಾರೆ. ಉಕ್ರೇನ್ ದೇಶದ ರಾಜಧಾನಿ ಕೀವ್‌ನಲ್ಲಿ ವಿಶೇಷ ಸಭೆ ಆಯೋಜನೆ ಮಾಡಲಾಗಿದ್ದು, ಎಲ್ಲರೂ ಒಗಟ್ಟಿನಿಂದ ಉಕ್ರೇನ್ ಬೆನ್ನಿಗೆ ನಿಲ್ಲುತ್ತಿದ್ದಾರೆ. ಈ ಮೂಲಕ, ಹೊಸ ಆಸೆಯಲ್ಲಿ ಉಕ್ರೇನ್ ಕಾಯುತ್ತಿದೆ. ಆದರೆ ಅಮೆರಿಕದ ಬೆಂಬಲ ಇಲ್ಲದೆ ಉಕ್ರೇನ್‌ಗೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ.












Click it and Unblock the Notifications