Donald Trump: ರಷ್ಯಾ ಅಧ್ಯಕ್ಷ ಪುಟಿನ್ ಕೊಟ್ಟ ಐಡಿಯಾಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫುಲ್ ಖುಷ್

ಅಮೆರಿಕ ಮತ್ತು ರಷ್ಯಾ ನಡುವೆ ಸಂಬಂಧ ಸರಿಯಿಲ್ಲ ಎನ್ನುವ ಮಾತುಗಳು ಈಗ ಸುಳ್ಳಾಗುತ್ತಿವೆ. ಈ ಪೈಕಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ರಷ್ಯಾ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತೊಮ್ಮೆ ಸುಧಾರಣೆಯ ಹಾದಿ ಹಿಡಿದಿದೆ. ಅದರಲ್ಲೂ ಅತ್ತ ಉಕ್ರೇನ್ ವಿರುದ್ಧ ರಷ್ಯಾ ದಾಳಿ ಮಾಡುವ ಸಮಯದಲ್ಲಿ ಕೂಡ ಅಮೆರಿಕ ಮತ್ತು ರಷ್ಯಾ ನಡುವೆ ಚರ್ಚೆ ನಡೆಯುತ್ತಿವೆ. ಈ ಪೈಕಿ ಗಾಜಾ ಪಟ್ಟಿ ಯುದ್ಧ ನಿಲ್ಲಿಸಲು ಡೊನಾಲ್ಡ್ ಟ್ರಂಪ್ ಅವರು ಮಾಡಿಕೊಂಡ ಮಹತ್ವದ ಪ್ಲಾನ್‌ಗೆ ಇದೀಗ ರಷ್ಯಾ ಅಧ್ಯಕ್ಷ ಪುಟಿನ್ ಬೆಂಬಲ ನೀಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ, ಪುಟಿನ್ ಕೊಟ್ಟ ಐಡಿಯಾಗೆ ಟ್ರಂಪ್ ಫಿದಾ ಆಗಿದ್ದಾರೆ.

ಶೀಘ್ರದಲ್ಲೇ ಇಸ್ರೇಲ್ ಹಾಗೂ ಹಮಾಸ್ ಯುದ್ಧಕ್ಕೆ ಬ್ರೇಕ್ ಹಾಕಲು, ಆ ಮೂಲಕ ಗಾಜಾ ಪಟ್ಟಿಯನ್ನು ಶಾಂತಗೊಳಿಸಲು ಟ್ರಂಪ್ ಪ್ಲಾನ್ ಮಾಡಿದ್ದಾರೆ. ಇದಕ್ಕೆ 20 ಅಂಶಗಳ ಯೋಜನೆ ರೂಪಿಸಿದ್ದು, ಇದರ ಭಾಗವಾಗಿ ಗಾಜಾ ಶಾಂತಿ ಮಂಡಳಿ ರಚನೆ ಮಾಡಿದ್ದಾರೆ. ಇನ್ನು ಮಂಡಳಿಗೆ ಸೇರಲು ಹಲವು ದೇಶಗಳಿಗೆ ಆಹ್ವಾನ ನೀಡಲಾಗಿತ್ತು. ಇದೇ ರೀತಿಯಾಗಿ ರಷ್ಯಾಗೆ ಕೂಡ ಆಹ್ವಾನ ನೀಡಲಾಗಿದ್ದು, ಆದಷ್ಟು ಬೇಗ ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಗಳು ಸಾಗಿವೆ. ಆದರೆ ಈ ಕಾರ್ಯಕ್ಕೆ ಭಾರಿ ದೊಡ್ಡ ಪ್ರಮಾಣದಲ್ಲಿ ಹಣ ಬೇಕಿದ್ದು, ಅದನ್ನ ಹೊಂದಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಸಾಕಷ್ಟು ಪ್ಲಾನ್ ಮಾಡಿದ್ದಾರೆ. ಟ್ರಂಪ್ ಅವರ ಪ್ಲಾನ್‌ಗೆ ಇದೀಗ ಪುಟಿನ್ ಜೊತೆಯಾಗಿ ಬೆಂಬಲ ನೀಡಿದ್ದಾರೆ.

Putin

ಪುಟಿನ್ ಐಡಿಯಾಗೆ ಟ್ರಂಪ್ ಫಿದಾ

ಗಾಜಾ ಶಾಂತಿ ಮಂಡಳಿ ಪ್ರವೇಶಿಸಲು ಟ್ರಂಪ್ ಅವರು ಒಂದು ನಿಯಮ ಮುಂದೆ ಇಟ್ಟಿದ್ದಾರೆ, ಅದು ಏನೆಂದರೆ ಮಂಡಳಿ ಸದಸ್ಯರು ಹಣದ ಸಹಾಯ ಮಾಡಬೇಕಿದೆ. ಈಗ ಅದಕ್ಕೆ ಸರಿಯಾದ ಸಲಹೆಯನ್ನು ನೀಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಶಾಂತಿ ಮಂಡಳಿಗೆ ರಷ್ಯಾ ಕಡೆಯಿಂದ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳನ್ನು ಬಳಕೆ ಮಾಡಿ ಎಂದಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಶುರು ಮಾಡಿದ ನಂತರ, ರಷ್ಯಾಗೆ ಸೇರಿದ ಆಸ್ತಿಗಳನ್ನು ಪಾಶ್ಚಿಮಾತ್ಯ ದೇಶಗಳು ಮುಟ್ಟುಗೋಲು ಹಾಕಿ ಆಘಾತ ನೀಡಿದ್ದವು. ಆದರೆ ಇದೀಗ ಅದೇ ಆಸ್ತಿಯನ್ನು ಬಳಸಿ ಗಾಜಾ ಶಾಂತಿ ಮಂಡಳಿಯ ಉದ್ದೇಶ ಪೂರ್ಣಗೊಳಿಸಿ ಎಂದು ಪುಟಿನ್ ಸಲಹೆ ನೀಡಿದ್ದಾರೆ. ಹೀಗೆ ಪುಟಿನ್ ಅವರ ಸಲಹೆಗೆ ಟ್ರಂಪ್ ಕೂಡ ಫುಲ್ ಖುಷ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+