ರಾಸಾಯನಿಕ ದಾಳಿಗೆ ಪ್ರತಿಯಾಗಿ ಸಿರಿಯಾ ಮೇಲೆ ಅಮೆರಿಕಾ ಯುದ್ಧ
ವಾಷಿಂಗ್ಟನ್, ಏಪ್ರಿಲ್ 14: ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸಾದ್ ಇಲ್ಲಿನ ಜನರ ಮೇಲೆ ರಾಸಾಯನಿಕ ದಾಳಿ ನಡೆಸಿರುವುದನ್ನು ಖಂಡೀಸಿರುವ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ಸಿರಿಯಾ ವಿರುದ್ಧ ಮಿಲಿಟರಿ ದಾಳಿ ನಡೆಸಿವೆ.
ಅಮೆರಿಕ ಸಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿರಿಯಾ ವಿರುದ್ಧ ಯುದ್ಧ ಘೋಷಿಸಿದ್ದು, ಅಮೆರಿಕ ನಡೆಗೆ ಫ್ರಾನ್ಸ್ ಮತ್ತು ಬ್ರಿಟನ್ ಬೆಂಬಲ ನೀಡಿವೆ. ಸಿರಿಯಾದ ಡಮಾಸ್ಕಸ್ ಮೇಲೆ ಮೂರು ರಾಷ್ಟ್ರಗಳೂ ವೈಮಾನಿಕ ದಾಳಿ ನಡೆಸುತ್ತಿದ್ದು, ಸಿರಿಯಾ ತತ್ತರಿಸಿದೆ.

ಅಧ್ಯಕ್ಷ ಅಸಾದ್ ವಿರೋಧಿಗಳು ವಾಸವಿರುವ ಡೂಮಾ ಪ್ರದೇಶದ ಮೇಲೆ ರಾಸಾಯನಿಕ ದಾಳಿ ನಡೆದ ಪರಿಣಾಮ 70 ಕ್ಕೂ ಹೆಚ್ಚು ಜನ ಅಸುನೀಗಿದ್ದರು. ಈ ದಾಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು.












Click it and Unblock the Notifications