ಇಂಡೋನೇಷ್ಯಾದಲ್ಲಿ ಭೀಕರ ಭೂಕಂಪ: ಮೃತರ ಸಂಖ್ಯೆ 82 ಕ್ಕೆ ಏರಿಕೆ
ಬಾಲಿ, ಆಗಸ್ಟ್ 06: ಇಂಡೋನೇಷ್ಯಾದಲ್ಲಿ ಭಾನುವಾರ ಸಂಭವಿಸಿದ 7.0 ತೀವ್ರತೆಯ ಭೀಕರ ಭೂಕಂಪಕ್ಕೆ ಮೃತರಾದವರ ಸಂಖ್ಯೆ 82 ಕ್ಕೇರಿದೆ.
ಇಲ್ಲಿನ ಬಾಲಿ ಮತ್ತು ಲಂಬೋಕ್ ದ್ವೀಪಗಳಲ್ಲಿ 31 ಕಿ.ಮೀ.ಆಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸುನಾಮಿ ಮುನ್ಸೂಚನೆಯನ್ನೂ ನೀಡಲಾಗಿದೆ.
ಭೂಕಂಪದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಜನ ತಮ್ಮ ಮನೆಯಿಂದ ಆಚೆ ಬಂದು ಬಹಲಯ ಪ್ರದೇಶ, ರಸ್ತೆಗಳಲ್ಲಿ ನಿಂತಿದ್ದರಿಂದ ಪ್ರಾಣ ಹಾನಿ ಕೊಂಚ ಕಡಿಮೆಯಾಗಿದೆ.

ಈಗಾಗಲೇ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನೂ ನೀಡಿರುವುದರಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಇಂಡೋನೇಷ್ಯಾ ಅತ್ಯುತ್ತಮ ಪ್ರವಾಸೀ ತಾಣವೂ ಆಗಿರುವರಿಂದ ಪ್ರವಾಸಿಗರ ಸುರಕ್ಷತೆಯ ಬಗ್ಗೆಯೂ ಇಲ್ಲಿನ ಸರ್ಕಾರ ಮುತುವರ್ಜಿ ವಹಿಸಿದೆ.
ಜುಲೈ 29 ರಂದು ಈ ಭಾಗದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಹತ್ತಕ್ಕೂ ಹೆಚ್ಚು ಜನ ಮೃತರಾಗಿದ್ದರು.












Click it and Unblock the Notifications