ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌರಮಂಡಲ ಸಮೀಪವೇ ಇದೆ ಮತ್ತೊಂದು ಭೂಮಿ!

|
Google Oneindia Kannada News

ನವದೆಹಲಿ, ಆಗಸ್ಟ್, 26: ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹವೊಂದು ನಮ್ಮ ಸೌರಮಂಡಲದ ಸಮೀಪವೇ ಪತ್ತೆಯಾಗಿದೆ. ಖಗೋಳ ವಿಜ್ಞಾನಿಗಳ ದಶಕಗಳ ಸಂಶೋಧನೆ ಫಲ ನೀಡಿದ್ದು ನಮ್ಮ ಸೌರಮಂಡಲದ ಸಮೀಪದಲ್ಲಿ ಮತ್ತೊಂದು ಸೌರಮಂಡಲ ವ್ಯವಸ್ಥೆಯಿದ್ದು ಭೂಮಿಯನ್ನು ಹೋಲುವ ಗ್ರಹ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜರ್ಮನಿಯ ಸ್ಟಡಿ ಫಾರ್ ಆಸ್ಟ್ರೋ ಫಿಸಿಕ್ಸ್ ಸಂಸ್ಥೆಯ ಖಗೋಳ ವಿಜ್ಞಾನಿ ಹಾಗೂ ಲೇಖಕ ಅನ್ ಗರ್ ರೀನರ್ಸ್, ನಮ್ಮ ದಶಕಗಲ ಕಾಲದ ಸಂಶೋಧನೆ ಫಲ ನೀಡಿದೆ. ಆದರೆ ಇಲ್ಲಿಗೆ ನಾವು ನಿಲ್ಲುವಂತಿಲ್ಲ. ನಿರಂತರ ಸಂಶೋಧನೆ ಮತ್ತು ಅಧ್ಯಯನ ಮುಂದುವರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.[ವರ್ಷದ ನಂತರ ಭೂಮಿಗೆ ಬಂದ ಗಗನಯಾತ್ರಿ]

ಹೊಸದಾಗಿ ಕಂಡು ಬಂದಿರುವ ಭೂಮಿಯನ್ನು ಹೋಲುವ ಗ್ರಹಕ್ಕೆ ಪ್ರಾಕ್ಸಿಮಾ ಬಿ ಎಂದು ನಾಮಕರಣ ಮಾಡಲಾಗಿದೆ. ಈ ಹೊಸ ಭೂಮಿ ನಮ್ಮಿಂದ 4.2 ಜ್ಯೋತಿರ್ ವರ್ಷಗಳಷ್ಟು ದೂರವಿದೆ. ಭೂಮಿಯನ್ನು ಹೋಲುವ ಇನ್ನು ಕೆಲವು ಗ್ರಹಗಳು ಕಂಡುಬಂದಿದ್ದು ವಾತಾವರಣದ ಮೇಲೆ ಅಧ್ಯಯನ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

Earth-like planet 'Proxima b' discovered near solar system


2015ರಲ್ಲಿ ನಾಸಾದ ವಿಜ್ಞಾನಿಗಳು ಭೂಮಿಯನ್ನು ಹೋಲುವ ಕೆಪ್ಲರ್ 452ಬಿ ಎಂಬ ಗ್ರಹವನ್ನು ಅನ್ವೇಷಿಸಿದ್ದರು. ನಾಸಾದ ದೂರದರ್ಶಕ ಕೆಪ್ಲರ್ ಈ ಗ್ರಹವನ್ನು ಪತ್ತೆ ಮಾಡಿದ್ದಿಂರಿಂ ಈ ಗ್ರಹಕ್ಕೆ ಕೆಪ್ಲರ್ 452ಬಿ ಎಂದು ನಾಮಕರಣ ಮಾಡಲಾಗಿತ್ತು. ಇಲ್ಲಿಯೂ ಭೂಮಿ ಹೋಲುವ ವಾತಾವರಣ ಇದೆ ಎಂದು ಹೇಳಲಾಗಿತ್ತು.[ಅಂತರಿಕ್ಷದಲ್ಲಿವೆ ಒಟ್ಟು 8 ವಾಸಯೋಗ್ಯ ಭೂಮಿಗಳು!]

ಮುಂದೇನು? ಸಂಶೋಧನೆಯನ್ನು ಇಲ್ಲಗೆ ನಿಲ್ಲಿಸುವಂತಿಲ್ಲ. ಹೊಸ ನೂತನ ಭೂಮಿ ತಾಪಮಾನ 22 ರಿಂದ 40 ಡಿಗ್ರಿಗಳಷ್ಟಿದೆ. ಆದರೆ ನೇರಳಾತೀತ ಕಿರಣಗಳು ಪ್ರಖರತೆ ಭೂಮಿಗೆ ಹೊಲಿಸಿದರೆ 400 ಪಟ್ಟು ಅಧಿಕವಾಗಿದೆ. ಯಾವುದಾದರೂ ತೆರನಾದ ಜಿವಿಗಳು ಬದುಕಲು ಪೂರಕ ವಾತಾವರಣ ಅಲ್ಲಿದೆಯೇ ಎಂಬುದರ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ.

English summary
ESO astronomers announced they had discovered an earth like planet 'Proxima b'and that the planet is likely rocky, has a mass similar to Earth's and sits in the "Goldilocks" zone where liquid water could exist on its surface.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X