Donald Trump: ಡೊನಾಲ್ಡ್ ಟ್ರಂಪ್ ಎಂಟ್ರಿಗೆ ಕೌಂಟ್‌ಡೌನ್, ರಷ್ಯಾ ರಾಜಧಾನಿಗೆ ಟ್ರಂಪ್ ಭೇಟಿ?

1.. 2.. 3... ಹೀಗೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಎಂಟ್ರಿ ಆಗಲು ಈಗ ಕೌಂಟ್‌ಡೌನ್ ಶುರುವಾಗಿದೆ. ಹೀಗಿದ್ದಾಗ ಮತ್ತೊಂದು ಕಡೆ ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಯಾವ ಕ್ಷಣದಲ್ಲಿ ಈ ಯುದ್ಧ ಮತ್ತೊಂದು ಮಹಾಯುದ್ಧದ ರೂಪ ಪಡೆಯುತ್ತೆ? ಎಂಬ ಪ್ರಶ್ನೆ ಕಾಡುತ್ತಿದೆ. ಧಗಧಗ ಹೊತ್ತಿ ಉರಿಯುವ ಸಮಯದಲ್ಲೇ ನೀರು ಹಾಕುವ ಕೆಲಸಕ್ಕೆ ಡೊನಾಲ್ಡ್ ಟ್ರಂಪ್ ಎಂಟ್ರಿ ಆಗುತ್ತಿದ್ದಾರೆ!

ಹೌದು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಇದೀಗ ಉಳಿದಿರುವ ಏಕೈಕ ಭರವಸೆ ಅಂದ್ರೆ ಅದು ಡೊನಾಲ್ಡ್ ಟ್ರಂಪ್ ಅಂತಾ ಹೇಳಬಹುದು. ಯಾಕಂದ್ರೆ ನವೆಂಬರ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರತಿ ಹೆಜ್ಜೆಯಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ & ರಷ್ಯಾ ನಡುವಿನ ಯುದ್ಧ ವಿರೋಧಿಸುತ್ತಾ ಬಂದಿದ್ದರು.

Donald Trump May Be Visit To The Russian Capital Moscow For This Reason

ಅಲ್ಲದೆ ಉಕ್ರೇನ್ & ರಷ್ಯಾ ಯುದ್ಧ ಅಮೆರಿಕಗೆ ಸಂಬಂಧಿಸಿಲ್ಲ ಎಂಬ ಮಾತನ್ನೂ ಹೇಳಿದ್ದರು. ಹೀಗಿದ್ದಾಗಲೇ, ಗಟ್ಟಿ ಧ್ವನಿ ಎತ್ತಿದ್ದ ಡೊನಾಲ್ಡ್ ಟ್ರಂಪ್, ತಾವು ಅಧಿಕಾರಕ್ಕೆ ಬಂದ 24 ಗಂಟೆ ಒಳಗಾಗಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಮಾತು ಕೊಟ್ಟಿದ್ದಾರೆ. ಇಂತಹ ಸಮಯದಲ್ಲೇ ಟ್ರಂಪ್ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಯುದ್ಧ ಗೆದ್ದಿದ್ದು, ಇನ್ನೇನು ಅಧಿಕಾರಕ್ಕೆ ಕೂಡ ಎಂಟ್ರಿ ಕೊಡುತ್ತಿದ್ದಾರೆ. ಹಾಗಾದ್ರೆ ರಷ್ಯಾ ರಾಜಧಾನಿ ಮಾಸ್ಕೋಗೆ ಡೊನಾಲ್ಡ್ ಟ್ರಂಪ್ ಭೇಟಿ ನೀಡುತ್ತಾರಾ?

ಮಾಸ್ಕೋಗೆ ಎಂಟ್ರಿ ಕೊಡುತ್ತಾರಾ ಟ್ರಂಪ್?

ಅಮೆರಿಕ & ರಷ್ಯಾ ನಡುವೆ ಅದೆಂತಹ ದ್ವೇಷ ಇದೆ ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿದೆ. ಸುಮಾರು ಮುಕ್ಕಾಲು ಶತಮಾನ ಅಮೆರಿಕ & ರಷ್ಯಾ ಬಡಿದಾಡಿವೆ. ಹೀಗಿದ್ದಾಗ ಒಂದು ಕಡೆ ರಷ್ಯಾ ಮುಳುಗಿಸಲು ಅಮೆರಿಕ ಕಾಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೇ ಇರುತ್ತದೆ, ಈ ನಡುವೆ ರಷ್ಯಾ ಕೂಡ ಅಮೆರಿಕ ವಿರುದ್ಧ ಗುಡುಗುತ್ತಾ ಬಂದಿದೆ.

ಇಂತಹ ಸಮಯದಲ್ಲೀಗ ಡೊನಾಲ್ಡ್ ಟ್ರಂಪ್ 2025ರ ಜನವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಹೀಗೆ ಟ್ರಂಪ್ ಅಮೆರಿಕದ ಅಧ್ಯಕ್ಷ ಸ್ಥಾನದಲ್ಲಿ ಕೂತ ತಕ್ಷಣವೇ ರಷ್ಯಾ ರಾಜಧಾನಿ ಮಾಸ್ಕೋಗೆ ಭೇಟಿ ನೀಡುತ್ತಾರಾ ಎಂಬ ಕುತೂಹಲವು ಮೂಡಿದೆ. ಮತ್ತೊಂದು ಕಡೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಭರವಸೆ ಕೂಡ ಈಗ ಸಿಗುತ್ತಿದೆ.

2016 ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್!

ಈಗಾಗಲೇ ರಷ್ಯಾ ಕೂಡ ಡೊನಾಲ್ಡ್ ಟ್ರಂಪ್ ಜೊತೆಗೆ ಸೇರಿ ಕೆಲಸ ಮಾಡುವ ಭರವಸೆಯನ್ನು ನೀಡಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಮೆರಿಕದ ಆಡಳಿತದ ಮುಖ್ಯಸ್ಥರಾಗಿ ಅಧಿಕಾರವನ್ನ ವಹಿಸಿಕೊಂಡ ತಕ್ಷಣವೇ ರಷ್ಯಾ ರಾಜಧಾನಿಗೆ ಭೇಟಿ ನೀಡಿ ವ್ಲಾದಿಮಿರ್ ಪುಟಿನ್ ಜೊತೆಯಲ್ಲಿ ಮಾತನಾಡ್ತಾರಾ? ಎಂಬ ಕುತೂಹಲ ಮೂಡಿದೆ. ಈ ಹಿಂದೆ, 2016 ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಆಡಳಿತ ನಡೆಸಿದ್ದ ಸಮಯದಲ್ಲಿ ಕೂಡ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಸಭೆಯನ್ನ ನಡೆಸಿದ್ದರು. ಈಗ 2024ರ ಚುನಾವಣೆಯಲ್ಲಿ ಕೂಡ ಟ್ರಂಪ್ ಗೆದ್ದು ಬೀಗಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+