ಡೊನಾಲ್ಡ್ ಟ್ರಂಪ್‌ಗೆ ಹೆಚ್ಚಾಯ್ತು ಭದ್ರತೆ: ಇರಾನ್ ಹತ್ಯೆ ಪ್ರಯತ್ನ ಆರೋಪದ ಬಗ್ಗೆ ಟ್ರಂಪ್ ಕೊತ ಕೊತ!
ಅಮೆರಿಕದ ವಾತಾವರಣ ಸರಿಯಾಗಿಲ್ಲ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತದಾನಕ್ಕಾಗಿ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲೇ ಅಭ್ಯರ್ಥಿಗೆ ಜೀವ ಭಯ ಕಾಡ್ತಿದೆ. ಅಮೆರಿಕ ಮಾಜಿ ಅಧ್ಯಕ್ಷ & ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹಾಲಿ ಅಭ್ಯರ್ಥಿ ಆಗಿರುವ ಡೊನಾಲ್ಡ್ ಟ್ರಂಪ್‌ಗೆ ಭದ್ರತೆ ಹೆಚ್ಚಿಸಲಾಗಿದೆ. ಹೀಗಿದ್ದಾಗಲೆ ಹೊಸ ಆತಂಕ ಕೂಡ ಅಮೆರಿಕದಲ್ಲಿ ಶುರುವಾಗಿದ್ದು, ಅರಾಜಕತೆ ಸೃಷ್ಟಿ ಮಾಡಲು ವಿದೇಶಿ ಶಕ್ತಿಗಳು ಈಗ ಪ್ರಯತ್ನ ನಡೆಸುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಮೆರಿಕ & ಇರಾನ್ ನಡುವೆ ನಡೆಯುತ್ತಿರುವ ಕಿರಿಕ್ ಇಂದು ಅಥವಾ ನಿನ್ನೆಯದಲ್ಲ. ಹೀಗೆ ಇಬ್ಬರ ನಡುವೆ ಹಲವು ವರ್ಷಗಳಿಂದ ಕೂಡ ದೊಡ್ಡ ತಿಕ್ಕಾಟವೇ ಶುರುವಾಗಿದೆ. ಅದ್ರಲ್ಲೂ ಒಂದು ಹಂತದಲ್ಲಿ ಇರಾನ್ ವಿರುದ್ಧ ಅಮೆರಿಕ ಯುದ್ಧವನ್ನೇ ಸಾರಲು ಸಿದ್ಧವಾಗಿತ್ತು. ಆದ್ರೆ ಕೊನೇ ಹಂತದಲ್ಲಿ ಯುದ್ಧ ನಿಂತು ಹೋಗಿತ್ತು. ಪರಿಸ್ಥಿತಿ ಹೀಗೆ ಇದ್ದಾಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಇರಾನ್ ಪ್ರಯತ್ನ ಮಾಡಿದೆ ಎಂಬ ಆರೋಪವು ಕೇಳಿಬಂದಿದೆ. ಈ ಆರೋಪವು ಕೇಳಿಬಂದ ನಂತರ ಅಮೆರಿಕದ ಮಾಜಿ ಅಧ್ಯಕ್ಷ & ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಭದ್ರತೆ ಹೆಚ್ಚಾಗಿದೆ. ಹಾಗಾದ್ರೆ ಇರಾನ್ ಬಗ್ಗೆ ಟ್ರಂಪ್ ಹೇಳಿದ್ದೇನು? ಮುಂದೆ ಓದಿ.

ಇರಾನ್ ವಿರುದ್ಧ ಟ್ರಂಪ್ ಕೊತ ಕೊತ!
ಅಮೆರಿಕದ ಮಾಜಿ ಅಧ್ಯಕ್ಷರನ್ನೇ ಇರಾನ್ ಟಾರ್ಗೆಟ್ ಮಾಡಿದೆ ಎಂಬ ಸುದ್ದಿ ಜಾಗತಿಕವಾಗಿ ಕೂಡ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ನನ್ನ ಹತ್ಯೆಗೆ ಇರಾನ್ ಸಂಚು ನಡೆಸಿದೆ. ಹೀಗಾಗಿ ನನಗೆ ಭದ್ರತೆ ಹೆಚ್ಚಿಸಲಾಗಿದೆ. ನನ್ನ ಸುತ್ತಮುತ್ತ ಇದೀಗ ಹಿಂದೆಂದೂ ಕಾಣದಷ್ಟು ಬಂದೂಕು & ಭದ್ರತಾ ಅಧಿಕಾರಿಗಳು ಇದ್ದಾರೆ. ನನ್ನ ಭದ್ರತೆಗಾಗಿ ಸಹಕರಿಸಲು ಹೆಚ್ಚಿನ ಹಣ ನೀಡಲು ಒಪ್ಪಿಗೆ ಸೂಚಿಸಿದ ಅಮೆರಿಕನ್ ಕಾಂಗ್ರೆಸ್ ಸದಸ್ಯರಿಗೆ ನಾನು ಧನ್ಯವಾದ ಹೇಳುವೆ ಎಂದಿದ್ದಾರೆ ಡೊನಾಲ್ಡ್ ಟ್ರಂಪ್.
ಭಾರತೀಯರ ಉದ್ಯೋಗಕ್ಕೆ ಕಂಟಕ?
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸುಮಾರು 1 ತಿಂಗಳ ಮೇಲೆ 10 ದಿನ ಬಾಕಿ ಉಳಿದಿದೆ. ಇಂತಹ ಸಮಯದಲ್ಲಿ ವೆರೈಟಿ ವೆರೈಟಿ ಆಶ್ವಾಸನೆ ನೀಡುತ್ತಿದ್ದಾರೆ ಡೊನಾಲ್ಡ್ ಟ್ರಂಪ್ ಅವರು ಎಂಬ ಮಾತು ಕೇಳಿಬಂದಿದೆ. ಆಶ್ವಾಸನೆಗಳು ಆ ಕಡೆ ಇರಲಿ, ಈಗಿನ ಸ್ಥಿತಿಯಲ್ಲಿ ಟ್ರಂಪ್ ಹೊಸ ಐಡಿಯಾ ಒಂದನ್ನ ಮಾಡಿದ್ದು, ಡೊನಾಲ್ಡ್ ಟ್ರಂಪ್ ಅವರಿಗೆ ಅಮೆರಿಕದ ಮತದಾರರು ವೋಟ್ ಹಾಕಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಿಸಿದರೆ ಹೊಸ ಕ್ರಾಂತಿ ತರಲಿದ್ದಾರಂತೆ. ಆ ಪ್ರಕಾರ ಬೇರೆ ದೇಶಗಳ ಉದ್ಯೋಗವನ್ನು ಕಸಿದುಕೊಂಡು, ಬೇರೆ ಬೇರೆ ದೇಶದಲ್ಲಿ ಇರುವ ಕಂಪನಿಗಳನ್ನ ಕೂಡ ಅಮೆರಿಕಗೆ ತರುತ್ತೇನೆ ಎಂದಿದ್ದಾರೆ ಟ್ರಂಪ್. ಹೀಗೆ ಟ್ರಂಪ್ ನೀಡಿರುವ ಹೇಳಿಕೆ ಫುಲ್ ವೈರಲ್ ಆಗುತ್ತಿದ್ದು, ಭಾರತೀಯರ ಉದ್ಯೋಗಕ್ಕೆ ಕೂಡ ಆಪತ್ತು ಎದುರಾಗುತ್ತಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications