Get Updates
Get notified of breaking news, exclusive insights, and must-see stories!

Donald Trump: ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು 1 ವರ್ಷ, ಯುರೋಪ್ ಒಕ್ಕೂಟ ಗಿರಗಿರ!

ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದು ಇದೀಗ 1 ವರ್ಷ ತುಂಬಿದೆ. ಇಂತಹ ಸಮಯದಲ್ಲಿ ಅಮೆರಿಕದ ಮಿತ್ರ ರಾಷ್ಟ್ರಗಳಲ್ಲಿ ಖುಷಿಗಿಂತ ನೋವೇ ಹೆಚ್ಚಾಗಿದೆ, ಅದ್ಯಾಕೆ ಅಂದ್ರೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಮೆರಿಕದ ಸಾಲು ಸಾಲು ಮಿತ್ರ ರಾಷ್ಟ್ರಗಳು ಸಮಸ್ಯೆ ಸುಳಿಗೆ ಸಿಲುಕಿವೆ. ಪ್ರಮುಖವಾಗಿ ಯುರೋಪ್ ಒಕ್ಕೂಟ ಟ್ರಂಪ್ ಅವರ ಕಾಲಘಟ್ಟದಲ್ಲಿ ಭಾರಿ ದೊಡ್ಡ ನಷ್ಟವನ್ನು ಅನುಭವಿಸುವ ಪರಿಸ್ಥಿತಿಗೆ ಬಂದಿದೆ. ಒಂದು ಕಡೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಪರಿಣಾಮ ಇಡೀ ಯುರೋಪ್ ನಲುಗಿ ಹೋಗಿದ್ದರೆ, ಇನ್ನೊಂದು ಕಡೆ ಅಮೆರಿಕ ಹೇರಿಕೆ ಮಾಡುತ್ತಾ ಇರುವ ಅವೈಜ್ಞಾನಿಕ ತೆರಿಗೆ ಇನ್ನಷ್ಟು ಸಂಕಷ್ಟ ತರುತ್ತಿದೆ.

ಅಮೆರಿಕ ಅಧ್ಯಕ್ಷರ ಸ್ಥಾನಕ್ಕೆ ದೊಡ್ಡ ಶಕ್ತಿ ಇದ್ದು, ಇಂತಹ ಬಹುದೊಡ್ಡ ಸ್ಥಾನಕ್ಕೆ ಟ್ರಂಪ್ ಬರೋಬ್ಬರಿ 2 ಬಾರಿ ಆಯ್ಕೆ ಆಗಿದ್ದಾರೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದು ಮೊದಲ ಬಾರಿ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ 2020ರ ಚುನಾವಣೆ ಸೋತಿದ್ದರು. ಆ ನಂತರ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಬೀಗಿರುವ ಟ್ರಂಪ್ ಅವರು ಪ್ರಪಂಚಕ್ಕೆ ನಾನೇ ಬಾಸ್ ಎಂದು ಪರೋಕ್ಷವಾಗಿ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಅದು ಬಿಡಿ ಶತಮಾನಗಳ ಕಾಲ ಅಮೆರಿಕ ಜೊತೆಗೆ ನಿಂತಿರುವ ಇದೇ ಯುರೋಪ್ ಒಕ್ಕೂಟದ ದೇಶಗಳಿಗೂ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳು ದೊಡ್ಡ ತಲೆನೋವು ತರುತ್ತಿದೆ.

Donald Trump Completed 1 Year In 2nd Term And This Is What The Opinion From Europe

ಯುರೋಪ್ ಒಕ್ಕೂಟ ಗಿರಗಿರ!

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ಯುರೋಪ್ ಒಕ್ಕೂಟದ ದೇಶಗಳ ಜೊತೆಗೆ ಟ್ಯಾಕ್ಸ್ ವಾರ್ ಶುರು ಮಾಡಿದ್ದರು. ಅಮೆರಿಕ ಮತ್ತು ಯುರೋಪ್ ಇನ್ನೇನು ದೂರ ಆಗಿಬಿಡಬಹುದು ಎನ್ನುವ ಹಂತಕ್ಕೆ ಈ ತಿಕ್ಕಾಟ ಹೋಗಿತ್ತು. ಆ ನಂತರ ಒಂದಷ್ಟು ರಾಜಿ & ಸಂಧಾನ ನಡೆದು ವ್ಯಾಪಾರ, ವಹಿವಾಟು ಈಗ ಮುಂದುವರಿದಿದೆ. ಇದರ ಜೊತೆಗೆ ಉಕ್ರೇನ್ ವಿಚಾರವಾಗಿ ಯುರೋಪ್ ದೇಶಗಳ ಎದುರು ಟ್ರಂಪ್ ಅವರು ಇಟ್ಟಿದ್ದ ಡಿಮ್ಯಾಂಡ್ ಕೂಡ ಭಾರಿ ದೊಡ್ಡ ತಲ್ಲಣಕ್ಕೆ ಕಾರಣವಾಗಿತ್ತು. ಜೋ ಬೈಡನ್ ಇದ್ದ ಸಮಯದಲ್ಲಿ ಉಕ್ರೇನ್‌ಗೆ ಯುದ್ಧದಲ್ಲಿ ಆರ್ಥಿಕ ನೆರವು ನೀಡುತ್ತಿತ್ತು ಅಮೆರಿಕ. ಆದರೆ ಟ್ರಂಪ್ ಅವರ ಎಂಟ್ರಿ ಆಗುತ್ತಿದ್ದಂತೆ ಎಲ್ಲಾ ಬದಲಾಗಿತ್ತು.

