ಮೋಸ್ಟ್ ವಾಂಟೆಡ್ ಉಗ್ರ ಬಗ್ದಾದಿಯನ್ನು ಕೊಂದಿದ್ದು ಇದೇ ನಾಯಿ

Recommended Video

      Donald Trump Shared a Picture of the Wonderful Dog | Oneindia Kannada

      ವಾಷಿಂಗ್ಟನ್, ಅಕ್ಟೋಬರ್ 30: ಮೋಸ್ಟ್ ವಾಂಟೆಡ್ ಉಗ್ರ ಅಬು ಬಕರ್ ಅಲ್- ಬಗ್ದಾದಿಯ ಸಾವಿಗೆ ಕಾರಣವಾದ ನಾಯಿಯ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅ ನಾಯಿಯನ್ನು ಕೊಂಡಾಡಿದ್ದಾರೆ.

      "ಗ್ರೇಟ್ ಜಾಬ್!" ಎಂದು ಮೆಚ್ಚುಗೆ ಸೂಚಿಸಿರುವ ಡೊನಾಲ್ಡ್ ಟ್ರಂಪ್, ಬಗ್ದಾದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಭಯ ಹುಟ್ಟಿಸಿದ್ದು ಒಂದು ನಾಯಿ ಎಂದು ಎಂದಿದ್ದರು.

      ಸಿರಿಯಾದ ವಾಯವ್ಯಕ್ಕೆ ಇರುವ ಇದ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆ ವೇಳೆ ಬಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಉಗ್ರನ ಹತ್ಯೆಗೆ ಪ್ರಮುಖ ಕಾರಣವಾಗಿದ್ದು ಒಂದು ನಾಯಿ ಎಂಬುದು ಅಚ್ಚರಿ ಮೂಡಿಸಿತ್ತು.

      Donald Trump Praises Dog Which killed Leader of ISIS, Abu Bakr al-Baghdadi!

      ಇದ್ಲಿದ್ ನಲ್ಲಿ ಸುರಂಗವೊಂದರಲ್ಲಿ ಅವಿತಿದ್ದ ಐಎಸ್ ಐಎಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಲೆವಂಟ್) ಮುಖಂಡ ಬಾಗ್ದಾದಿ, ಯನ್ನು ಸುರಂಗದಿಂದ ಹೊರತೆಗೆಯಲು ಅಮೆರಿಕ ಯತ್ನಿಸುತ್ತಿತ್ತು. ಆ ಸುರಂಗದ ಕೊನೆ ಎಲ್ಲಿಗೆ ತಲುಪುತ್ತದೆ ಎಂಬ ಬಗ್ಗೆಯೂ ಅದಕ್ಕೆ ಗೊತ್ತಿರಲಿಲ್ಲ. ಈ ಸಂದರ್ಭದಲ್ಲಿ ಬಾಗ್ದಾದಿಯನ್ನು ಸುರಂಗದೊಳಗೆ ಬಹುದೂರ ಅಟ್ಟಿಸಿಕೊಂಡು ಹೋಗಿ, ಮುಂದೆ ಹೋಗಲು ದಾರಿಯೇ ಇಲ್ಲದಂತೆ ಮಾಡಿ ಅಮೆರಿಕ ಸೇನೆಯ ನಾಯಿಗಳು ಸುತ್ತಿವರಿದಿದ್ದವು. ಇನ್ನು ತಾನು ಬಚಾವಾಗುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿತ ಬಾಗ್ದಾದಿ ತನ್ನ ದೇಹಕ್ಕೆ ಸುತ್ತಿಕೊಂಡಿದ್ದ ಆತ್ಮಾಹುತಿ ಬಾಂಬ್ ಅನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+