ಮುಸ್ಲಿಂ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶವಿನ್ನು ಕಠಿಣ

Posted By:
Subscribe to Oneindia Kannada

ನವದೆಹಲಿ, ಜನವರಿ 27: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮುಸ್ಲಿಂ ರಾಷ್ಟ್ರಗಳಿಂದ ಬರುವ ನಿರಾಶ್ರಿತರು ಅಮೆರಿಕ ಪ್ರವೇಶಿಸುವುದನ್ನು ಅನಿರ್ದಿಷ್ಟಾವಧಿಗೆ ನಿರ್ಬಂಧಿಸಿದ್ದಾರೆ. ಇದಲ್ಲದೆ, ಏಳು ಪ್ರಮುಖ ಇಸ್ಲಾಂ ರಾಷ್ಟ್ರಗಳಿಂದ ಅಮೆರಿಕಕ್ಕೆ ಪ್ರವೇಶಿಸುವ ಪ್ರಜೆಗಳಿಗೆ ನೀಡಲಾಗುವ ವೀಸಾ ಅವಧಿಯನ್ನು 90 ದಿನಗಳಿಗೆ ಮೊಟಕುಗೊಳಿಸಿದ್ದಾರೆ. ಇದು, ಮುಂದಿನ ದಿನಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶ ಕಠಿಣ ಹಾದಿ ಎನಿಸಲಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆಯಲ್ಲೇ ಅಮೆರಿಕವನ್ನು ವಲಸಿಗರಿಂದ ರಕ್ಷಿಸುವುದಾಗಿ ಘೋಷಿಸಿದ್ದ ಡೊನಾಲ್ಡ್ ಟ್ರಂಪ್, ಆ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆಯಿದು. ನಿರಾಶ್ರಿತರ ರೂಪದಲ್ಲಿ ಅಮೆರಿಕ ಪ್ರವೇಶಿಸುವವರನ್ನು ದೂರವಿಡಲು ಟ್ರಂಪ್ ನಿರ್ಧರಿಸಿರುವುದು ಇದರ ಪ್ರಮುಖ ಅಂಶಗಳಲ್ಲೊಂದು. ಮಾನವೀಯ ಆಧಾರದಲ್ಲಿ ಮುಸ್ಲಿಂ ದೇಶಗಳ ನಿರಾಶ್ರಿತರಿಗೆ ಜಾಗ ನೀಡುತ್ತಿದ್ದ ವಿಚಾರದಲ್ಲಿ ಇನ್ನು ಅಮೆರಿಕ ತನ್ನ ಮನಸ್ಸನ್ನು ಕಲ್ಲು ಮಾಡಿಕೊಳ್ಳಲಿದೆ. ಉದಾಹರಣೆಗೆ, ಯುದ್ಧಪೀಡಿತ ಸಿರಿಯಾದಿಂದ ಅಮೆರಿಕಕ್ಕೆ ನೆಲೆ ಹುಡುಕಿಕೊಂಡು ಬರುವ ನಿರಾಶ್ರಿತರಿಗೆ ಇನ್ನು ಮುಂದೆ ಅಮೆರಿಕದ ಬಾಗಿಲು ಮುಚ್ಚಲಿದೆ.

Donald Trump restricts the refugees and travellers from Muslim countries into America

ಇದರ ಜತೆಗೆ, ಜಗತ್ತಿನ ಒಂಭತ್ತು ಪ್ರಮುಖ ಮುಸ್ಲಿಂ ರಾಷ್ಟ್ರಗಳಾದ ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮೆನ್ ರಾಷ್ಟ್ರಗಳಿಂದ ಅಮೆರಿಕ ಪ್ರವಾಸಕ್ಕಾಗಿ ಬರುವ ಆ ದೇಶಗಳ ಪ್ರಜೆಗಳಿಗೆ 90 ದಿನಗಳಿಂದ ಹೆಚ್ಚಿನ ದಿನಗಳ ವೀಸಾ ನೀಡದಿರಲು ನಿರ್ಧರಿಸಲಾಗಿದೆ. ಇದರಿಂದ, ದೀರ್ಘಾವಧಿಯವರೆಗೆ ಅವರು ಅಮೆರಿಕದಲ್ಲಿರಲು ಸಾಧ್ಯವಾಗದಂತೆ ತಡೆಯೊಡ್ಡಲಾಗಿದೆ.

ಈ ಹೊಸ ನಿಯಮಗಳಿಗೆ ಅಂಕಿತ ಹಾಕಿದ ನಂತರ ಪ್ರತಿಕ್ರಿಯಿಸಿರುವ ಟ್ರಂಪ್, ಅಮೆರಿಕದ ರಕ್ಷಣೆಗಾಗಿ ಈ ಕಠಿಣ ನಿಯಮಗಳನ್ನು ತರುವ ಅವಶ್ಯಕತೆಯಿತ್ತು ಎಂದು ಸಮರ್ಥನೆ ನೀಡಿದ್ದಾರಲ್ಲದೆ, ರಕ್ಷಣೆಯ ವಿಚಾರದಲ್ಲಿ ಇದೊಂದು ದೊಡ್ಡ ಹೆಜ್ಜೆಯೆಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
US President Donald Trump signed an order suspending refugee arrivals and imposing tough controls on travellers from Muslim countries.
Please Wait while comments are loading...