ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 9: ಅಮೆರಿಕಾದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಅಮೆರಿಕನ್ನರ ವಿಶ್ವಾಸ ಟ್ರಂಪ್ ಗೆ ಸಿಕ್ಕಿದೆ. ಹಿಲರಿ ಕ್ಲಿಂಟನ್ ರಾಜಕೀಯ ಅನುಭವ ಮಬ್ಬಾದಂತಿದೆ. ರಾಜಕಾರಣಕ್ಕೆ ಬಂದು ಹದಿನೆಂಟೇ ತಿಂಗಳಲ್ಲಿ ದೈತ್ಯ ಸಂಹಾರಿ ಎನಿಸಿಕೊಂಡಿದ್ದಾರೆ ಡೊನಾಲ್ಡ್ ಟ್ರಂಪ್.

270 ಎಂಬ ಮ್ಯಾಜಿಕ್ ನಂಬರ್ ಅನ್ನು ಸುಲಭವಾಗಿ ದಾಟಿದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. ಗೆಲುವಿನ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಫೋನ್ ಮಾಡಿ, ಟ್ರಂಪ್ ಗೆ ಶುಭಾಶಯ ತಿಳಿಸಿದ್ದಾರೆ. ಇಡೀ ಜಗತ್ತು ತುದಿಗಾಲಲ್ಲಿ ನಿಂತು ಎದುರು ನೋಡುತ್ತಿದ್ದ ಚುನಾವಣಾ ಫಲಿತಾಂಶ ಅಂತೂ ಹೊರಬಿದ್ದಿದೆ.

Donald Trump elected as 45th president of USA

ಹಿಲರಿ ಕ್ಲಿಂಟನ್ ಗೆಲುವಿನ ನಿರೀಕ್ಷೆಯಲ್ಲಿದ್ದವರಿಗೆ ಈ ಫಲಿತಾಂಶ ಆಘಾತಕಾರಿಯಾಗಿದೆ. ಸುದೀರ್ಘ ಮತ ಎಣಿಕೆ ಪ್ರಕ್ರಿಯೆಯ ನಂತರ ಹಿಲರಿ ಕ್ಲಿಂಟನ್ ಗೆ 218 ಹಾಗೂ ಡೊನಾಲ್ಡ್ ಟ್ರಂಪ್ ಗೆ 276 ಅಂಕಗಳು ಲಭಿಸಿರುವ ಫಲಿತಾಂಶ ಹೊರಬಿದ್ದಿತು. ಚುನಾವಣೆ ಪ್ರಚಾರದ ಆರಂಭದಿಂದಲೂ ಹಲವು ಅಚ್ಚರಿಗಳಿಗೆ ದೂಡಿದ್ದರು ಟ್ರಂಪ್, ಚುನಾವಣೆಯ ಹಿಂದಿನ ದಿನದವರೆಗೆ ನಡೆದಿದ್ದ ಎಲ್ಲ ಸಮೀಕ್ಷೆಗಳು ಹಿಲರಿ ಕ್ಲಿಂಟನ್ ಜಯಗಳಿಸುತ್ತಾರೆ ಎಂಬುದನ್ನೇ ಹೇಳಿದ್ದವು.

ಆದರೆ, ಓಹಿಯೊ, ಫ್ಲೋರಿಡಾ ಹಾಗೂ ನಾರ್ಥ್ ಕರೋಲಿನಾದಲ್ಲಿ ಮುನ್ನಡೆ ಪಡೆಯುವ ಮೂಲಕ ಟ್ರಂಪ್ ವಿಜಯವನ್ನು ಖಾತ್ರಿ ಪಡಿಸಿದರು. ಬಿಲಿಯನೇರ್, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಡೊನಾಲ್ಡ್ ಟ್ರಂಪ್, ಇದೇ ಮೊದಲ ಬಾರಿಗೆ ಪಕ್ಷವೊಂದರ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಹಿಳೆ ಹಿಲರಿ ಕ್ಲಿಂಟನ್ ವಿರುದ್ಧ ತುಂಬ ಸುಲಭದ ಗೆಲುವನ್ನು ಕಂಡಂತಾಗಿದೆ.

70 ವರ್ಷದ ಟ್ರಂಪ್ ಅಮೆರಿಕಾದ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆ ಆಗಿದ್ದರೆ, ಇಂಡಿಯಾನದ ಗವರ್ನರ್ ಆಗಿರುವ 57 ವರ್ಷದ ಮೈಕ್ ಪೆನ್ಸ್ ಉಪಾಧ್ಯಕ್ಷರಾಗಲಿದ್ದಾರೆ. ಟ್ರಂಪ್ ಗೆಲುವು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮಹತ್ವದ ಬದಲಾವಣೆ ತರುವ ಸಾಧ್ಯತೆಯಿದೆ. ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಇತ್ತೀಚೆಗೆ ಅಮೆರಿಕಾದ ಷೇರು ಮಾರುಕಟ್ಟೆ ಉತ್ತಮ ಏರಿಕೆ ಕಂಡಿತ್ತು. ಇದೀಗ ಹೊಸ ವಿದ್ಯಮಾನಕ್ಕೆ ಜಗತ್ತು ಹೇಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಕಾದುನೋಡಬೇಕಾಗಿದೆ.

English summary
Donald Trump elected as 45th president of USA
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X