Donald Trump: ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಹಿನ್ನಡೆ, ಕೆನಡಾಗೆ ತೆರಿಗೆ ತಿಕ್ಕಾಟದಿಂದ ತಾತ್ಕಾಲಿಕ ಮುಕ್ತಿ
ಡೊನಾಲ್ಡ್ ಟ್ರಂಪ್ & ಕೆನಡಾದ ನಡುವೆ ಶುರುವಾಗಿದ್ದ ತೆರಿಗೆ ತಿಕ್ಕಾಟಕ್ಕೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದ್ದು, ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಅಮೆರಿಕನ್ ಸಂಸತ್ ಸದಸ್ಯರು ತಡೆ ಹಾಕುವ ಮೂಲಕ ಆಘಾತ ನೀಡಿದ್ದಾರೆ. ತಮ್ಮ ನಿರ್ಧಾರಗಳಿಗೆ ಕೆನಡಾ ಬೆಂಬಲ ನೀಡುತ್ತಿಲ್ಲ & ಆ ಮೂಲಕ ಕೆನಡಾ ತಮಗೆ ಅಡ್ಡಿಯಾಗಿದೆ, ಎನ್ನುವ ಕಾರಣ ಹಿನ್ನೆಲೆ ಹಲವು ಬಾರಿ ಡೊನಾಲ್ಡ್ ಟ್ರಂಪ್ ಅವರು ಕೋಪಗೊಂಡಿದ್ದರು.
ಗ್ರೀನ್‌ಲ್ಯಾಂಡ್ ವಿಚಾರವೂ ಸೇರಿದಂತೆ ಹಲವು ವಿಷಯಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡ ನಿರ್ಧಾರಗಳಿಗೆ ಇದೇ ಕೆನಡಾ ವ್ಯತಿರಿಕ್ತ ನಿಲುವು ತೆಗೆದುಕೊಂಡಿತ್ತು. ಆ ನಂತರ ತಿಕ್ಕಾಟ ಜೋರಾಗಿ, ಕೆನಡಾ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಟ್ರಂಪ್ ಅವರು ನಿರ್ಧಾರ ಮಾಡಿದ್ದರು. ಆದರೆ ಇದೀಗ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಭಾರಿ ದೊಡ್ಡ ಹಿನ್ನಡೆಯೇ ಆಗಿದೆ.

ಟ್ರಂಪ್ ಅವರ ನಿರ್ಧಾರಕ್ಕೆ ಹಿನ್ನಡೆ
ಶ್ವೇತಭವನದ ನಿರ್ಧಾರಕ್ಕೆ ಇದೀಗ ಅಮೆರಿಕದ ಸದನ ವಿರೋಧ ವ್ಯಕ್ತಪಡಿಸುವ ರೀತಿಯಲ್ಲಿ ಮತವನ್ನ ಹಾಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ ಮೇಲೆ ಹೇರಿಕೆ ಮಾಡಲು ನಿರ್ಧಾರ ಮಾಡಿದ್ದ ಹೊಸ ಸುಂಕಗಳಿಗೆ ಇದೀಗ ಬ್ರೇಕ್ ಹಾಕಲಾಗಿದ್ದು, ಸ್ವತಃ ಟ್ರಂಪ್ ಅವರ ಪಕ್ಷದ ಸದಸ್ಯರು ಕೂಡ ಈ ವಿಚಾರದಲ್ಲಿ ವಿರೋಧ ಪಕ್ಷದ ಸದಸ್ಯರ ಜೊತೆಗೆ ಕೈಜೋಡಿಸಿದರು. ಟ್ರಂಪ್ ಅವರ ಪಕ್ಷ ರಿಪಬ್ಲಿಕನ್ ಪಾರ್ಟಿಯ ಸದಸ್ಯರಿಂದ ಬಹುಮತ ಹೊಂದಿರುವ ಸದನದಲ್ಲಿ, ಒಟ್ಟು 219 ಮತ್ತು 211 ಮತಗಳ ಅಂತರದಲ್ಲಿ ಟ್ರಂಪ್ ಅವರ ನಿರ್ಧಾರಕ್ಕೆ ಹಿನ್ನಡೆ ಆಗಿದೆ. ಅಲ್ಲದೆ ಸದನದ ಬೆಂಬಲ ಇಲ್ಲದೆ ಈಗ ಟ್ರಂಪ್ ಅವರು ಕೆನಡಾ ಮೇಲೆ ಹೆಚ್ಚಿನ ಸುಂಕ ಹೇರಿಕೆ ಮಾಡುವುದು ಸುಲಭ ಕೂಡ ಅಲ್ಲ, ಈ ಹಿನ್ನೆಲೆ ಅಮೆರಿಕ ಸಂಸತ್ ನಡೆ ಭಾರಿ ಕುತೂಹಲ ಕೆರಳಿಸಿದೆ.












Click it and Unblock the Notifications