ಅಮೆರಿಕಾ ವಿದೇಶಾಂಗ ಸಚಿವರಿಗೆ ಟ್ರಂಪ್ ಗೇಟ್ ಪಾಸ್

Subscribe to Oneindia Kannada

ವಾಷಿಂಗ್ಟನ್, ಮಾರ್ಚ್ 13: ಅಮೆರಿಕಾ ಸರಕಾರದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ವಿದೇಶಾಂಗ ಸಚಿವ (ಸೆಕ್ರೆಟರಿ ಆಫ್ ಸ್ಟೇಟ್) ರೆಕ್ಸ್ ಟಿಲ್ಲರ್ಸನ್ ರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿತ್ತೊಗೆದಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಟಿಲ್ಲರ್ಸನ್ ಜಾಗಕ್ಕೆ ಸಿಐಎ ನಿರ್ದೇಶಕ ಮೈಕ್ ಪೊಂಪೆಯೋರನ್ನು ಟ್ರಂಪ್ ಕರೆತಂದಿದ್ದಾರೆ. "ಸಿಐಎ ನಿರ್ದೇಶಕರಾಗಿದ್ದ ಮೈಕ್ ಪೊಂಪೆಯೋ ನಮ್ಮ ನೂತನ ಸೆಕ್ರೆಟರಿ ಆಫ್ ಸ್ಟೇಟ್ ಆಗಲಿದ್ದಾರೆ. ಅವರು ಅತ್ಯುತ್ತಮ ಕೆಲಸ ನಿರ್ವಹಿಸಲಿದ್ದಾರೆ," ಎಂದು ಮಂಗಳವಾರ ಟ್ರಂಪ್ ಟ್ವೀಟ್ ಮಾಡಿದ್ದಾರೆ. "ತಮ್ಮ ಸೇವೆಗಾಗಿ ರೆಕ್ಸ್ ಟಿಲ್ಲರ್ಸನ್ ಗೆ ಧನ್ಯವಾದಗಳು!" ಎಂದೂ ಟ್ರಂಪ್ ಟ್ಟೀಟ್ ನಲ್ಲಿ ಹೇಳಿದ್ದಾರೆ.

ಮೇ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್- ಕಿಮ್ ಜಾಂಗ್ ಉನ್ ಭೇಟಿ!

ವಾಷಿಂಗ್ಟನ್ ಪೋಸ್ಟ್ ವರದಿಗಳ ಪ್ರಕಾರ, ತಮ್ಮ ಹುದ್ದೆ ತೊರೆಯುವಂತೆ ಕಳೆದ ಶುಕ್ರವಾರ ಟ್ರಂಪ್ ಟಿಲ್ಲರ್ಸನ್ ಬಳಿ ಕೇಳಿಕೊಂಡಿದ್ದರು ಎನ್ನಲಾಗಿದೆ. ಆದರೆ ಟಿಲ್ಲರ್ಸನ್ ಹುದ್ದೆಯಲ್ಲಿ ಮುಂದುವರಿಯಲು ಬಯಸಿದ್ದರು ಎನ್ನಲಾಗಿದೆ.

Donald Trump Fires Rex Tillerson As Secretary Of State

ಹಲವು ವಿಚಾರಗಳಲ್ಲಿ ಟಿಲ್ಲರ್ಸನ್ ಮತ್ತು ಟ್ರಂಪ್ ಭಿನ್ನ ಅಭಿಪ್ರಾಯವನ್ನು ಹೊಂದಿದ್ದರು. "ಉತ್ತರ ಕೊರಿಯಾ ಜತೆಗೆ ನಡೆಯಲಿರುವ ಮಾತುಕತೆಗೂ ಮೊದಲು ಹೊಸ ತಂಡವನ್ನು ಹೊಂದಲು ಡೊನಾಲ್ಡ್ ಟ್ರಂಪ್ ಉದ್ದೇಶಿಸಿದ್ದಾರೆ," ಎಂದು ಅಮೆರಿಕಾದ ಉನ್ನತ ಅಧಿಕಾರಿಯೊಬ್ಬರು ಹೇಳಿರುವುದನ್ನು 'ಎಎಫ್ ಪಿ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೋದಿಯವರ ಮೇಲೇಕೆ ಡೊನಾಲ್ಡ್ ಟ್ರಂಪ್ ಗೆ ಮುನಿಸು?

ಟಿಲ್ಲರ್ಸನ್ ಈ ಹಿಂದೆ ದೈತ್ಯ ಆಯಿಲ್ ಸಂಸ್ಥೆ ಎಕ್ಸಾನ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಅವರನ್ನು ಸೆಕ್ರೆಟರಿ ಆಫ್ ಸ್ಟೇಟ್ ಹುದ್ದೆಯಿಂದ ಕಿತ್ತುಹಾಕಿರುವ ಬೆನ್ನಲ್ಲೇ ಅ಻ಮೆರಿಕಾ ಸರಕಾರದ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಸಿಐಎ ಉಪ ನಿರ್ದೇಶಕಿಯಾಗಿದ್ದ ಗೀನಾ ಹಾಸ್ಪೆಲ್ ರನ್ನು ನೂತನ ಸಿಐಎ ನಿರ್ದೇಶಕಿಯಾಗಿ ನೇಮಿಸಲಾಗಿದೆ. ಪ್ರಖ್ಯಾತ ತನಿಖಾ ಸಂಸ್ಥಗೆ ಸಿಐಎ ನಿರ್ದೇಶಕ ಹುದ್ದೇಗೇರಿದ ಮೊದಲ ಮಹಿಳೆಯಾಗಿ ಹಾಸ್ಪೆಲ್ ಗುರುತಿಸಿಕೊಳ್ಳಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
US President Donald Trump has sacked Rex Tillerson as secretary of state and replaced him with CIA Director Mike Pompeo.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