ಗ್ರಹಚಾರ ಕೈಕೊಟ್ರೆ ಹೀಗೆಲ್ಲಾ ಆಗುತ್ತೆ

Posted By:
Subscribe to Oneindia Kannada

ನವೆಂಬರ್ 14 : ಅಕ್ರಮವಾಗಿ ಮಾದಕ ವಸ್ತು ಹೊಂದಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ವಿಚಿತ್ರ ರೀತಿಯಲ್ಲಿ ನ್ಯಾಯಾಧೀಶರ ಎದುರೇ ಸಿಕ್ಕಿಹಾಕಿಕೊಂಡಿದ್ದಾನೆ. ಅವನು ಸಿಕ್ಕಿ ಹಾಕಿಕೊಂಡ ರೀತಿ ಮಾತ್ರ ಹಾಸ್ಯಮಯವಾಗಿದೆ.

ದಕ್ಷಿಣ ಅಮೆರಿಕದ ಕೊಲಾರೋಡಾದಲ್ಲಿ ಜಾನ್ ಜೋಸ್ ವಿಡಿರೊ ಎಂಬ ವ್ಯಕ್ತಿಯ ಮೇಲೆ ಪೊಲೀಸರು ಮಾದಕ ವಸ್ತುಗಳನ್ನು ಹೊಂದಿದ್ದ ಬಗ್ಗೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಸೂಕ್ತ ಸಾಕ್ಷಾಧಾರಗಳು ಇಲ್ಲವಾದ್ದರಿಂದ ವಿಚಾರಣೆ ಮಂದ ಗತಿಯಲ್ಲಿ ಸಾಗುತ್ತಿತ್ತು. ಇನ್ನೇನು ಆರೋಪಿಯು ಆರೋಪದಿಂದ ಖುಲಾಸೆ ಆಗಿಯೇ ಬಿಡುತ್ತಾನೆ ಎಂದೇ ಎಲ್ಲರೂ ಅಂದುಕೊಂಡಿದ್ದರು ಆದರೆ ಆದದ್ದೇ ಬೇರೆ.

Drug pocket fell from man's hat while he is in court

ಮಾದಕ ದ್ರವ್ಯ ಹೊಂದಿದ್ದ ಬಗ್ಗೆ ಜಾನ್ ಜೋಸ್ ನ ವಿಚಾರಣೆ ನಡೆಯುತ್ತಿರುವ ಸಮಯದಲ್ಲಿ ಆತ ಧರಿಸಿದ್ದ ಟೊಪ್ಪಿಗೆಯಿಂದ ಸಣ್ಣಗೆ ಮಡಚಿದ್ದ ಪ್ಲಾಸ್ಟಿಕ್ ಕವರ್ ಒಂದು ಕೆಳಗೆ ಬಿದ್ದಿದೆ. ಅಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಅದನ್ನು ತೆಗೆದುಕೊಂಡು ಪರೀಕ್ಷೆಗೊಳಪಡಿಸಿದಾಗ ಅದು ಮಾದಕ ವಸ್ತು ಎಂದು ಗೊತ್ತಾಗಿದೆ.

ಅದನ್ನೇ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದ ನ್ಯಾಯಾಲಯ ಆತನನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ನೀಡಿದೆ.

ಸಾಕ್ಷಿಗಳಿಲ್ಲವೆಂಬ ಕಾರಣಕ್ಕೆ ಖುಲಾಸೆ ಆಗುತ್ತಿದ್ದ ಆರೋಪಿಯೊಬ್ಬ ವಿಧಿಯಾಟದಿಂದ ಸಿಕ್ಕಿಹಾಕಿಕೊಂಡಿದ್ದಾನೆ. ಆತ ಮಾತ್ರ ತನ್ನ ಗ್ರಹಚಾರವನ್ನು ಬೈದುಕೊಂಡು ಕಂಬಿ ಎಣಿಸುತ್ತಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
man who was in colorado court for violating his bond on a drug charge is in even more trouble after a was of cocaine fell from his hat he was in front of the judge.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