12 ವರ್ಷ ಅಮೆರಿಕದಲ್ಲಿ ದುಡಿದರೂ ಮಹಿಳೆ ಬರೀ ಕೈಯಲ್ಲಿ ವಾಪಾಸ್! ಅಲ್ಲಿ ಆಗಿದ್ದಾದ್ರು ಏನು?

ಅಮೆರಿಕಾಕ್ಕೆ ಹೋಗುವುದು ಅಲ್ಲಿ ದುಡಿಯುವುದು ಕೈ ತುಂಬಾ ಹಣ ಸಂಪಾದಿಸುವುದು ತುಂಬಾ ಜನರ ಕನಸಾಗಿರುತ್ತದೆ. ಒಂದಷ್ಟು ವರ್ಷ ಅಮೆರಿಕಾದಲ್ಲಿ ಕೆಲಸ ಮಾಡಿದರೆ ಭವಿಷ್ಯ ಭದ್ರ ಎನ್ನುವ ಭಾವನೆ ಅನೇಕರಲ್ಲಿ ಸಾಮಾನ್ಯವಾಗಿ ಇರುತ್ತದೆ. ಆದ್ರೆ ಇಲೊಬ್ಬ ಮಹಿಳೆ 12 ವರ್ಷಗಳವರಗೆ ಅಮೆರಿಕಾದಲ್ಲಿ ದುಡಿದರೂ ಬರೀ ಕೈಯಲ್ಲಿ ವಾಪಾಸಾಗುವಂತೆ ಆಗಿದೆ.

12 ವರ್ಷಗಳ ಪ್ರಯತ್ನ ಹಾಳು

ಅಮೆರಿಕದಲ್ಲಿ H-1B ವೀಸಾದ ಮೇಲೆ ಕೆಲಸ ಮಾಡುತ್ತಿರುವ ಭಾರತೀಯ ಮಹಿಳೆಯೊಬ್ಬರು NRI ಗುಂಪಿನಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. 12 ವರ್ಷಗಳ ಕಾಲ ಅಮೆರಿಕಾದಲ್ಲಿ ಕಳೆದ ನಂತರ ಬರೀ ಗೈಯ್ಯಲ್ಲಿ ಭಾರತಕ್ಕೆ ವಾಪಾಸಾಗಬೇಕಾದ ಸ್ಥಿತಿ ಎದುರಾಗಿದೆ. ಕಂಡ ಕನಸುಗಳೆಲ್ಲಾ ಕಮರಿ ಹೋಗಿದೆ. ಆ ಮಹಿಳೆ ಕನ್ಸಲ್ಟೆಂಟ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅನೇಕ H-1B ವೀಸಾ ಹೊಂದಿರುವವರನ್ನು ಐಟಿ ಸಿಬ್ಬಂದಿ ಏಜೆನ್ಸಿಗಳು ಮತ್ತು ಕನ್ಸಲ್ಟೆಂಟ್‌ ಸಂಸ್ಥೆಗಳು ನೇಮಿಸಿ ಗ್ರಾಹಕರನ್ನು ಒದಗಿಸುತ್ತದೆ. ಇಲ್ಲಿ ಕ್ಲೈಂಟ್‌ಗಳು ವೇತನವನ್ನು ನಿರ್ವಹಿಸುವುದಿಲ್ಲ. ಕನ್ಸಲ್ಟೆಂ ಟ್‌ ಅನ್ನು ಯಾರು ನೇಮಕ ಮಾಡುತ್ತಾರೆಯೋ ಅವರೇ ಸಂಬಳ ನೀಡಬೇಕಾಗುತ್ತದೆ. ಆದರೆ ಕಳೆದ ಆರು ತಿಂಗಳಿನಿಂದ ಮಹಿಳೆಯ ಕೆಲಸಕ್ಕೆ ಸಂಬಳವೇ ಸಿಗುತ್ತಿಲ್ಲ. ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ.

Employer

ಬರಿ ಗೈಯ್ಯಲ್ಲಿ ವಾಪಾಸಾಗಬೇಕಾದ ಅನಿವಾರ್ಯತೆ

ಮಹಿಳೆಯ ಉದ್ಯೋಗದಾತರು ವೇತನದಾರರ ಪಟ್ಟಿಯನ್ನು ನಿರ್ವಹಿಸದ ಕಾರಣ ಬೇರೆ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುವುದು ಕೂಡಾ ಸಾಧ್ಯವಾಗಲಿಲ್ಲ. ಮಾತ್ರವಲ್ಲ, ಮಹಿಳೆಯ H-1B ಸ್ಥಾನಮಾನವನ್ನು ಕೂಡಾ ರದ್ದುಗೊಳಿಸಲಾಗಿದೆ. ಅವರ ಪತಿಯನ್ನು H-4 ಸ್ಟೇಟಸ್‌ಗೆ ಬದಲಿಸಲಾಗಿದೆ. ಆದರೆ ಈ ಮಹಿಳೆ ಸಮಯಕ್ಕೆ ಸರಿಯಾಗಿ H-4 ಗೆ ಅರ್ಜಿ ಸಲ್ಲಿಸುವುದು ಕೂಡಾ ಸಾಧ್ಯವಾಗಲಿಲ್ಲ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ ಹನ್ನೆರಡು ವರ್ಷಗಳಿಂದ ಬದುಕು ಕಟ್ಟಿಕೊಳ್ಳುವ ಎಲ್ಲಾ ಪ್ರಯತ್ನಗಳು ಇದೀಗ ಮಣ್ಣಾಗಿ ಹೋಗಿದೆ. ಕಷ್ಟಪಟ್ಟು ನಿರ್ಮಿಸಿದ ಎಲ್ಲವನ್ನೂ ಕಳೆದುಕೊಳ್ಳುವಂತಾಗಿದೆ. ಭಾರತಕ್ಕೆ ವಾಪಸ್‌ ಬರುವುದನ್ನು ಬಿಟ್ಟು ಅವರ ಬಳಿ ಬೇರೆ ಯಾವುದೇ ಮಾರ್ಗ ಇಲ್ಲ ಎನ್ನುವಂತಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆ ಪೋಸ್ಟ್‌

