• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರಂಪ್ ಸ್ನೇಹಿತ ಎರಿಕ್ ಪ್ರಿನ್ಸ್‌ ಮೇಲೆ ಲಿಬಿಯಾ ಶಸ್ತ್ರಾಸ್ತ್ರ ನಿರ್ಬಂಧ ಉಲ್ಲಂಘನೆ ಆರೋಪ

|

ನೈರೋಬಿ, ಫೆಬ್ರವರಿ 20: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬೆಂಬಲಿಗ, ಸ್ನೇಹಿತ ಹಾಗೂ ಬ್ಲಾಕ್‌ವಾಟರ್‌ ಮಿಲಿಟರಿ ಕಂಪನಿ ಮಾಜಿ ಸಿಇಒ ಎರಿಕ್ ಪ್ರಿನ್ಸ್‌ ಅಮೆರಿಕದ ಲಿಬಿಯಾ ಶಸ್ತ್ರಾಸ್ತ್ರ ನಿರ್ಬಂಧ ಕಾನೂನನ್ನು ಉಲ್ಲಂಘಿಸಿರುವುದಾಗಿ ಅಮೆರಿಕ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದ ಮಿಲಿಟರಿ ಕಮಾಂಡರ್‌ಗೆ ಶಸ್ತ್ರಾಸ್ತ್ರಗಳನ್ನು ರವಾನಿಸುವ ಮೂಲಕ ಶಸ್ತ್ರಾಸ್ತ್ರ ನಿರ್ಬಂಧ ಕಾನೂನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದಾರೆ. ವಿದೇಶಿ ಸೈನಿಕರನ್ನು, ದಾಳಿ ನಡೆಸಲು ಯುದ್ಧ ವಿಮಾನಗಳನ್ನು, ಗನ್ ಬೋಟ್‌ಗಳನ್ನು, ಹಲವು ಶಸ್ತ್ರಾಸ್ತ್ರಗಳನ್ನು ಪೂರ್ವ ಲಿಬಿಯಾಗೆ 2019ರಲ್ಲಿ ರವಾನಿಸಿದ್ದ ಕುರಿತು ತನಿಖಾಧಿಕಾರಿಗಳು ಭದ್ರತಾ ಪಡೆಗೆ ಮಾಹಿತಿ ರವಾನಿಸಿದ್ದಾರೆ.

ವಂಚನೆ ಆರೋಪಕ್ಕೆ ಸಿಗದ ಬೆಂಬಲ: ಸ್ವಪಕ್ಷೀಯರಿಂದಲೇ ಟ್ರಂಪ್‌ಗೆ ಮುಜುಗರ

ಕಾರ್ಯಾಚರಣೆಗೆ ಎರಿಕ್, 80 ಮಿಲಿಯನ್ ಡಾಲರ್ ಹಣ ಖರ್ಚು ಮಾಡಿರುವುದಾಗಿಯೂ ತಿಳಿದುಬಂದಿದೆ. ಲಿಬಿಯಾದ ಕೆಲವು ಕಮಾಂಡರ್‌ಗಳ ಮೇಲೆ ದಾಳಿಗೆ ಹಿಟ್ ಸ್ವ್ಕಾಡ್‌ಗಳನ್ನು ರಚಿಸಿ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.

ಖಾಸಗಿ ನೌಕಾಪಡೆಯ ಮಾಜಿ ಅಧಿಕಾರಿ, ಟ್ರಂಪ್ ಶಿಕ್ಷಣ ಕಾರ್ಯದರ್ಶಿ ಬೆಟ್ಸಿ ಡೆವೋಸ್‌ನ ಸಹೋದರರಾಗಿರುವ ಪ್ರಿನ್ಸ್‌, ಟ್ರಂಪ್‌ ಗೆ ನಿರಂತರ ಬೆಂಬಲ ವ್ಯಕ್ತಪಡಿಸಿದ ಮಿತ್ರ ಕೂಡ ಆಗಿದ್ದರು. ಈ ಕುರಿತು ವಿಚಾರಣೆಗೆ ಸಹಕರಿಸಲು ಪ್ರಿನ್ಸ್‌ ನಿರಾಕರಿಸಿರುವುದಾಗಿ ತಿಳಿದುಬಂದಿದೆ. ಅವರ ವಕೀಲರು ವರದಿಯ ಕುರಿತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿಲ್ಲ. ಮಿಲಿಟರಿ ಕಾರ್ಯಾಚರಣೆಯೊಂದಿಗೆ ಪ್ರಿನ್ಸ್ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಕಳೆದ ವರ್ಷ ಪ್ರಿನ್ಸ್‌ ಪರ ವಕೀಲರು ತಿಳಿಸಿದ್ದರು.

English summary
Erik Prince, a former head of the security contractor Blackwater Worldwide and a prominent Trump supporter violated Libya arms embargo,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X