ಎಲ್ಲೆಲ್ಲೂ ಅಮೆರಿಕನ್ನರಿಗೇ ಮೊದಲ ಪ್ರಾಶಸ್ತ್ಯ: ಟ್ರಂಪ್ ಕರೆ
ವಿದೇಶಿಗರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅನುಕೂಲ ಮಾಡುವ ಎಚ್ 1 ಬಿ ವೀಸಾ ನಿಯಮಗಳಲ್ಲಿ ತಾವು ಮಾಡಿರುವ ಭಾರೀ ತಿದ್ದುಪಡಿಗಳಿಗೆ ಬುಧವಾರ ಸಹಿ ಹಾಕಿದ ನಂತರ ಭಾಷಣ ಮಾಡಿದ ಟ್ರಂಪ್.
ವಾಷಿಂಗ್ಟನ್, ಏಪ್ರಿಲ್ 19: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಔದ್ಯೋಗಿಕ ವಲಯದಲ್ಲಿ ಅಮೆರಿಕನ್ನರಿಗೇ ಪ್ರಾಶಸ್ತ್ರ್ಯ ನೀಡಬೇಕೆಂದು ಕರೆ ನೀಡಿದ್ದಾರೆ.
ವಿದೇಶಿಗರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅನುಕೂಲ ಮಾಡುವ ಎಚ್ 1 ಬಿ ವೀಸಾ ನಿಯಮಗಳಲ್ಲಿ ತಾವು ಮಾಡಿರುವ ಭಾರೀ ತಿದ್ದುಪಡಿಗಳಿಗೆ ಬುಧವಾರ ಸಹಿ ಹಾಕಿದ ನಂತರ ಭಾಷಣ ಮಾಡಿದ ಅವರು, ಈ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.

ಮಳಿಗಳಲ್ಲಿ ಕೊಳ್ಳುವಾಗ ಅಮೆರಿಕದ ವಸ್ತುಗಳಿಗೇ ಮೊದಲ ಆದ್ಯತೆ ನೀಡಿ, ಅಮೆರಿಕದವರನ್ನೇ ಕೆಲಸಕ್ಕೆ ತೆಗೆದುಕೊಳ್ಳಿ, ಅಮೆರಿಕದ ಉತ್ಪನ್ನಗಳನ್ನೇ ಕೊಳ್ಳಿರಿ ಎಂದು ಅವರು ಅಮೆರಿಕದ ಪ್ರಜೆಗಳಿಗೆ ಕರೆ ನೀಡಿದ್ದಾರೆ.












Click it and Unblock the Notifications