ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದ ಎಲಾನ್‌ ಮಸ್ಕ್‌

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಡಿಸೆಂಬರ್‌ 21: ಟ್ವಿಟರ್‌ ಸಿಇಒ ಹುದ್ದೆಗೆ ಎಲೋನ್ ಮಸ್ಕ್ ಅವರು ರಾಜೀನಾಮೆ ನಿಡಲು ಮುಂದಾಗಿದ್ದಾರೆ.

ಟ್ವಿಟರ್‌ ಸಿಇಒ ಹುದ್ದೆಗೆ ಆದಷ್ಟು ಬೇಗನೇ ರಾಜೀನಾಮೆ ನೀಡುವುದಾಗಿ ಮಸ್ಕ್‌ ಬುಧವಾರ ಹೇಳಿಕೊಂಡಿದ್ದಾರೆ. ಆದರೂ, ಟ್ವಿಟರ್‌ನ ಪ್ರಮುಖ ವಿಭಾಗಗಳನ್ನು ಮುನ್ನೆಡೆಸುವುದಾಗಿಯೂ ಅವರು ತಿಳಿಸಿದ್ದಾರೆ.

'ಯಾರಾದರೂ ಮೂರ್ಖತನ ಹೊಂದಿದವರು ಟ್ವಿಟರ್‌ ಸಿಇಒ ಹುದ್ದೆಯನ್ನು ವಹಿಸಿಕೊಂಡ ತಕ್ಷಣ ನಾನು ರಾಜೀನಾಮೆ ನೀಡುತ್ತೇನೆ' ಎಂದು ಅವರು ಹೇಳಿದ್ದಾರೆ.

Elon Musk Says He Will Resign As Twitter CEO

ಆ ನಂತರ, ನಾನು ಸಾಫ್ಟ್‌ವೇರ್ ಮತ್ತು ಸರ್ವರ್‌ಗಳ ತಂಡಗಳನ್ನು ನಡೆಸುತ್ತೇನೆ ಎಂದು ಮಸ್ಕ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ಹಲವು ವಿವಾದಗಳಿಗೆ ಗುರಿಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ 'ಟ್ವಿಟರ್‌ನ ಸಿಇಒ ಸ್ಥಾನದಿಂದ ನಾನು ಕೆಳಗಿಳಿಯಬೇಕೆ?' ಎಂದು ಟ್ವಿಟಿಗರನ್ನು ಕೇಳಿದ್ದಾರೆ. ಈ ಸಮೀಕ್ಷೆಯ ಪ್ರಕಾರ, ಶೇ.57.5ರಷ್ಟು ಜನರು ಎಲಾನ್‌ ಮಸ್ಕ್‌ ಅವರನ್ನು ಕೆಳಗಿಳಿಯಬೇಕು ಎಂದು ಹೇಳಿದ್ದರು.

Elon Musk Says He Will Resign As Twitter CEO

ಸಮೀಕ್ಷೆಯ ಫಲಿತಾಂಶವನ್ನು ಟ್ಯಾಗ್‌ ಮಾಡಿರುವ ಅವರು, ನಾನು ಆದಷ್ಟು ಬೇಗ ಟ್ವಿಟರ್‌ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ.

ಕಳೆದ ವಾರ ಎಲಾನ್‌ ಮಸ್ಕ್‌ ಅವರು ಹಲವು ಪ್ರಮುಖ ಪತ್ರಕರ್ತರ ಟ್ವಿಟರ್‌ ಖಾತೆಗಳನ್ನು ಅಮಾನತು ಮಾಡಿದ್ದರು. ಇದು ಜಗತ್ತಿನಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಸ್ಕ್‌ ಅವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿಲಾಗಿದೆ. ಇದಕ್ಕೆ ವಿಶ್ವಸಂಸ್ಥೆಯ ಮುಖ್ಯಸ್ಥರೂ ಬೇಸರ ವ್ಯಕ್ತಪಡಿಸಿದ್ದರು.

ಅಮಾನತುಗೊಂಡ ಖಾತೆಗಳಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ರಿಯಾನ್ ಮ್ಯಾಕ್, ಸಿಎನ್‌ಎನ್‌ನ ಡೋನಿ ಒ'ಸುಲ್ಲಿವನ್, ವಾಷಿಂಗ್ಟನ್ ಪೋಸ್ಟ್‌ನ ಡ್ರೂ ಹಾರ್ವೆಲ್, ಮ್ಯಾಶಬಲ್‌ನ ಮ್ಯಾಟ್ ಬೈಂಡರ್, ದಿ ಇಂಟರ್‌ಸೆಪ್ಟ್‌ನ ಮಿಕಾ ಲೀ, ರಾಜಕೀಯ ಪತ್ರಕರ್ತ ಕೀತ್ ಓಲ್ಬರ್‌ಮನ್, ಆರನ್ ರೂಪರ್ ಮತ್ತು ಟೋನಿ ವೆಬ್‌ಸ್ಟರ್ ಸೇರಿದ್ದಾರೆ. ಇಬ್ಬರೂ ಸ್ವತಂತ್ರ ಪತ್ರಕರ್ತರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇಷ್ಟೇ ಅಲ್ಲದೇ, ಎಲಾನ್‌ ಮಸ್ಕ್‌ ಅವರು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ಗಳನ್ನು ಪ್ರಮೋಟ್‌ ಮಾಡುವ ಲಿಂಕ್‌ಗಳನ್ನು ಟ್ವಿಟರ್‌ನಲ್ಲಿ ನಿಷೇಧಿಸಿದ್ದಾರೆ. ಇದು ಬೇರೆ ಕಂಪನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಸಾವಿರಾರು ನೌಕರರನ್ನು ತೆಗೆದು ಹಾಕಿದ್ದರು. ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳ ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಇದು ವ್ಯಾಪಕ ಟೀಕೆಗೆ ಕಾರಣವಾಗಿದೆ.

English summary
Elon Musk is going to resign from the post of CEO of Twitter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X