12 ವರ್ಷಗಳ ಕಾಲ ಹಗಲು ರಾತ್ರಿ ದುಡಿದ ನಂತರವೂ ಇದೀಗ ಬರೀ ಗೈಯ್ಯಲ್ಲಿ ಅಮೆರಿಕವನ್ನು ಬಿಡುವಂತಾಗಿದೆ. 12 ವರ್ಷಗಳಿಂದ ಕಟ್ಟಿದ ಬದುಕು ನೆಲ ಹಿಡಿಯುವಂತಾಗಿದೆ. ಇದು ಕೇವಲ ಈ ಮಹಿಳೆಯ ಕತೆಯಲ್ಲ, ಅನೇಕ ಜನರು ಇನ್ನೂ ಇಂಥ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಾನು ಮುಂದೆ ಬಂದು ಈ ಬಗ್ಗೆ ಮಾತನಾಡುತ್ತಿದ್ದೇನೆ. ಬೇರೆಯವರು ಈ ಬಗ್ಗೆ ಮಾತನಡುತ್ತಿಲ್ಲ ಎಂದರೆ ಬೇರೆ ಯಾರಿಗೂ ಸಮಸ್ಯೆ ಇಲ್ಲ ಎಂದರ್ಥವಲ್ಲ ಎಂದು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

ವೇತನ ಇಲ್ಲದಿದ್ದರೆ ವೀಸಾವೂ ಇಲ್ಲ

ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ ನಿಯಮಗಳ ಅಡಿಯಲ್ಲಿ, H-1B ವೀಸಾ ಹೊಂದಿರುವವರು ತಮ್ಮ ನಾನ್‌ ಇಮಿಗ್ರೆಂಟ್‌ ಸ್ಟೇಟಸ್‌ ಅನ್ನು ಕೆಲಸ ಮಾಡುವ ಮೂಲಕ, ಕಾರ್ಮಿಕ ಸ್ಥಿತಿ ಅರ್ಜಿಯ ನಿಯಮಗಳ ಪ್ರಕಾರ ಕಾಯ್ದುಕೊಳ್ಳಬೇಕು. ಇಲ್ಲಿ ಅವರು ವೇತನ ಪಡೆಯುತ್ತಿರಲೇ ಬೇಕು. ಒಂದು ವೇಳೆ ಹೊಸ ಕೆಲಸಕ್ಕೆ ಸೇರಬೇಕಾದರೆ, ವೀಸಾವನ್ನು ವಿಸ್ತರಿಸಬೇಕಾದರೆ ತಾವು ಉದ್ಯೋಗದಲ್ಲಿರುವ ಬಗ್ಗೆ ಪುರಾವೆ ನೀಡಬೇಕು. ಇದಕ್ಕಾಗಿ 2 ರಿಂದ 3 ತಿಂಗಳ ಪೇ ಸ್ಟಬ್‌ಗಳನ್ನು ನೀಡಬೇಕಾಗುತ್ತದೆ.

ಕೆಲವು ಉದ್ಯೋಗದಾತರು ಹಣ ಉಳಿಸುವ ಭರದಲ್ಲಿ ಹೊಸ ಕ್ಲೈಂಟ್ ಒಪ್ಪಂದಗಳು ಸಿಗುವವರೆಗೆ ವೇತನ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಬಿಡುತ್ತಾರೆ. ಅಮೆರಿಕದ ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ, ಉದ್ಯೋಗಿಗೆ ಯಾವುದೇ ಪ್ರಾಜೆಕ್ಟ್ ಇಲ್ಲದಿದ್ದರೂ ಸಂಪೂರ್ಣ ಸಂಬಳ ನೀಡಲೇಬೇಕು. ವೇತನ ನೀಡದೇ ಬೆಂಚ್‌ನಲ್ಲಿಡುವುದು ಕಾನೂನುಬಾಹಿರ. ಒಂದು ವೇಳೆ ಉದ್ಯೋಗಿ ವೇತನ ಪಡೆಯುತ್ತಿಲ್ಲ ಎಂದಾದರೆ ಅವರ ಬಳಿ ವೇತನ ಸ್ಟಬ್ ಇರುವುದಿಲ್ಲ. ‌ವೇತನ ಪಡೆಯುವ ಪುರಾವೆ ಇಲ್ಲ ಎಂದಾದರೆ ಅವರ ಎಲ್ಲಾ ಸ್ಥಾನಮಾನವನ್ನು ರದ್ದು ಮಾಡಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+