ಭಾರತ - ರಷ್ಯಾವನ್ನು ಕಳೆದುಕೊಂಡಿದ್ದೇವೆ: ಅಚ್ಚರಿಯ ಟ್ವೀಟ್ ಮಾಡಿದ ಡೊನಾಲ್ಡ್ ಟ್ರಂಪ್!
ಜಾಗತಿಕವಾಗಿ ಭಾರತ - ರಷ್ಯಾ ಮತ್ತು ಚೀನಾ ಒಂದಾಗುತ್ತಿರುವುದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನುಂಗಲಾರದ ಬಿಸಿ ತುಪ್ಪವಾಗಿ ಬದಲಾಗಿದೆ. ಈಚೆ ನಡೆದ ಶಾಂಘೈ ಸಹಕಾರ ಸಂಘಟನೆಯ ಸಂದರ್ಭದಲ್ಲಿ ನಡೆದಿರುವ ಫೋಟೋವೊಂದನ್ನು ಹಂಚಿಕೊಂಡು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್‌ವೊಂದನ್ನು ಮಾಡಿದ್ದು. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಇಷ್ಟಕ್ಕೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿರುವ ಟ್ವೀಟ್ ಏನು ಎನ್ನುವ ವಿವರ ಇಲ್ಲಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಒಂದಾಗಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ನಾವು ಭಾರತವನ್ನು ಕಳೆದುಕೊಂಡಿದ್ದೇವೆ ಎನಿಸುತ್ತದೆ ಎಂದು ವಿಶೇಷವಾದ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಈಚೆಗೆ ಪ್ರಧಾನಿ ಮೋದಿ, ಕ್ಸಿ ಜಿನ್‌ಪಿಂಗ್ ಮತ್ತು ಪುಟಿನ್ ನಡುವಿನ ಆತ್ಮೀಯ ಫೋಟೋವೊಂದನ್ನು ಟ್ರಂಪ್ ಹಂಚಿಕೊಂಡಿದ್ದಾರೆ. ಈ ಮೂವರೂ ಇರುವ ಫೋಟೋವನ್ನು ಹಂಚಿಕೊಂಡಿರುವ ಟ್ರಂಪ್, "ನಾವು ಭಾರತ ಮತ್ತು ರಷ್ಯಾವನ್ನು ಚೀನಾದಿಂದಾಗಿ ಕಳೆದುಕೊಂಡಿದ್ದೇವೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ!" ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಎರಡು ಕಾರಣಗಳಿಗೆ ಗಮನ ಸೆಳೆದಿದೆ. ಒಂದು ಅಮೆರಿಕಾದ ಹತಾಶೆ ಹಾಗೂ ಸಿಟ್ಟು ಎರಡನ್ನೂ ಇದು ಪ್ರದರ್ಶಿಸುತ್ತದೆ ಎಂದೇ ಹೇಳಲಾಗುತ್ತದೆ.
ಭಾರತದ ಮೇಲೆ ಬರೋಬ್ಬರಿ ಶೇ 50ರಷ್ಟು ತೆರಿಗೆ ವಿಧಿಸಿದ ಮೇಲೆ ಅಮೆರಿಕಾ - ಭಾರತ ಮಣಿಯಲಿದೆ ಎಂದೇ ಭಾವಿಸಿತ್ತು. ಚೀನಾದೊಂದಿಗೆ ವೈಮನಸ್ಸು ಹಾಗೂ ಮುನಿಸುವ ಇರುವ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಒಂದಾಗಲಿದೆ ಎಂದು ಅಮೆರಿಕಾ ನಿರೀಕ್ಷೆ ಮಾಡಿರಲಿಲ್ಲ. ಆದರೆ ಅಮೆರಿಕಾದ ಲೆಕ್ಕಾಚಾರಗಳನ್ನು ಭಾರತವು ತಲೆಕೆಳಗಾಗಿಸಿದೆ.
ಭಾರತ - ಚೀನಾ ಮತ್ತು ರಷ್ಯಾ ದೇಶಗಳು ಒಂದಾಗುತ್ತಿದ್ದು. ಅಮೆರಿಕಾದ ಸುಂಕ ನೀತಿಯ ಪರಿಣಾಮ ಬೀರದಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿವೆ. ಇನ್ನು ರಷ್ಯಾದ ಮೇಲೆ ಅಮೆರಿಕಾ ಭಾರೀ ನಿರ್ಬಂಧ ವಿಧಿಸಿತ್ತು. ರಷ್ಯಾ - ಉಕ್ರೇನ್‌ನ ನಡುವೆ ನಡೆದಿರುವ ಯುದ್ಧ ನಿಲ್ಲದೆ ಇರುವುದಕ್ಕೆ ಭಾರತವೇ ಕಾರಣ. ಭಾರತವು ರಷ್ಯಾ - ಉಕ್ರೇನ್ ಯುದ್ಧ ಮುಂದುವರಿಯುವುದಕ್ಕೆ ಪರೋಕ್ಷ ಕಾರಣವಾಗಿದೆ ಎಂದು ದೂರಿದೆ.
ಈಚೆಗೆ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರದಲ್ಲಿ ಭಾರೀ ಅಸಮತೋಲನವಿದೆ ಎಂದಿದ್ದರು. ಅಲ್ಲದೇ ಭಾರತದೊಂದಿಗಿನ ಸಂಬಂಧವನ್ನು "ಏಕಪಕ್ಷೀಯ ವಿಪತ್ತು" ಎಂದು ಕರೆದಿದ್ದರು. ಪ್ರಧಾನಿ ಮೋದಿ ಮತ್ತು ವಿವಿಧ ರಾಷ್ಟ್ರಗಳ ನಾಯಕರು SCO ಶೃಂಗಸಭೆಗಾಗಿ ಚೀನಾದಲ್ಲಿ ಒಂದಾದ ಬೆನ್ನಲ್ಲೇ ಈ ಹೇಳಿಕೆ ಬಂದಿತ್ತು. ಅಲ್ಲದೇ ಭಾರತದೊಂದಿಗೆ ನಾವು ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ. ಆದರೆ ಅವರು ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ ಎಂಬುದು ಕೆಲವೇ ಜನರಿಗೆ ತಿಳಿದಿದೆ ಎಂದೂ ಟ್ರಂಪ್ ಈಚೆಗೆ ಹೇಳಿದ್ದರು.












Click it and Unblock the Notifications