ಯುರೋಪ್ ದೇಶಗಳಿಗೆ ಭವಿಷ್ಯದ ಚಿಂತೆ

ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಸಹಾಯ ನಿಲ್ಲಿಸಲು ಮುಂದಾಗಿದ್ದ ಟ್ರಂಪ್ ಅವರ ಆಡಳಿತವು, ಕೊನೆಗೆ ಆರ್ಥಿಕ ಸಂಕಷ್ಟದಲ್ಲಿ ಒದ್ದಾಡುತ್ತಿರುವ ಯುರೋಪ್ ಒಕ್ಕೂಟದ ದೇಶಗಳೇ ಮುಂದೆ ಬಂದು ಉಕ್ರೇನ್‌ಗೆ ಸಹಾಯ ಮಾಡುವಂತೆ ಮಾಡಿದ್ದರು. ಉಕ್ರೇನ್ ಹಾಗೂ ರಷ್ಯಾ ಯುದ್ಧವು ಯುರೋಪ್ ದೇಶಗಳಿಗೆ ನುಂಗಲಾರದ ತುತ್ತಾಗಿದೆ. ಏಕೆಂದರೆ ಒಂದು ಕಡೆ ಈ ಯುದ್ಧದಲ್ಲಿ ರಷ್ಯಾ ಗೆದ್ದುಬಿಟ್ಟರೆ ಅದು ಯುರೋಪ್ ಭವಿಷ್ಯಕ್ಕೆ ಮುಳ್ಳು ಎಂಬುದು ಅವರ ಚಿಂತೆ. ಹಾಗೇ ಇನ್ನೊಂದು ಕಡೆ ಉಕ್ರೇನ್ ಸೇನೆಗೆ ನೆರವು ನೀಡಲು ತಮ್ಮಲ್ಲೇ ಹಣ ಇಲ್ಲದೆ ಯುರೋಪ್ ಒಕ್ಕೂಟದ ದೇಶಗಳು ಪರದಾಡುತ್ತಿವೆ.

ಗ್ರೀನ್‌ಲ್ಯಾಂಡ್ ವಿಚಾರದಲ್ಲೂ ಕಿರಿಕ್

ಈ ಎಲ್ಲಾ ಒತ್ತಡಗಳ ನಡುವೆ ಕೂಡ ಈಗ ಉಕ್ರೇನ್‌ಗೆ ಒಂದಷ್ಟು ಸಹಾಯ ಮಾಡುತ್ತಿವೆ. ಈ ಎಲ್ಲಾ ಘಟನೆಗಳ ಜೊತೆಗೆ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಟ್ರಂಪ್ ಅವರ ವರ್ತನೆ ಕೂಡ ಯುರೋಪ್ ನಲುಗಿ ಹೋಗುವಂತೆ ಮಾಡಿತ್ತು. ಯುರೋಪ್ ದೇಶಗಳ ವಿರುದ್ಧವೇ ಗುಡುಗಿ, ಗ್ರೀನ್‌ಲ್ಯಾಂಡ್ ಮೇಲೆ ನೇರ ಸೇನಾ ದಾಳಿ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದರು. ಆ ಮೂಲಕ ನಮಗೆ ಗ್ರೀನ್‌ಲ್ಯಾಂಡ್ ಬೇಕೆ ಬೇಕು ಎಂಬುದು ಟ್ರಂಪ್ ಅವರ ಹಠ ಆಗಿತ್ತು. ಆದರೆ, ಅಂತಿಮವಾಗಿ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ ಡೊನಾಲ್ಡ್ ಟ್ರಂಪ್. ನ್ಯಾಟೋ ಒಕ್ಕೂಟದ ನಾಯಕರ ಜೊತೆ ಮೀಟಿಂಗ್ ಮಾಡಿದ ನಂತರ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಮಾತು ಬದಲಾಯಿಸಿದ್ದಾರೆ ಎನ್ನಲಾಗಿದೆ ಆದರೂ, ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+